ಮನೆ Latest News ಪರಮೇಶ್ವರ್ ರಬ್ಬರ್ ಸ್ಟಾಂಪ್ ಎಂಬ ಹೆಚ್ಡಿಕೆ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು

ಪರಮೇಶ್ವರ್ ರಬ್ಬರ್ ಸ್ಟಾಂಪ್ ಎಂಬ ಹೆಚ್ಡಿಕೆ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು

0

ಬೆಂಗಳೂರು: ಪರಮೇಶ್ವರ್ ರಬ್ಬರ್ ಸ್ಟಾಂಪ್ ಎಂಬ ಹೆಚ್ಡಿಕೆ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೆಚ್ಡಿಕೆ ಎರಡು ಸಲ ಸಿಎಂ ಆಗಿದ್ದವರು. ಈಗ ಕೇಂದ್ರದ ಕೈಗಾರಿಕಾ ಸಚಿವ. ನನಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ.ನನ್ನನ್ನು ರಬ್ಬರ್ ಸ್ಟಾಂಪ್ ಅಂದಿದ್ದಾರೆ. ನಾನು ಕೂಡ ಅವರಿಗೆ ಏನೇನೋ ಮಾತಾಡಬಹುದು. ಆದ್ರೆ ನಾನು ಮಾತಾಡಲ್ಲ. ಅವರ ಹೇಳಿಕೆ ಸ್ವೀಕಾರ ಮಾಡ್ತೇನೆ. ಕುಮಾರಸ್ವಾಮಿ ಜತೆ ನಾನೂ ಕೆಲಸ ಮಾಡಿದ್ದೇನೆ.ನನ್ನ ವ್ಯಕ್ತಿತ್ವ ಮತ್ತು ಸಾಮರ್ಥ್ಯ ಅವರಿಗೆ ಗೊತ್ತಿದೆ ಎಂದಿದ್ದಾರೆ.

ಬಳ್ಳಾರಿ ಪ್ರಕರಣ ಸಿಬಿಐಗೆ ಕೊಡುವ ವಿಚಾರದ ಬಗ್ಗೆ ಮಾತಾನಾಡಿದ ಅವರು ನಮ್ಮ ಪೊಲೀಸರಿಗೆ ತನಿಖೆ ಮಾಡುವ ಸಾಮರ್ಥ್ಯ ಇದೆ.ನಮ್ಮ ಪೊಲೀಸರು ಯಾವುದೇ ಪರಿಸ್ಥಿತಿ ನಿಭಾಯಿಸ್ತಾರೆ. ಅವರಿಂದ ಇದರ ತನಿಖೆ ಆಗಲ್ಲ ಅನ್ನೋ ಸಂದರ್ಭ ಬಂದಾಗ ಸಿಬಿಐ ತನಿಖೆಯೋ ಮತ್ತೊಂದೋ ಅಂತ ನೋಡಬಹುದು. ಆದ್ರೆ ನಾವು ಇಂಥ ಯಾವುದೇ ಪ್ರಕರಣಗಳನ್ನು ಸಿಬಿಐಗೆ ಕೊಡಲ್ಲ‌ ಅಂತ ಕ್ಯಾಬಿನೆಟ್ ನಲ್ಲಿ ಹಿಂದೆಯೇ ತೀರ್ಮಾನ ಮಾಡಿದ್ದೇವೆ.ಕೆಲವು ಪ್ರಕರಣಗಳಲ್ಲಿ ಸೆಲೆಕ್ಟಿವ್ ನಿರ್ಧಾರ ಮಾಡ್ತೇವೆ. ಕೋರ್ಟ್ ಆದೇಶ ಬಂದಾಗ ಅಥವಾ ಇನ್ಯಾವುದೋ ಸನ್ನಿವೇಶ ಬಂದಾಗಷ್ಟೇ ಸಿಬಿಐ ತೀರ್ಮಾನ ಮಾಡ್ತೇವೆ.ಈಗ ಈ ಪ್ರಕರಣ ಸಿಬಿಐಗೆ ಕೊಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

ಒಬ್ಬ ಹೆಣ್ಣು ಮಗಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡೋದು ಸರಿಯಲ್ಲ. ಯಾರನ್ನೂ  ಅವರ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡಲ್ಲ. ಪೊಲೀಸರೂ ಇದನ್ನು ಮಾಡೋದಿಲ್ಲ, ನಾವು ಅವರಿಗೆ ಅವಕಾಶ ಕೊಡಲ್ಲ.ರಾಜಕೀಯ ದುರುದ್ದೇಶದಿಂದ ಪೊಲೀಸರು ನಡೆದುಕೊಳ್ಳಲ್ಲ. ಕಮಿಷನರ್ ಶಶಿಕುಮಾರ್ ಎಲ್ಲವನ್ನ ಹೇಳಿದ್ದಾರೆ. ಅವರು ಹೇಳಿಕೆ ಕೊಟ್ಟ ಮೇಲೆ ನಾನೇನು ಹೇಳಲಿ. ಒಬ್ಬ ಕಮೀಷನರ್ ಸ್ಪಷ್ಟನೆ ಕೊಟ್ಟ ಮೇಲೆ ಇನ್ನೇನಿದೆ ಅದರ ಮೇಲೆ. ಪೊಲೀಸರು ವಿವಸ್ತ್ರ ಮಾಡಲಿಲ್ಲ, ಆಕೆಯೇ ವಿವಸ್ತ್ರ ಮಾಡಿಕೊಂಡ್ರು ಅಂತ ಹೇಳಿದ್ದಾರೆ. ಬಿಜೆಪಿಯವರಿಗೆ ಕಮೀಷನರ್ ಅವ್ರೇ ಹೇಳಿದ ಮೇಲೆ ಇನ್ನೇನಿದೆ?. ಬಿಜೆಪಿಯವ್ರು ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.