ಮನೆ Latest News ಹನಿಟ್ರಾಪ್ ಪ್ರಕರಣವನ್ನು CBI ಕೊಡಬೇಕು ; ವಿಧಾಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಹನಿಟ್ರಾಪ್ ಪ್ರಕರಣವನ್ನು CBI ಕೊಡಬೇಕು ; ವಿಧಾಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

0

ಬೆಂಗಳೂರು; ವಾಲ್ಮೀಕಿ ಪ್ರಕರಮಕ್ಕೆ ಸಂಬಂಧಪಟ್ಟಂತೆಗ್ಗೆ ಪಾದಯಾತ್ರೆ ಮಾಡಬೇಕು ಎಂಬ ಹಲವರು ಒತ್ತಾಯ ಮಾಡಿದ್ದೇವೆ.ನಾವು ಸಹ ಹೈಕಮಾಂಡ್ ನಾಯಕರು ಮುಂದೆ ಪಾದಯಾತ್ರೆ ಮಾಡಬೇಕು ಅಭಿಪ್ರಾಯ ತಿಳಿಸಿದ್ದೇವೆ.ಹೀಗಾಗಿ ಹೈಕಮಾಂಡ್ ನಾಯಕರು ಸಹ ವಾಲ್ಮೀಕಿ ನಿಗಮದ ಪಾದಯಾತ್ರೆಗೆ ಒಪ್ಪಿದ್ದಾರೆ..ಸದ್ಯದಲ್ಲೇ ಪಾದಯಾತ್ರೆ ಸಿದ್ಧತೆ ಬಗ್ಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಿಳಿಸುತ್ತಾರೆ.ಇದು ಯತ್ನಾಳ ಪಾದಯಾತ್ರೆ ಅಂತ ಬರಲ್ಲ, ಎಲ್ಲಾ ಬಿಜೆಪಿ ನಾಯಕರು ಸೇರಿ ಪಾದಯಾತ್ರೆ ಮಾಡುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಪಕ್ಷದ ಮೂಲಕ ಹೋರಾಟ ನಡೆಯುತ್ತದೆ.ದಿನಾಂಕ ವನ್ನು ರಾಜ್ಯಾಧ್ಯಕ್ಷರು ತೀರ್ಮಾನ ಮಾಡುತ್ತಾರೆ.ನಾಳೆ ಯತ್ನಾಳ್ ಕೂಡ ರಾಜ್ಯಾಧ್ಯಕ್ಷ ಆಗಬಹುದು.ಆಗ ಅವರ ನೇತೃತ್ವದಲ್ಲೇ ಹೋಗಬೇಕಾಗುತ್ತದೆ.ಇಲ್ಲಿ ವ್ಯಕ್ತಿ ಕ್ರೆಡಿಟ್ ಬರಲ್ಲ.ಪಕ್ಷದ ಮೂಲಕ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣ್ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಇನ್ನುಹನಿಟ್ರಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇತ್ತೀಚೆಗೆ ಹನಿಟ್ರಾಪ್ ಸದ್ದು ಬರ್ತಿದೆ.ಈಗಾಗಲೇ ಕೆಲವರನ್ನ ಬಂಧನ ಮಾಡಿದ್ದಾರೆ.ಅನೇಕರು ಬಂಧನ ಆಗಿದ್ದು, ಬಂಧನ ಆದವರು ಪ್ರಿಯಾಂಕಾ ಖರ್ಗೆಗೆ ಕೆಟ್ಟ ಹೆಸರು ಬರಬಾರದು.ಅದಕ್ಕಾಗಿ ನಾವೇ ಸೆರೆಂಡರ್ ಆಗ್ತಿದ್ದೇವೆ ಅಂತ ಹೇಳಿದ್ದಾರೆ.ನಾವ್ಯಾರು ಕೂಡ ಪ್ರಿಯಾಂಕ್ ಖರ್ಗೆ ಹೆಸರೇ ಹೇಳಲಿಲ್ಲ.ಈಗ ಹನಿಟ್ರಾಪ್ ಪ್ರಕರಣ CBI ಕೊಡಬೇಕು ಅಂತ ಸ್ಥಳೀಯವಾಗಿ ಒತ್ತಾಯವಿದೆ.ಸರ್ಕಾರ ಇದನ್ನ ಸೀರಿಯಸ್ ಆಗಿ ತೆಗೆದುಕೊಂಡು CBI ತನಿಖೆಗೆ ನೀಡಬೇಕು.ಯಾರೂ ಕೂಡ ಯಾರ ಹೆಸರನ್ನೂ ಹೇಳಲಿಲ್ಲ.ಅರೆಸ್ಟ್ ಆದವರೆಲ್ಲಾ ಪ್ರಿಯಾಂಕಾ ಖರ್ಗೆ ಹೆಸರು ಬರಬಾರದು ಅಂತಿದ್ದಾರೆ.ಅವರ ಬೆಂಬಲಿಗರೇ ಇರಬಹುದು.ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಅಲ್ಲ.ನಿಷ್ಠಾವಂತ ಅಂತ ಹೇಳ್ತಿರೋರ ಬೆಂಬಲಿಗರಿರ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರ ; ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದ ಗೋವಿಂದ ಕಾರಜೋಳ

ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ದಲಿತರಿಗೆ ಅನ್ಯಾಯ ಮಾಡಿ ಆ ಹಣವನ್ನು ಚುನಾವಣೆಗೆ ಬಳಸಿದ್ದಾರೆ.ಯಾವ ಯಾವ ಬೂತ್ ಗೆ ಎಷ್ಟು ಹಣ ಹಂಚಿದ್ದಾರೆ ಎನ್ನೋದು ಸಿಕ್ಕಿದೆ.21 ಕೋಟಿ ಬಗ್ಗೆ ಸಂಪೂರ್ಣ ದಾಖಲೆ ಸಿಕ್ಕಿದೆ ಎಂದಿದ್ದಾರೆ.ಚುನಾವಣೆ ಆಯೋಗ ಹೇಳಿದ್ದಕ್ಕಿಂತ ಹೆಚ್ಚು ಚುನಾವಣೆಗೆ ಬಳಸಿದ್ದಾರೆ.ಇದಕ್ಕೆ ಕೇವಲ ನಾಗೇಂದ್ರ ಮಾತ್ರ ಅಲ್ಲ. ಸಿಎಂ ಸಿದ್ದರಾಮಯ್ಯ ನೈತಿಕತೆ ಹೊರಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಇನ್ನು  ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಿದ್ದು ದುರ್ದೈವ ಎಂದ ಅವರು ರಾಹುಲ್ ವಿದೇಶಕ್ಕೆ ಹೋಗಿ ಮೀಸಲಾತಿ ಬಗ್ಗೆ ಮಾತಾಡಿದ್ದಾರೆ.ಒಂದು ವ್ಯವಸ್ಥೆ ಹೇಗಿದೆ ಎನ್ನೋದೆ ಅವರಿಗೆ ಗೊತ್ತಿಲ್ಲ. ಅವರೊಬ್ಬ ಅಪ್ರಬುದ್ಧ. ಮೀಸಲಾತಿ ಬಗ್ಗೆ ಮಾತಾಡುವ ಮುನ್ನ ಜಾತಿ ವ್ಯವಸ್ಥೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.ಮೀಸಲಾತಿ ಸಂವಿಧಾನ ನೀಡಿದ ಒಂದು ವ್ಯವಸ್ಥೆ.ವಿದೇಶಕ್ಕೆ ಹೋಗಿ ಚೀನಾದಲ್ಲಿ ಜಾಬ್ ಸಿಗುತ್ತದೆ. ಭಾರತದಲ್ಲಿ ಇಲ್ಲ ಎನ್ನುತ್ತಾರೆ.ಇವರು ಯಾರ ಪರ ಇದ್ದಾರೆ?೧೪೦ ಕೋಟಿ ಜನರಿಗೆ ರಾಹುಲ್ ಯಾರ ಪರ ಎನ್ನುವ ಪ್ರಶ್ನೆ ಮೂಡಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.