ಮನೆ Latest News ಸರ್ಕಾರಿ‌ ನೌಕರಿಗೆ ವಯೋಮಿತಿ ಸಡಿಲ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಪರಮೇಶ್ವರ್

ಸರ್ಕಾರಿ‌ ನೌಕರಿಗೆ ವಯೋಮಿತಿ ಸಡಿಲ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು; ಸರ್ಕಾರಿ‌ ನೌಕರಿಗೆ ವಯೋಮಿತಿ ಸಡಿಲ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರಿ‌ ನೌಕರಿಗೆ ವಯೋಮಿತಿ ಸಡಿಲ ವಿಚಾರದ ಬಗ್ಗೆ ಮಾತನಾಡಿದ ಅವರು ಒಂದು ಸಲಕ್ಕೆ ಅನ್ವಯ ಆಗುವಂತೆ 2027 ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆ ಕೊಡಲು ಮುಂದಾಗಿದ್ದೇವೆ. ಸಿಅ್ಯಂಡ್ಆರ್ ನಿಯಮಗಳಡಿ ಶಾಶ್ವತವಾಗಿ ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ಐ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಮಾಡ್ತೇವೆ. ಇದರ ಬಗ್ಗೆ ಪರಿಶೀಲನೆ ನಡೀತಿದೆ, ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಅಂತ ಮಾಹಿತಿ ತರಿಸಿಕೊಂಡಿದ್ದೇವೆ.ಸದ್ಯದಲ್ಲೇ ಪೊಲೀಸ್ ಹುದ್ದೆಗಳ ನೇಮಕಾತಿಗಳಿಗೆ ವಯೋಮಿತಿ ಸಡಿಲಿಕೆ ಪ್ರಕಟ ಮಾಡ್ತೇವೆ ಎಂದಿದ್ದಾರೆ.

ನಿಗಮಮಂಡಳಿಗಳಲ್ಲಿ ಪರಿಷ್ಕರಣೆ ಆದ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ, ಡಿಸಿಎಂ ಚರ್ಚಿಸಿ ಹೈಕಮಾಂಡ್ ಗಮನಕ್ಕೆ ತಂದು ಬದಲಾವಣೆ ಮಾಡಿದ್ದಾರೆ. ನಾನು ಅಧ್ಯಕ್ಷ ಆಗಿದ್ದಾಗಲೂ ಹೈಕಮಾಂಡ್ ಗಮನಕ್ಕೆ ತಂದೇ ಬದಲಾವಣೆ ಮಾಡ್ತಿದ್ದೆವು. ನಿಗಮ ಮಂಡಳಿಗಳಿಗೆ ನಾವು ಪಟ್ಟಿ ತಯಾರಿಸಿ ಕೊಟ್ಟಿದ್ದೆವು. ಸಿಎಂ, ಡಿಸಿಎಂ ಚರ್ಚಿಸಿ ಕೆಲ ಬದಲಾವಣೆ ಮಾಡಿದ್ದಾರೆ.ಬಿಎಂಟಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಲ್ಲೂ ಬದಲಾವಣೆ ಮಾಡಿದ್ದಾರೆ ಅಂತ ಕೇಳ್ಪಟ್ಟೆ ನಾನು  ಎಂದ್ರು. ಜಾತಿ ಸಮೀಕ್ಷೆ ಬಗ್ಗೆ ಗೊಂದಲದ ಹೇಳಿಕೆ ಕೊಡಬೇಡಿ ಎಂದು ಇದೇ ವೇಳೆ ಬಿಜೆಪಿ ನಾಯಕರಿಗೆ ಪರಮೇಶ್ವರ್ ಮನವಿ ಮಾಡಿದ್ದಾರೆ.

ಸಾಮಾಜಿಕ ಆರ್ಥಿಕ ಸಮೀಕ್ಷೆ ಮೂಲಕ ಸಮುದಾಯಗಳ ಸ್ಥಿತಿಗತಿ ಗೊತ್ತಾಗುತ್ತೆ. ಇದರ ಹೊರತಾಗಿ ಈ ಸಮೀಕ್ಷೆಯಿಂದ ಇನ್ನೇನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ?. ಕೇಂದ್ರದಿಂದಲೂ ಮುಂದೆ ಗಣತಿ‌ ಮಾಡ್ತಾರೆ. ಆಗ ಯಾರಾದರೂ ನಾವು ಗಣತಿಯಲ್ಲಿ ಭಾಗವಹಿಸಲ್ಲ ಅಂತ ಹೇಳಿದರೆ ಗೊಂದಲ ಆಗಲ್ವಾ?. ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿಗದಿತ ಗಡುವಿನೊಳಗೆ ಸಮೀಕ್ಷೆ ಮುಗಿಸ್ತೇವೆ ನಮ್ಮ ಜಿಲ್ಲೆಯಲ್ಲೂ ಸಮೀಕ್ಷೆ ವೇಗ ಪಡೆದುಕೊಂಡಿದೆ ಎಂದರು.

ಸಂಪುಟ ಪುನಾರಚನೆ ಬಗ್ಗೆ ಜಬೀರ್ ಅಹಮದ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಂಪುಟ ಪುನಾರಚನೆ ಅಥಚಾ ವಿಸ್ತರಣೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಇದೆಲ್ಲ ನಮ್ಮ ವ್ಯಾಪ್ತಿಗೆ ಬರೋದಿಲ್ಲ, ನಮಗೆ ಗೊತ್ತೇ ಆಗೋದಿಲ್ಲ. ಕೆಲವರು ಅವರವರ ಅಭಿಪ್ರಾಯ ಹೇಳ್ತಾರೆ. ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗಬೇಕು ಅಂತ ಹೇಳ್ಕೊಂಡು ಬರ್ತಿದ್ದಾರಲ್ಲ ಇದರ ಬಗ್ಗೆ ನಮಗ್ಯಾರಿಗೂ ಗೊತ್ತೇ ಇಲ್ಲ. ಹೈಕಮಾಂಡ್ ನವ್ರು ಯಾರೂ  ಹೇಳಿಲ್ಲ, ಅಥವಾ ಸಿಎಂ ಆಗಲೀ ಅಧ್ಯಕ್ಷರಾಗಲೀ ನಮಗೆ ಇದರ ಬಗ್ಗೆ ಹೇಳಿಲ್ಲ. ಒಳಗೆ ಅವರು ಏನು ಅಂಡರ್‌ಸ್ಟ್ಯಾಂಡಿಂಗ್‌ಗೆ ಬಂದಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಕುಣಿಗಲ್ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಗೆ ಸಿಎಂ ಕೆಲವು ಸಂಘಟನೆಗಲಕ ಮನವಿ ವಿಚಾರದ ಬಗ್ಗೆ  ಮಾತನಾಡಿದ ಅವರು ಇದರ ಬಗ್ಗೆ ಅಲ್ಲಿನ ಶಾಸಕರೇ ಗೊತ್ತಿಲ್ಲ ಅಂದಿದ್ದಾರೆ.ಇನ್ನು ನನಗೆ ಹೇಗೆ ಗೊತ್ತಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.