ಮಂಗಳೂರಿನ ಕುಡುಪಿನಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಕೊಲೆಯಾದ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಂತ ಆ ಗುಂಪಿನ ಕೆಲವರು ಪೊಲೀಸರ ಬಳಿ ಹೇಳಿದ್ರು. ಆ ವ್ಯಕ್ತಿ ಪಾಕಿಸ್ತಾನ ಜಿಂದಾಬಾದ್ ಅಂದ ಅನ್ನೋದು ನನ್ನ ಹೇಳಿಕೆ ಅಲ್ಲ. ಪಾಕ್ ಪರ ಘೋಷಣೆ ಕೂಗಿದ ಅನ್ನೋದು ಹಲ್ಲೆ ಮಾಡಿದವರ ಹೇಳಿಕೆ. ಇದನ್ನು ನಾನೇ ಹೇಳಿದೆ ಅಂತ ಮಾದ್ಯಮಗಳಲ್ಲಿ ಬಂದಿದೆ. ಇದರ ಬಗ್ಗೆ ನಾನು ಈ ಸ್ಪಷ್ಟೀಕರಣ ಕೊಡಲು ಬಯಸುತ್ತೇನೆ. ಸದ್ಯ ತನಿಖೆ ನಡೀತಿದೆ.ತನಿಖೆ ನಂತರ ಏನಾಗಿತ್ತು ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.
ಈಗಾಗಲೇ 20 ಜನರನ್ನ ಬಂಧಿಸಲಾಗಿದೆ. ಬಂಧನವಾಗಿರೊರು ಹೇಳಿದ್ದು ಹಾಗೆ.ಆ ರೀತಿ ಮಾಡಿದ ಹೊಡೆದೆವು ಎಂದು ಅವರು ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಆ ಗುಂಪಿನವರು ಹಾಗೆ ಹೇಳ್ತಿದ್ದಾರೆ. ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಕೂಡ ಕನ್ಫರ್ಮ್ ಆಗಬೇಕಿದೆ. ತನಿಖೆಯಲ್ಲಿ ಪೊಲೀಸ್ ಲೋಪ ಇದ್ದರೂ ಬರುತ್ತೆ . ಅಲ್ಲಿನ ಸಮುದಾಯದವರಿಗೆ ಹೇಳೋದಿಷ್ಟೇ. ನಾವು ಸೀರಿಯಸ್ ಇದ್ದೇವೆ. ಸಿರೀಯಸ್ ಆಗಿ ತನಿಖೆ ಮಾಡ್ತೇವೆ ಎಂದರು.
ಪಹಲ್ಗಾಮ್ ವಿಚಾರದಲ್ಲಿ ಅನಗತ್ಯ ಹೇಳಿಕೆಗಳಿಗೆ ಹೈಕಮಾಂಡ್ ಬ್ರೇಕ್ ವಿಚಾರದ ಬಗ್ಗೆ ಮಾತನಾಡಿದು ಅವರು ಒಳ್ಳೆಯದಲ್ಲವಾ ಇದು? ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ರೆ ಗೊಂದಲ ಆಗುತ್ತೆ. ಅದಕ್ಕಾಗಿ ಈ ಸೂಚನೆ ಕೊಡಲಾಗಿದೆ. ಹೈಕಮಾಂಡ್ ಏನು ಹೇಳಿದೆಯೋ ಅದರಂತೆ ಕೇಳ್ತೇವೆ ಎಂದರು, ಸಚಿವ ಸಂಪುಟ ಸಭೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೇ 9 ರಂದು ಕರೆದಿರೋದು ಸಾಮಾನ್ಯ ಸಚಿವ ಸಂಪುಟ ಸಭೆ. ಜಾತಿ ಜನಗಣತಿ ಬಗ್ಗೆ ಚರ್ಚೆಗೆ ಬೇರೆ ದಿನ ಸಂಪುಟ ಸಭೆ ಕರೆಯಬಹುದು ಎಂದು ತಿಳಿಸಿದ್ರು.
ಕೇಂದ್ರ ಸರ್ಕಾರ ಯುದ್ಧ ಮಾಡುವ ಪ್ರಸ್ತಾಪ ಮಾಡಿಲ್ಲ; ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ
ಬೆಂಗಳೂರು; ಕೇಂದ್ರ ಸರ್ಕಾರ ಯುದ್ಧ ಮಾಡುವ ಪ್ರಸ್ತಾಪ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
36 ಗಂಟೆ ಒಳಗೆ ಭಾರತ ನಮ್ಮ ಮೇಲೆ ಯುದ್ಧ ಮಾಡುತ್ತದೆ ಎಂಬ ಪಾಕ್ ಸಚಿವ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಯುದ್ಧ ಮಾಡುವ ಪ್ರಸ್ತಾಪ ಮಾಡಿಲ್ಲ. ಪಾಕಿಸ್ತಾನದವರಿಗೆ ಭಾರತ ಯುದ್ಧ ಮಾಡುತ್ತದೆ ಅಂತ ಕಾಂಗ್ರೆಸ್ ನವರು ಹೇಳಿರಬೇಕು. ಕಾಂಗ್ರೆಸ್ ನವರು ಪಾಕಿಸ್ತಾನದಲ್ಲಿ ಸಾಕಷ್ಟು ಪಾಪ್ಯುಲರ್ ಆಗಿದ್ದಾರೆ. ಪ್ರಧಾನಿಯವರನ್ನು ಅವಹೇಳನ ಮಾಡುವ ರೀತಿ ತಲೆ ತೆಗೆದು ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ ತಲೆ ಇಲ್ಲ ಎಂದು ಬಿಂಬಿಸಲು ಹೋಗಿದ್ದಾರೆ. ಒಂದು ದೇಶದ ಪ್ರಧಾನಿಯವರನ್ನು ಈ ರೀತಿ ಬಿಂಬಿಸುವುದು ಸರಿಯಲ್ಲ ಎಂದಿದ್ದಾರೆ.
