ಮನೆ Latest News 2028ರವರೆಗೆ ಅವರೇ ಸಿಎಂ ಆಗಿ ಇರ್ತಾರೆ; ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ಹೇಳಿಕೆ

2028ರವರೆಗೆ ಅವರೇ ಸಿಎಂ ಆಗಿ ಇರ್ತಾರೆ; ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ಹೇಳಿಕೆ

0

ಬೆಂಗಳೂರು; 2028ರವರೆಗೆ ಅವರೇ ಸಿಎಂ ಆಗಿ ಇರ್ತಾರೆ  ಎಂದು ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.ಎಲ್ಲಾ ಎಂಎಲ್ ಎಗಳು ದೆಹಲಿಗೆ ಹೋಗ್ತಿದ್ದಾರೆ. ರಿಷಪಲ್ ಮಾಡ್ತಾರೆ ಅನ್ನೋ ಮಾತಿದೆ. ಅದಕ್ಕೆ ಮಂತ್ರಿಯಾಗಬೇಕೆಂಬ ಆಸೆಯಿದೆ. ಎಲ್ಲರಿಗೆ ಒಂದು ಅವಕಾಶ ಬೇಕು ಅಂತ ಇದೆ ಎಂದಿದ್ದಾರೆ. ಇನ್ನು ಫಸ್ಟ್ ಟೈಮ್ ಶಾಸಕರು ಹೋಗ್ತಿದ್ದಾರೆಂಬ ವಿಚಾರದ ಬಗ್ಗೆ ಮಾತನಾಡಿ ನಾನು ಮೊದಲ ಬಾರಿ ಎಂಎಲ್ ಎ ಆಗಿದೆ. ಆಗಲೇ ನಾನು ಸಚಿವನಾಗಿದ್ದೆ. ಮೊದಲ ಬಾರಿ ಆದವರು ಆಗಬಾರದು ಅಂತ ಏನಿಲ್ಲ. ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆದ್ರು. ಆಗಬಾರದು ಅಂತ ಏನಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ರಾಮಯ್ಯ ಇರ್ತಾರೆ. 2028 ರವರೆಗೆ ಅವರೇ ಸಿಎಂ ಆಗಿ ಇರ್ತಾರೆ. ನಾವೆಲ್ಲರೂ ಹೈಕಮಾಂಡ್ ಮಾತು ಕೇಳೋರು. ಸದ್ಯಕ್ಕೆ ಹೈಕಮಾಂಡ್ ಹೇಳುತ್ತದೆ. ಅಶೋಕ್ ಕುದುರೆ ವ್ಯಾಪಾರ ಅಂತಿದ್ರು. ಡಿಕೆಶಿ ಜೊತೆ ೭೦ ಹೇಗಾಯ್ತು ಅಂತ ಇತ್ತು. ಕುದುರೆ ವ್ಯಾಪಾರ ಯಾರು ಮಾಡ್ತಿರೋದು. ೨೦೦೮ ರಲ್ಲೂ ಬಿಜೆಪಿಗೆ ಬಹುಮತ ಇರಲಿಲ್ಲ. ಅವತ್ತು ಆಪರೇಷನ್ ಕಮಲ ಮಾಡಿಯೇ ಬಂದಿದ್ದು. ಕುದುರೆ ವ್ಯಾಪಾರ ಮಾಡಿಯೇ ಬಂದಿದ್ದು. ಶಾಸಕರ ಸಹಿ ಸಂಗ್ರಹಿಸಿದ್ರೆ ತಿಳಿಸಿ. ನಾನು ಶಾಸಕರನ್ನ ಕೇಳ್ದೆ, ಮಂತ್ರಿಯಾಗೋಕೆ ಹೋಗಿದ್ದು ಅಂದಿದ್ದಾರೆ. 139 ಜನ ಡಿಕೆಶಿ ಜೊತೆ ಇದ್ದಾರೆ. 139 ಜನ ಸಿದ್ದರಾಮಯ್ಯ ಜೊತೆ ಇದ್ದಾರೆ. ಅದೇ 139  ಜನ ಹೈಕಮಾಂಡ್ ಜೊತೆ ಇದ್ದಾರೆ. ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಡಿಕೆಶಿ ಭೇಟಿ‌ಮಾಡಿದ್ರು,ನಾನು ಭೇಟಿ ಮಾಡ್ದೆ. ನಾವು ಭೇಟಿ ಮಾಡಲೇಬೇಕಲ್ಲ.ಅವರನ್ನ ಬಿಟ್ಟು ಇನ್ಯಾರು ಭೇಟಿ ಮಾಡೋಕೆ ಸಾಧ್ಯ ಅಂದಿದ್ದಾರೆ.

ಒಪ್ಪಂದ ಆಗಿದೆ ಅಂತ ಡಿ.ಕೆ.ಶಿವಕುಮಾರ್ ಎಲ್ಲಿ ಹೇಳಿದ್ದಾರೆ?. ಆ ರೀತಿ ಎಲ್ಲಿಯೂ ಒಪ್ಪಂದ ಆಗಿಲ್ಲ. ಸಿದ್ದರಾಮಯ್ಯ ೨೦೨೮ರವರೆಗೆ ಸಿಎಂ ಇರ್ತಾರೆ. ಅವರೇ ನಮ್ಮ ನಾಯಕರು ಅಂತ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಶಿವಕುಮಾರ್ ಸಿಎಂ ಆಗಬೇಕೆಂಬ ಆಸೆ ಇದೆ. ನಾನು ಈಗಾಗಲೇ ಹೇಳಿದ್ದೇನೆ. 2025 ರವರೆಗೆ ಸಿದ್ರಾಮಯ್ಯ ಇರ್ತಾರೆ. ಆ ನಂತರ ಡಿಕೆಶಿವಕುಮಾರ್ ಆಗ್ತಾರೆ. ಇದರಲ್ಲಿ ಯಾವುದೇ ಭಿನ್ನಾಬಿಪ್ರಾಯ ಇಲ್ಲ. ಹೈಕಮಾಂಡ್ ಹಾಕಿದ ಗೆರೆ ನಾವು ದಾಟಲ್ಲ ಎಂದಿದ್ದಾರೆ.

ನಾನು ಈಗಾಗಲೇ ಹೇಳಿದ್ದೇನೆ. ೨೦೨೮ ರವರೆಗೆ ಸಿದ್ರಾಮಯ್ಯ ಇರ್ತಾರೆ. ಆ ನಂತರ ಡಿ ಕೆ ಶಿವಕುಮಾರ್ ಆಗ್ತಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ಹಾಕಿದ ಗೆರೆ ನಾವು ದಾಟಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಕ್ಯಾಬಿನೆಟ್ ರಿಷಪಲ್ ಆಗಲಿದೆ. ಹಿಂದೆಯೇ ರಿಷಪಲ್ ಆಗಲಿತ್ತು. ನಾನೇ ಎರಡೂವರೆ ವರ್ಷ ಆಗಲಿ ಎಂದಿದ್ದೆ. ಈಗ ಕ್ಯಾಬಿನೆಟ್ ರಿಷಫಲ್ ಆಗಲಿದೆ. ತನ್ವೀರ್ ಸೇಠ್, ಖಾದರ್,ಹ್ಯಾರೀಸ್ ಎಲ್ಲರೂ ಇದ್ದಾರೆ.ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇದೆ. ನನಗೆ ಹೈಕಮಾಂಡ್ ಯಾವುದೇ ಹುದ್ದೆ ಕೊಡಲಿ. ನಾನು ಪಕ್ಷದ ಜವಾಬ್ದಾರಿ ