ಬೆಂಗಳೂರು; ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಬ್ಬಿನಾಲೆ ಅರಣ್ಯ ಪ್ರದೇಶಲ್ಲಿ ನಿನ್ನೆ ಸಂಜೆ ಎಎನ್ಎಫ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಾಗ ನೇತ್ರಾವತಿ ನಕ್ಸಲ್ ದಳದ ನಾಯಕ ವಿಕ್ರಮ್ ಗೌಡ ಎಎನ್ಎಫ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಕಬ್ಬಿನಾಲೆಯ ಪೀತೆ ಬೈಲ್ ನಲ್ಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ಚಲನವನಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾಗ ನಕ್ಸಲರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಎಎನ್ ಎಫ್ ಸಿಬ್ಬಂದಿ ಮೇಲೆ ವಿಕ್ರಂ ಗೌಡ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಎಎನ್ ಎಫ್ ಸಿಬ್ಬಂದಿ ಪ್ರತಿದಾಳಿ ಮಾಡಿದಾಗ ವಿಕ್ರಂ ಗೌಡ ಸಾವನ್ನಪ್ಪಿದ್ದಾನೆ. ಉಳಿದ ಮೂವರು ಪರಾರಿಯಾಗಿದ್ದು ಅವರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಈ ಬಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ವಿಕ್ರಮ್ ಗೌಡ ಅನ್ನೋ ಗ್ರೇಡೆಡ್ ನಕ್ಸಲ್‌ನನ್ನ ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಅವರನ್ನು ಪೊಲೀಸರು ಹುಡುಕ್ತಿದ್ರು, ತಪ್ಪಿಸಿಕೊಂಡು ಓಡಾಡ್ತಿದ್ರು. ಅನೇಕ ಎನ್‌ಕೌಂಟರ್ ಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ರು. ನಿನ್ನೆ ಸಂಜೆ ವಿಕ್ರಮ್ ಗೌಡ ಎನ್‌ಕೌಂಟರ್ ಆಗಿದೆ. ನಿನ್ನೆ ಪೊಲೀಸರ ಮೇಲೆ ಅವರು ಫೈರ್ ಮಾಡಿದ್ರು. ಪೊಲೀಸರು ರಿಟರ್ನ್ ಆಗಿ ಫೈರ್ ಮಾಡಿ ಎನ್‌ಕೌಂಟರ್ ಮಾಡಿದ್ದಾರೆ. ಅವರ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ. ವಿಕ್ರಮ್ ಗೌಡ ಸಕ್ರಿಯರಾಗಿದ್ರು ಅಂತನೇ ಹುಡುಕ್ತಿದ್ರು ಎಂದಿದ್ದಾರೆ.
ವಿಕ್ರಮ್ ಗೌಡ ಚಲನವಲನಗಳನ್ನು ಪೊಲೀಸರು ಗಮನಿಸ್ತಿದ್ರು, ನಿಗಾ ಇಟ್ಟಿದ್ರು. ಈಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ನಾವೂ ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅನ್ಕೊಂಡಿದ್ವಿ. ಆದ್ರೆ ಕಳೆದ ವಾರ ರಾಜು ಮತ್ತು ಲತಾ ಅನ್ನೋ ನಕ್ಸಲರು ಪತ್ತೆ ಆದ್ರು. ಅವರಿಬ್ರೂ ತಪ್ಪಿಸಿಕೊಂಡು ಹೋದ್ರು ಅಂತ ಕೂಂಬಿಂಗ್ ಆಪರೇಷನ್ ನಡೆಸಲಾಯ್ತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೀತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಮ್ ಗೌಡ ಬರೋ ಮಾಹಿತಿ ಸಿಕ್ಕಿತ್ತು. ವಿಕ್ರಮ್ ಗೌಡ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಅನಿವಾರ್ಯವಾಯ್ತು ಪೊಲೀಸರಿಗೆ. ಪೊಲೀಸರ ಮೇಲೆ ವಿಕ್ರಮ್ ಗೌಡ ತಂಡ ಫೈಯರ್ ಮಾಡಿದ್ದಾರೆ. ಹಾಗಾಗಿ ಪೊಲೀಸರು ಎನ್‌ಕೌಂಟರ್ ಮಾಡಬೇಕಾಯ್ತು. ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತಾಡಿ ಮುಖ್ಯ ವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೀತಿದೆ. ಸರೆಂಡರ್ ಆಗೋಕ್ಕೆ ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ, ಅದು ಇದ್ದಿದ್ದೇ. ಆದರೆ ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದ್ರೆ ಈ ಥರ ಘಟನೆ ಆಗೋದು ಸಹಜ ಎಂದಿದ್ದಾರೆ.
ವಿಕ್ರಮ್ ಗೌಡ ಓರ್ವ ನಕ್ಸಲೈಟ್. ಕಳೆದ ೨೦ ವರ್ಷಗಳಿಂದ ತಪ್ಪಿಸಿಕೊಂಡು ಹೋಗುತ್ತಿದ್ದರು. ಅವರನ್ನ ಹಿಡಿಯೋಕೆ ಆಗ್ತಿರಲಿಲ್ಲ. ಆದ್ರೆ ಕಳೆದ ವಾರ ರಾಜು ಮತ್ತು ಲತಾ ಅಂತ ಅವರೂ ನಕ್ಸಲೆಟ್. ಅವರಿಂದ ಮಾಹಿತಿ ಸಿಕ್ಕಮೇಲೆ ಹಿಡಿಯೋಕೆ ಹೋಗಿದ್ದರು. ವಿಕ್ರಮ್ ಗೌಡ ಕಂಡ ತಕ್ಷಣ ಫೈರ್ ಮಾಡಿದ್ದಾರೆ . ಈ ವೇಳೆ ಎನ್ ಕೌಂಟರ್ ಮಾಡಿದ್ದಾರೆ.. ಕೇವಲ ಮಾಹಿತಿ ಬಂದಿದೆ. ಇನ್ನೂ ಇಬ್ಬರು ಮೂರು ಜನ ಅವರ ಜೊತೆ ಇದ್ದವರು ತಪ್ಪಿಸಿಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಸಿಕ್ಕಮೇಲೆ ಮತ್ತಷ್ಟು ಹೇಳುತ್ತೇನೆ ಎಂದಿದ್ದಾರೆ.