ಬೆಂಗಳೂರು: ನಿನ್ನೆ ಬೆಳಗ್ಗೆ ಕಾಂಗ್ರೆಸ್ ಸಭೆಗೆ ಗೈರಾಗಿದ್ದಕ್ಕೆ ಸಂಬಂಧಪಟ್ಟಂತೆ ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ನಿನ್ನೆ ತುಮಕೂರಿನಲ್ಲಿ ಕಾರ್ಯಕ್ರಮ ಇತ್ತು. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನನಗೆ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಬೆಳಗ್ಗಿನ ಸಭೆಗೆ ಗೈರಾಗಿದ್ದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಸಂಜೆ ಸಿಎಲ್‌ಪಿ ಸಭೆಯಲ್ಲಿ ಭಾಗಿಯಾಗಿದ್ದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಭವನ ವಿಚಾರವಾಗಿ ಸಿಎಲ್‌ಪಿ ಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ವಾಗ್ವಾದ ನಡೆದ ಬಗ್ಗೆ ಮಾಧ್ಯದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಭವನಗಳನ್ನ ಜಿಲ್ಲಾ ಸಚಿವರು, ಯಾವ ತಾಲ್ಲೂಕಿನಲ್ಲಿ ಕಚೇರಿ ಇಲ್ಲ. ಅಲ್ಲಿ ಕಾಂಗ್ರೆಸ್ ಭವನ ಕಟ್ಟುವಂತೆ ಸೂಚನೆ ಬಂದಿತ್ತು. ನಾನು ಕೆಪಿಸಿಸಿ ಅಧ್ಯಕ್ಷ ಇದ್ದಾಗ ಹೇಳಿದ್ದೆ. ಬೆಳಗಾವಿಯಲ್ಲಿ ಹೋದಾಗ ಕಚೇರಿ ಇರಲಿಲ್ಲ. ದೊಡ್ಡ ನಾಯಕರಿದ್ದೀರಿ ಕಚೇರಿ ಕಟ್ಟಿ ಅಂತ ಸೂಚನೆ ನೀಡಿದ್ದೆ. ನಾನೇ ಅಧ್ಯಕ್ಷ ಇದ್ದಾಗ 45ಲಕ್ಷ ಹಣ ಕೊಟ್ಟಿದ್ದೆ. ನಾನು ಅಧ್ಯಕ್ಷ ಸ್ಥಾನ ಬಿಟ್ಟ ಬಳಿಕ ಉದ್ಘಾಟನೆ ಆಯ್ತು. ಈಗ ಆ ಪ್ರಶ್ನೆ ಯಾಕೆ ಬಂತು ಗೊತ್ತಿಲ್ಲ. ಡಿಸಿಎಂ ಡಿಕೆಶಿ ಅವರು ಯಾರು ಹಣ ಕೊಟ್ರು ಅಂತ ಏನು ಹೇಳಿಲ್ಲ.ಆಗ ಸತೀಶ್ ಅವರು ಯಾರು ಹೆಚ್ಚಿನ ಹಣ ಕೊಟ್ಟಿದ್ದಾರೆ ಅಂತ ಹೇಳಬಹುದಿತ್ತು ಅಂತ ಪ್ರಶ್ನೆ ಮಾಡಿದ್ರು. ನಾನು ಹಣ ಕೊಟ್ಟೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ ಅಷ್ಟೇ ಎಂದರು.
ಶಾಸಕರಿಗೆ ಅನುದಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರತೀ ಶಾಸಕರಿಗೂ ಹತ್ತು ಕೋಟಿ ಅನುದಾನ ಕೋಡೋದಾಗಿ ಸಿಎಂ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ.ವಿಪಕ್ಷದವರಿಗೂ ಅನುದಾನ ಕೊಡೋದಾಗಿ ಸಿಎಂ ಹೇಳಿದ್ರು.ಸಮಗ್ರ ಅಭಿವೃದ್ಧಿಗೆ ಅನುದಾನ ಮುಖ್ಯ ಎಂದರು. ಇನ್ನು ಸಮುದಾಯದ ಔತಣ ಕೂಟ ಕರೆಯುವ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಈ ಬಗ್ಗೆ ಅವರ ಜೊತೆ ಮಾತನಾಡಲಾಗಿಲ್ಲ.ಸುರ್ಜೇವಾಲ ಅವರಿಗೆ ವಿವರಣೆ ಕೊಡ್ತೀವಿ.ಅವರು ನಮ್ಮ ಹೈಕಮಾಂಡ್, ಅವರ ಪ್ರತಿನಿಧಿ. ಅವರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೀವಿ ಎಂದರು.
