ಬೆಂಗಳೂರು; ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದ್ದೇವೆ. ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಅರಣ್ಯ ಇಲಾಖೆಯಲ್ಲಿ ೪೦ ಚದುರ ಕಿ.ಮೀ ಅರಣ್ಯ ಇದೆ. ಎರಡುವರೆ ಲಕ್ಷ ಜಮೀನು ಒತ್ತುವರೆ ತೆರವಿಗೆ ಆದ್ಯತೆ ಕೊಟ್ಟಿದ್ದೇವೆ. ಸಾವಿರಾರು ಕೋಟಿ ಬೆಲೆ ಬಾಳು ಅರಣ್ಯ ವಶಪಡಿಸಿಕೊಂಡಿದ್ದೇವೆ.
ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಯಲಹಂಕದ ಮಾದಪ್ಪನಹಳ್ಳಿಯಲ್ಲಿ ೧೫೩ ಎಕರೆ ಜಮೀನಿನಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೃಹತ್ ಉದ್ಯಾನವನ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ. ಬೆಂಗಳೂರು ಜನಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ. ಶ್ವಾಸಕೋಶ ಸಮಸ್ಯೆ ಜಾಸ್ತಿ ಆಗ್ತಿದೆ ಹಾಗಾಗಿ ಅರಣ್ಯ ಬೆಳೆಸೋದಕ್ಕೆ ಮಹತ್ವ ಕೊಡ್ತಿದ್ದೇವೆ. ಮಾನವ ಪ್ರಾಣಿ ಸಂಘರ್ಘ ಹೆಚ್ಚಾಗ್ತಿದೆ. ಆನೆಗಳ ಸಂಖ್ಯೆ ಇಡೀ ದೇಶದಲ್ಲಿ ಕರ್ನಾಟಕ ನಂಬರ್ ೧ ಇದೆ. ಅರಣ್ಯದಿಂದ ಯಾಕೆ ಆನೆ ಹೊರಗಡೆ ಬರ್ತಿವೆ ಎಂಬ ಸರ್ವೆ ಮಾಡಿದ್ದೆವೆ. ಜೀವ ಅತ್ಯಂತ ಅಮೂಲ್ಯವಾದದ್ದು, ಜೀವ ಉಳಿಸೋದು ನಮ್ಮ ಆದ್ಯ ಕರ್ತವ್ಯವಾಗಿದೆ. ೨೦೦ ಕಿ ಮೀ ರೈಲ್ವೆ ಬ್ಯಾರಿಕೇಡ್ ಮಾಡಿದ್ದೇವೆ. ಆನೆಗಳಿಗೆ ಆಹಾರಕ್ಕಾಗಿ ಬಿದಿರು ಬೆಳೆಸೋದಕ್ಕೆ ಪ್ರೋತ್ಸಾಹ ಕೊಟ್ಟಿದ್ದೇವೆ.ನಿನ್ನೆ ನಡೆದ ಕ್ಯಾಬಿನೆಟ್ ನಲ್ಲಿ ಚಾಮರಾಜನಗರ ವ್ಯಾಪ್ತಿಯಲ್ಲಿ ಬರುವ ಅರಣ್ಯ ವ್ಯಾಪ್ತಿಯಲ್ಲಿ ೮೮ ಕಿಮಿ ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಹಲವು ಯೋಜನೆಗಳಿಗೆ ೧೫೭ ಕೋಟಿ ಮಂಜೂರು ಮಾಡಿದ್ದಾರೆ ಎಂದರು.
ಭದ್ರ ಅಭಯಾರಣ್ಯದಲ್ಲಿ ಅರಣ್ಯದಿಂದ ಆಚೆ ಬಂದಿದ್ದೇವೆ. ಸಾಪ್ಟ್ ರಿಲೀಸ್ ಸೆಂಟರ್ ಮಾಡಿ ಬ್ಯಾರಿಕೇಡ್ ಹಾಕಿದ್ದೆವೆಣ ತಜ್ಞರ ಜೊತೆ ಸಮಾಲೋಚನೆ ಮಾಡ್ತಿದ್ದೇವೆ. ಮಾನವ ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯೊದಕ್ಕೆ ಚಾಲನೆ ಕೊಡ್ತಿವಿ.9 ಲಕ್ಷ ಹೆಕ್ಟೇರ್ ಡೀಮ್ಡ್ ಪಾರೆಸ್ಟ್ ಅಂತ ಇತ್ತು. ಇದನ್ನು 3 ಲಕ್ಷ ಅಂತ ಅಫಿದವಿತ್ ಹಾಕಿದ್ದೇವೆ. ಇದೀಗ ಎಷ್ಟು ಅಂತ ನಿಖರವಾಗಿ ವರದಿ ಕೊಡಿ ಎಂದು ಸೂಚನೆ ನೀಡಿದ್ದೇವೆ.50 ಮರ ಇರುವ ಸರ್ಕಾರಿ ಭೂಮಿ ವರದಿ ನೀಡಿ ಎಂದು ಹೇಳಿದ್ದೇವೆ. ಇದರ ಸರ್ವೆ ಮಾಡಿ ಕಂದಾಯ, ಅರಣ್ಯ ಎಷ್ಟು ಅಂತ ವರದಿ ಕೊಡಿ ಎಂದು ಹೇಳಿದ್ದೇವೆ. ಕೋರ್ಟ್ ಮತ್ತೆ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸರ್ವೆ ನಡೆಯುತ್ತದೆ. ಎಲ್ಲಾದ್ರೂ ಸರ್ಕಾರದ ಅಂಗನವಾಡಿ, ಶಾಲೆ ಇದ್ರೂ ಹೊರತುಪಡಿಸಿ ಅಂತಲೂ ಹೇಳಿದ್ದೇವೆ ಎಂದು ತಿಳಿಸಿದ್ರು.
ಎಲ್ಲಾದ್ರೂ ಅಕ್ರಮವಾಗಿ ಗ್ರಾಂಟ್ ಮಾಡಿದ್ರೆ ಅದನ್ನ ಕ್ಯಾನ್ಸಲ್ ಮಾಡಿದ್ದಾರೆ.ಅರಣ್ಯ,ಕಂದಾಯದ ಅಂತ ಗೊಂದಲ ಇದೆ. ಎಚ್ ಎಂ ಟಿ ಗೆ ಜಮೀನನ್ನು ನಾವು ಕೊಟ್ಟಿದ್ದು. ಅವರು ರಿಯಲ್ ಎಸ್ಟೇಟ್ ಗೆ ಕೊಟ್ಟಿದ್ದಾರೆ. ಇದನ್ನು ಮರು ವಶಪಡಿಕೊಳ್ಳಲು ಕೋರ್ಟ್ ಗೆ ಹೋಗಿದ್ದೇವೆ.ತೀರ್ಪು ಶೀಘ್ರದಲ್ಲಿ ಬರಲಿದೆ ಎಂದ ಅವರು ಮಸ್ಕಿ ಶಾಸಕರ ಪುತ್ರನಿಂದ ಕಾಡು ಪ್ರಾಣಿ ಹೊಡೆದು ಸಂಭ್ರಮಾಚರಣೆ ಬಗ್ಗೆ ಕ್ರಮ ಕೈಗೊಳ್ಳದ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಾಯ್ದೆಯಲ್ಲಿ ಯಾವ ಪ್ರಕರಣಕ್ಕೆ ಯಾವ ಶಿಕ್ಷೆ ಅಂತಾ ಇದೆ. ನನ್ನ ಗಮನಕ್ಕೆ ಬಂದ ನಂತರ ಎಫ್ ಐ ಆರ್ ಆಗಿದೆ. ತನಿಖೆ ವರದಿ ಏನ್ ಬಂದಿದಿ ಅಂತ ನನಗೆ ಗೊತ್ತಿಲ್ಲ. ಎಫ್ ಐ ಆರ್ ಆದ್ಮಲೆ ಕೋರ್ಟ್ ಗೆ ಹೋಗುತ್ತೆ. ಅಧಿಕಾರಿಗಳಿಂದ ವರದಿ ತರಿಸಿಕೊಳ್ತಿನಿ. ಸರ್ಕಾರ ಎಲ್ಲಾ ಪ್ರಕರಣದಲ್ಲಿ ಗಂಭೀರವಾಗಿದೆ. ಮಾಹಿತಿ ತರಿಸಿಕೊಂಡು ಏನ್ ಕ್ರಮ ಆಗಿದೆ ಅಂತ ಹೇಳ್ತಿನಿ. ಯಾರು ಕಾನೂನಿಗಿಂತ ದೊಡ್ಡವರಲ್ಲ ಎಂದು ತಿಳಿಸಿದ್ರು.











