ಮನೆ Latest News ನನಗೆ ನೋಟೀಸ್ ಬಂದಿದ್ದಕ್ಕೆ ಸಂತೋಷ ಆಗಿದೆ; ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ

ನನಗೆ ನೋಟೀಸ್ ಬಂದಿದ್ದಕ್ಕೆ ಸಂತೋಷ ಆಗಿದೆ; ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ

0

ಬೆಂಗಳೂರು; ನನಗೆ ನೋಟೀಸ್ ಬಂದಿದ್ದಕ್ಕೆ ಸಂತೋಷ ಆಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ತಡರಾತ್ರಿ ನೋಟೀಸ್ ತಲುಪಿದೆ. ನೋಟೀಸ್ ಬಂದಿದ್ದಕ್ಕೆ ಸಂತೋಷ ಆಗಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡರು ಕರೆ ಮಾಡಿ ಮಾತಾಡಿದ್ದಾರೆ. ರೇಣುಕಾಚಾರ್ಯ ಜೀವನದಲ್ಲಿ ಭಯ ಬೀಳಲ್ಲ, ಗಾಬರಿ ಆಗಲ್ಲ. ಬಿಜೆಪಿಯಲ್ಲಿ ಆಗಿರುವ ಗೊಂದಲ, ಪಕ್ಷ ವಿರೋಧಿ ಚಟುವಟಿಕೆ ಎಲ್ಲದರ ಬಗ್ಗೆಯೂ ಸಮರ್ಪಕ ಉತ್ತರ ಕೊಡುತ್ತೇನೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ವಿಧಾನಸಭೆ ಹೊರಗೆ ಒಳಗೆ ಟೀಕೆ ಮಾಡಿದವರಿಗೆ ಅಂದು ನೋಟೀಸ್ ಕೊಟ್ಟಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದಿದ್ದಾರೆ.

ಯಡಿಯೂರಪ್ಪನವರನ್ನು ಎರಡು ಬಾರಿ ಇಳಿಸಿದ್ದಕ್ಕೆ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಎರಡು ಬಾರಿ ಜೈಲಿಗೆ ಹೋಗಿದ್ದೇನೆ, ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನಂತಹವನಿಗೆ ನೋಟೀಸ್ ಕೊಡುತ್ತಾರಲ್ಲಾ. ಯಡಿಯೂರಪ್ಪನವರನ್ನು ಟೀಕೆ ಮಾಡಿದವರನ್ನು ಅಂದು ಉಚ್ಛಾಟನೆ ಮಾಡಿದ್ದರೆ ಬಿಜೆಪಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ನಾನು ದಾಖಲೆ ಸಮೇತ ಉತ್ತರ ಕೊಡುತ್ತೇನೆ. ಯಡಿಯೂರಪ್ಪನವರಿಗೆ ಅಪಮಾನ ಮಾಡಿದವರಿಗೆ ಯಾಕೆ ನೋಟೀಸ್ ಕೊಡಲಿಲ್ಲ?. ನಾನು ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ಬಗ್ಗೆ ಟೀಕೆ ಮಾಡಿಲ್ಲ. ಯಡಿಯೂರಪ್ಪ ರಾಜ್ಯಾಧ್ಯಕ್ಷ, ಸಿಎಂ ಆಗಿದ್ದಾಗ, ವಿಜಯೇಂದ್ರ‌ ಅಧ್ಯಕ್ಷ ಆದಾಗ ಟೀಕೆ ಮಾಡಿದವರು ಬೊಮ್ಮಾಯಿ‌ ಸಿಎಂ ಆದಾಗ, ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ಕಟೀಲ್ ಅಧ್ಯಕ್ಷ ಆಗಿದ್ದಾಗ ಯಾಕೆ ಬಾಯಿಗೆ ಬೀಗ ಹಾಕಿಕೊಂಡಿದ್ದೀರಿ?. ಇವರಿಗೆ ಕೆಲವರು ಕುಮ್ಮಕ್ಕು ಕೊಡುತ್ತಿದ್ದಾರೆ. ನನ್ನ ಕೆಲವರು ಕೇಂದ್ರದಲ್ಲಿ ರಕ್ಷಣೆ ಮಾಡುತ್ತಿದ್ದಾರೆ ಅಂತಾ ಯತ್ನಾಳ್ ಹೇಳಿದ್ದಾರೆ, ಅವರ ಹೆಸರು ಹೇಳಬೇಕು. ಇಲ್ಲಿ ನಾಟಕ ಮಾಡುವುದು ಬೇಡ. ನಾನು ಪಲಾಯನವಾದಿ ಅಲ್ಲ. ರಾಜ್ಯಾಧ್ಯಕ್ಷರನ್ನು ಟೀಕೆ ಮಾಡಿದರೆ ರೇಣುಕಾಚಾರ್ಯ ಒಳ್ಳೆಯವನಾ?. ನೀವೇ ರಾಷ್ಟ್ರೀಯ ನಾಯಕರು ವಿಜಯೇಂದ್ರ‌ರನ್ನು ಅಧ್ಯಕ್ಷ ಮಾಡಿದ್ದೀರಿ. ಯಡಿಯೂರಪ್ಪ ಟೀಕೆ ಮಾಡಿದವರ ಉಚ್ಛಾಟನೆ ಇಲ್ಲ. ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ.

