ಬೆಂಗಳೂರು; ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸಾವು ಪ್ರಕರಣದಲ್ಲಿ ನನ್ನ ತಪ್ಪಿದ್ರೆ ನಾನು ರಾಜೀನಾಮೆ ಕೊಡಲೂ ಸಿದ್ಧ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಮೊನ್ನೆ ಬಳ್ಳಾರಿಯಲ್ಲಿ 9 ಜನರಿಗೆ ಸಮಸ್ಯೆ ಆಗಿತ್ತು, ನಾಲ್ವರು ತೀರಿಕೊಂಡಿದ್ರು. ಐದನೇಯವರು ಚಿಕಿತ್ಸೆ ಪಡೀತಿದ್ರು ಅವರೂ ತೀರಿಕೊಂಡಿದ್ದಾರೆ. ಅದೇ ಬ್ಯಾಚ್ ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪೆನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಇವರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು ಅಂತಿದ್ರು. ಗುಣ ಆಗ್ತಿದ್ರು ಅಂತ ವೈದ್ಯರು ಹೇಳ್ತಿದ್ರು, ಆದರೆ ನಿನ್ನೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ವೈದ್ಯರು ಹೇಳಿದ್ರು.
ಬಿಜೆಪಿಯವ್ರು ಲೋಕಾಯುಕ್ತಕ್ಕೆ ಖಂಡಿತ ದೂರು ಕೊಡಲಿ. ಇದರಲ್ಲಿ ವಿಪಕ್ಷದವರ ಸಹಕಾರವೂ ಬೇಕು. ನನ್ನ ತಪ್ಪಿದ್ರೆ ಪ್ರಕರಣದಲ್ಲಿ ನಾನು ರಾಜೀನಾಮೆ ಕೊಡಲೂ ಸಿದ್ಧ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ಇದು ಜೀವದ ವಿಚಾರ. ನನ್ನ ರಾಜೀನಾಮೆಯಿಂದ ಸರಿಯಾಗುತ್ತೆ ಅಂದರೆ ರಾಜೀನಾಮೆಗೂ ಸಿದ್ಧ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿದೆ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ಇಲ್ಲಿವರೆಗೆ ಈ ವರ್ಷ ರಾಜ್ಯದಲ್ಲಿ 327 ಮೆಟರ್ನಲ್ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಅಂತ ಹೇಳಿದ್ದೇವೆ. ಇಂಥ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಬೇಕು. ಫಾರ್ಮಾಸ್ಯುಟಿಕಲ್ ಕಂಪೆನಿಗಳನ್ನು ರಕ್ಷಿಸುವ ಕಾನೂನುಗಳಾಗಿ ಹೋಗಿವೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ ಎಂದಿದ್ದಾರೆ.
ಇನ್ನು ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕ್ಯಾಬಿನೆಟ್ ನಲ್ಲಿ ಈ ವಿಚಾರ ಚರ್ಚೆ ಆಗಿದೆ.ಈ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಒಂದೊಂದು ಸಾವಿನಲ್ಲಿ ಲೋಪದೋಷವಾದ್ರೆ ಅದು ನಮ್ಮ ವ್ಯವಸ್ಥೆ ಗೆ ಕೆಟ್ಟ ಹೆಸರು. ಅದನ್ನ ಸಹಿಸೋಕೆ ಸಾಧ್ಯವಿಲ್ಲ.ಅದರ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಬಳ್ಳಾರಿಯಲ್ಲಿ ಬಾಣಂತಿ ಸಾವು ಪ್ರಕರಣ: ಯಾಕೆ ಸಾವಾಗಿದೆ ಅಂತ ಚೆಕ್ ಮಾಡ್ತೇನೆ ಎಂದ ಸಿದ್ದರಾಮಯ್ಯ
ಬಳ್ಳಾರಿಯಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಯಾಕೆ ಸಾವಾಗಿದೆ ಅಂತ ಚೆಕ್ ಮಾಡ್ತೇನೆ ಎಂದಿದ್ದಾರೆ.
ನಾನು ಕೂಡ ಚೆಕ್ ಮಾಡಿದ್ದೇನೆ. ಮೀಟಿಂಗ್ ಕೂಡ ಮಾಡಿದ್ದೆ. ಯಾಕೆ ಸಾವಾಗಿದೆ ಅಂತ ಚೆಕ್ ಮಾಡ್ತೇನೆ. ಈ ಸಾವಿನ ಬಗ್ಗೆ ಚೆಕ್ ಮಾಡುತ್ತೇನೆ. ಇನ್ನು ಮಾಧ್ಯಮದವರು ಐದನೇ ಸಾವಾಗಿದೆ ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಗೊತ್ತು ಕಣಯ್ಯ ನನಗೆ ಎಂದು ಗದರಿದ್ದಾರೆ. ಡ್ರಗ್ ಕಂಟ್ರೋಲರನ್ನು ಸಸ್ಪೆಂಡ್ ಮಾಡಿದ್ದೆ. ಬಾಣಂತಿ ಸಾವಿನ ಬಗ್ಗೆ ಚೆಕ್ ಮಾಡಿ ಹೇಳುತ್ತೇನೆ ಎಂದಿದ್ದಾರೆ.
ಇನ್ನು ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಸಿದಂತೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಪ್ರಕರಣದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಮೊದಲು ಅದರ ಬಗ್ಗೆ ಚೆಕ್ ಮಾಡಿ. ಯಾರು ತಪ್ಪು ಮಾಡಿದ್ದಾರೆ ಇಮಿಡಿಯಟ್ ಆ್ಯಕ್ಷನ್ ತೆಗೆದುಕೊಳ್ಳಿ. ನನ್ನ ಸರ್ಕಾರದಲ್ಲಿ ಇಂತದ್ದಕ್ಕೆಲ್ಲ ಅವಕಾಶ ಇಲ್ಲ. ಯಾರೇ ತಪ್ಪು ಮಾಡಿದ್ರೂ ಕ್ರಮ ಜರುಗಿಸಿ. ಯಾರು ತಪ್ಪು ಮಾಡಿದ್ದಾರೆ ಮುಲಾಜ್ ನೋಡಬೇಡಿ. ಕ್ರಮ ಜರುಗಿಸಿ ಸಿಎಂ ತಾಕೀತು ಎಂದಿದ್ದಾರೆ.