ಇದೇ ವೇಳೆ ಸಿಎಲ್‌ಪಿ ಸಭೆಯಲ್ಲಿ ಪಕ್ಷ ಮುಖ್ಯ ಅನ್ನೋ ಸಂದೇಶದ ಬಗ್ಗೆ ಮಾತನಾಡಿದ ಅವರು ಎಲ್ಲಾ ಸಂಧರ್ಭದಲ್ಲಿ ಕೂಡ ಪಕ್ಷ ಮುಖ್ಯ. ಅದನ್ನ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ. ಪಕ್ಷ ಇದ್ರೆ ಮುಖ್ಯ ಅನ್ನೋದು ನನ್ನ ವಾದ ಕೂಡ ಹೌದು. ಗೊಂದಲ ಇಲ್ಲ, ಗೊಂದಲ ಇದ್ರೆ ಅಷ್ಟೇ ಆ ಪ್ರಶ್ನೆ ಬರುತ್ತೆ ಎಂದರು. ಇನ್ನು ಒನ್ ಮ್ಯಾನ್, ಒನ್ ಪೋಸ್ಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ ಬರಲಿಲ್ಲ. ಯಾವುದೇ ಚರ್ಚೆ ಕೂಡ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಚಾಮರಾಜಪೇಟೆ ಪ್ರಕರಣದಲ್ಲಿ ಬಂಧನ ಸರಿಯಾಗಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ಅವರು ಯಾರೇ ಇರಲಿ ಬಿಡೋದಿಲ್ಲ.ವ್ಯಕ್ತಿ ಎಷ್ಟೇ ದೊಡ್ಡವರಿರಲಿ, ಚಿಕ್ಕವರಿರಲಿ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನಿನ ವಿರುದ್ಧ ನಡೆದುಕೊಳ್ಳುವವರನ್ನ ಬಿಡಲ್ಲ. ಪ್ರಿಲಿಮಿನರಿ ಆಗಿ ಕರೆತಂದಿದ್ದಾರೆ. ಆತ ಬಾಯಿ ಬಿಟ್ರೆ ಬೇರೆಯವರನ್ನೂ ಬಂಧನ ಮಾಡುತ್ತೇವೆ. ಬಿಹಾರ ಮೂಲದ ವ್ಯಕ್ತಿ ಅಂತ ಹೇಳಲಾಗ್ತಿದೆ. ಕುಡಿದ ಮತ್ತಿನಲ್ಲಿ ಕೆಚ್ಚಲು ಕೂಯ್ದಿದ್ದಾನೆ.ಆತನ ಹಿಂದೆ ಯಾರಾದ್ರೂ ಇದ್ರೆ ಅವರ ಬಂಧನ ಮಾಡ್ತೀವಿ ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ವಿಚಾರವಾಗಿ ಮಾತನಾಡಿ ಬೆಳಗಿನ ಜಾವ ಅಪಘಾತ ಆಗಿದೆ.ಲಾರಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ.ಕಾರು ಜೋರಾಗಿಯೇ ಜಖಂ ಆಗಿದೆ.ಸೀರಿಯಸ್ ಅಂತದ್ದು ಏನು ಆಗಿಲ್ಲ. ಅವರ ಜೊತೆ ಮಾತನಾಡಲಾಗಲಿಲ್ಲ, ಅವರ ತಮ್ಮನ ಜೊತೆ ಮಾತಾಡಿದೆ ಎಂದರು.