ತಲೆ ಇಲ್ಲದ ಕಾಂಗ್ರೆಸ್ ನವರು ಇದಕ್ಕಿಂತ ಒಳ್ಳೆಯ ಕೆಲಸ ಮಾಡಲು ಹೇಗೆ ಸಾಧ್ಯ?. ಕೆಲವರಿಗೆ ತಲೆ ಇದೆ, ಮೆದುಳು ಇಲ್ಲ. ಕೆಲವರಿಗೆ ಮೆದುಳು ಇದೆ, ಆದ್ರೆ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲದ ರೀತಿ ಮಾತನಾಡುತ್ತಿದ್ದಾರೆ. ಇಡೀ ಭಾರತದ ಜನ ಕಾಂಗ್ರೆಸ್ ವಿರುದ್ಧ ಇದ್ದಾರೆ. ಹೇಡಿಗಳು ಕಾಂಗ್ರೆಸ್ ನವರು ಧೈರ್ಯ ಇದ್ದರೆ ಎದುರುಗಡೆ ಹೋರಾಟ ಮಾಡಬೇಕು. ಅದು ಬಿಟ್ಟು ಇಂತಹ ಪೋಸ್ಟರ್ ಬಿಡುಗಡೆ ಮಾಡಬಾರದು. ನಮಗೆ ಸಿಂಧೂ ನದಿ ಬೇಡ, ಸಿದ್ದರಾಮಯ್ಯ ಬೇಕು ಅಂತ ಪಾಕಿಸ್ತಾನದವರು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೇಜಾವರ ಶ್ರೀಗಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪೇಜಾವರ ಶ್ರೀಗಳ ಬಗ್ಗೆ ಹೆಚ್ಚು ಮಾತನಾಡುವುದು ಬೇಡ.ಈ ನಡುವೆ ಸಿದ್ದರಾಮಯ್ಯ ನಾಲಿಗೆ ಬಹಳ ಹೊಲಸು ಆಗಿದೆ. ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿ ಮಹಿಳಾ ಮೋರ್ಛಾದವರು ಸಿಎಂ ಹೇಳಿಕೆ ಖಂಡಿಸಿ ಕಪ್ಪು ಪಟ್ಟಿ ತೋರಿಸಿ ಪ್ರತಿಭಟಿಸಿದ್ದಕ್ಕೆ ನಿಮಗೆ ಸಿಟ್ಟು ಬಂದಿದೆ. ಒಂದು ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಕೈ ಮಾಡುವಷ್ಟು ಸಿಟ್ಟು ಬಂದಿದೆ. ಆದರೆ ಅಷ್ಟು ಸಿಟ್ಟು 26 ಜನರನ್ನ ಸಾಯಿಸಿದಾಗ ನಿಮಗೆ ಯಾಕೆ ಬರಲಿಲ್ಲ. ನೀವು ಇಲ್ಲಿ ಒಲೈಕೆ ಸರಿ, ಆದರೆ ಪಾಕಿಸ್ತಾನದ ಯಾಕೆ ಒಲೈಕೆ ಮಾಡುತ್ತಿದ್ದೀರಾ?. ಇದನ್ನು ನೋಡಿದರೆ ಕಾಂಗ್ರೆಸ್‌ನವರು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದಾರೆ ಅಂತ ಹೇಳಬೇಕಾಗುತ್ತದೆ. ಪಾಕಿಸ್ತಾನದ ಕೆಟ್ಟ ಪ್ರವೃತ್ತಿ ಕಾಂಗ್ರೆಸ್ ನವರಿಗೂ ಇದೆ ಅಂತ ಹೇಳಬೇಕಾಗುತ್ತದೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ. ಆದರೆ ನಮ್ಮವರ ಪ್ರಾಣ ತೆಗೆಯುವ ಕೆಲಸ ಮಾಡಿದರೆ ನಾವು ಸುಮ್ಮನೆ ಇರಬೇಕಾ?. ಇಡೀ ಪ್ರಪಂಚದಲ್ಲಿ ಪಾಕಿಸ್ತಾನ ಭಯೋತ್ಪಾದಕ ದೇಶ ಅಂತ ಗೊತ್ತಿದೆ. ಕೈ ಕಟ್ಟಿ ಕೂರಲು ಹೇಡಿಗಳು ಕಾಂಗ್ರೆಸ್ ನವರು .ಬಿಜೆಪಿಯವರೂ ಅಲ್ಲ, ಮೋದಿಯೂ ಅಲ್ಲ ಎಂದು ತಿಳಿಸಿದ್ದಾರೆ.