ಮನೆ Latest News ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆಗಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆಗಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

0

ಬೆಂಗಳೂರು; ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ವರ್ಗಾವಣೆ ಏನೂ ಆಗಿಲ್ಲ. ವರ್ಗಾವಣೆ ಪತ್ರ ಎಂದು ಹೇಳುತ್ತಿದ್ದಾರೆ. ಅದು ಅಧಿಕೃತವೋ ಇಲ್ಲವೋ ಗೊತ್ತಿಲ್ಲ .ನಮ್ಮ ಇಲಾಖೆಯಿಂದ ಇನ್ನೊಂದು ಇಲಾಖೆಗೆ ಹೋಗುವುದಕ್ಕೆ ಅವಕಾಶವಿಲ್ಲ. ನಮ್ಮ ವೈದ್ಯರನ್ನು ನಾವು ಬೇರೆ ಇಲಾಖೆಗೆ ಹೋದವರನ್ನು ವಾಪಸ್ ಕರೆಸಿಕೊಳ್ಳುತ್ತಿದ್ದೇವೆ. ನಮ್ಮ ಇಲಾಖೆಯಿಂದ ಇನ್ನೊಂದು ಇಲಾಖೆಗೆ ಹೋಗುವುದಕ್ಕೆ ಅವಕಾಶವೂ ಇಲ್ಲ. ಬಹುಶಃ ಸುನಿಲ್ ಕುಮಾರ್ ಹೇಳಿರುವ ಪತ್ರದಲ್ಲಿ ನಂಬರು ಇಲ್ಲ ದಿನಾಂಕವು ಇಲ್ಲ. ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ .ನಮ್ಮ ಇಲಾಖೆಯಿಂದ ಬೇರೆ ಇಲಾಖೆಗೆ ಹೋಗುವುದು ಬಹಳ ಕಷ್ಟದ ಕೆಲಸ. ಲೆಟರ್ ಯಾರಾದರೂ ಹಾಕಿರಬಹುದು ಅದು ಬೇರೆ ವಿಚಾರ . ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಹೋಗುವ ಅವಕಾಶ ಇಲ್ಲ . ಅದು ಕೇವಲ ಪತ್ರ ಅಷ್ಟೇ ವರ್ಗಾವಣೆ ಆಗಬೇಕಾದರೆ ಅಲ್ಲಿಂದ ನಮಗೆ ಬರಬೇಕು . ನಮ್ಮ ನೋಟಿಸಿಗೆ ಬರಬೇಕು ಎಂದಿದ್ದಾರೆ.

ಅವರು ಯತೀಂದ್ರ ಹೆಸರನ್ನ ಎಳೆದು ತರುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರ ಅಜೆಂಡಾ ಬೇರೆ ಇದೆ. ನಿಜವಾದ ಇಶ್ಯುಗಳ ಬಗ್ಗೆ ಚರ್ಚೆ ಆಗಬಾರದು ಎಂಬುದು ಅವರ ಅಜೆಂಡಾ. ಸರ್ಕಾರ ಅನೇಕ ಕಾರ್ಯಕ್ರಮ ನೀಡುತ್ತಿದೆ ನಾನು ಕೂಡ ಸೋಮವಾರ ಬೆಳಗಾವಿಗೆ ಹೋಗುತ್ತಿದ್ದೇನೆ. ಬೆಳಗಾವಿಯಲ್ಲಿ ಮೂರು ಹೊಸ ಆಸ್ಪತ್ರೆಗಳ ಶಂಕುಸ್ಥಾಪನೆ ಮಾಡುತ್ತಿದ್ದೇನೆ. ಮಹಿಳೆಯರಿಗೆ ಮಕ್ಕಳಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಕ್ಸಿನ್ ನೀಡುವುದಕ್ಕೆ ಅನುಮೋದನೆಯಾಗಿದೆ.ಈ ತರಹದ ಹಲವಾರು ಯೋಜನೆಗಳಿವೆ.ಇದೆಲ್ಲವನ್ನು ಇಟ್ಟುಕೊಂಡು ಚರ್ಚೆ ಮಾಡಬೇಕು ಎಂಬುದು ಅವರ ಅಜೆಂಡಾ.ಅದಕ್ಕಾಗಿ ಒಂದು ಟ್ವೀಟ್ ಮಾಡೋದು ಹೇಳಿಕೆ ಕೊಡೋದು ಮಾಧ್ಯಮಗಳು ನೀವು ಬಂದು ನಮ್ಮನ್ನ ಪ್ರಶ್ನೆ ಕೇಳುವುದು ನಾವು ಅದಕ್ಕೆ ಉತ್ತರ ಕೊಡುವುದು ಇದೆ ಆಗಿದೆ.ಸುಮ್ನೆ ಎಲ್ಲರೂ ಕೇಳ್ತಿದ್ದಾರೆ. ವರ್ಗಾವಣೆ ಶಿಫಾರಸು ಪತ್ರಗಳನ್ನು ಪ್ರತಿ ಇಲಾಖೆಯಿಂದಲೂ ನೀಡಲಾಗುತ್ತೆ.ನಾನು ಯಾರನ್ನೋ ವರ್ಗಾವಣೆಗೆ ಶಿಫಾರಸು ಮಾಡಿಸಿ ಕಳಿಸುತ್ತೇನೆ. ಆದರೆ ಆರೋಗ್ಯದಿಂದ ಅಬಕಾರಿಗೆ ವರ್ಗಾವಣೆಯಾಗುವ ಸಾಧ್ಯತೆಯೂ ಇಲ್ಲ .ಈ ಪತ್ರ ಅಧಿಕೃತವೋ ಇಲ್ಲವೋ ಗೊತ್ತಿಲ್ಲ.ಅದನ್ನು ಪರಿಶೀಲನೆ ಮಾಡುತ್ತೇನೆ. ಹೀಗಾಗಿ ನಮ್ಮ ಇಲಾಖೆಯ ಗಮನಕ್ಕಂತು ಇದು ಬಂದಿಲ್ಲ ಎಂದು ಅವರು ಹೇಳಿದ್ದಾರೆ.