ವಿಜಯೇಂದ್ರ‌ ವಿರುದ್ಧ ಟೀಕೆ ಮಾಡಿದರೆ ರೇಣುಕಾಚಾರ್ಯ ಒಳ್ಳೆಯವನು.  ನನ್ನನ್ನು ಕೆಲವರು ಬಹಳ ವೈಭವೀಕರಣ ಮಾಡಿದರು. ಪಕ್ಷ ಸಂಘಟನೆಗೆ ನನ್ನದೇ ಆದ ಕೊಡುಗೆ ಇದೆ. ನನ್ನ ಯಡಿಯೂರಪ್ಪ ವಿರುದ್ಧ ಗೋವಾ, ಚೆನ್ನೈಗೆ ಕಳುಹಿಸಿದ ಮಾಹಾನುಭಾವರು ಇದ್ದಾರೆ. ಆಗ ರೇಣುಕಾಚಾರ್ಯ ಒಳ್ಳೆಯವನಾಗಿದ್ದನು. ನನ್ನನ್ನು ಆಗ ಚಾಕು ರೀತಿ ಬಳಸಿಕೊಂಡರು. ನಾನು ಯಡಿಯೂರಪ್ಪ ವಿರುದ್ಧ ಮಾತಾಡಿದ್ದು ತಪ್ಪು, ಗೋವಾಕ್ಕೆ ಹೋಗಿದ್ದು ತಪ್ಪು. ನನ್ನ ಕೆಲವರು ಪ್ರಚೋದನೆ ಮಾಡಿದ ಮಹಾನ್ ನಾಯಕರು ಇದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನನ್ನ ವೆಸ್ಟ್ ಎಂಡ್ ಹೋಡೆಲ್ ಗೆ ಕರೆಸಿದ್ದು, ಏನೇನು ಮಾತಾಡಿದ್ದು ಎಲ್ಲವೂ ದಾಖಲೆ ಇದೆ. ರಾಷ್ಟ್ರೀಯ ನಾಯಕರಿಗೆ ಕರ್ನಾಟಕದ ಬಗ್ಗೆ ತಪ್ಪು ಮಾಹಿತಿಯನ್ನು ಕೊಡುತ್ತಿದ್ದಾರೆ. ಎತ್ತಿ ಕಟ್ಟುವ ಹುನ್ನಾರ ಯಾರದ್ದು ಅಂತಾ ಹೊರಬರಬೇಕು.ಕೆಲವರು ನಾಟಕ, ಡ್ರಾಮಾ ಮಾಡುತ್ತಿದ್ದಾರೆ. ಇನ್ನೂ ಬಹಳಷ್ಟು ಜನ ಮಾತಾಡುವವರಿಗೂ ನೋಟೀಸ್ ಕೊಡಬೇಕು.ನಮ್ಮ ಪಕ್ಷದಲ್ಲಿ ಬೆಂಗಳೂರಿನಲ್ಲಿ ಒಬ್ಬರು ಮಹಾನಾಯಕ ಇದ್ದಾರೆ. ರೇಣುಕಾಚಾರ್ಯನನ್ನು ಉಚ್ಛಾಟನೆ ಮಾಡಿಸುತ್ತೇವೆ ಅಂತಾ ಹೇಳಿದ್ದಾರೆ. ಎಂದ್ರು.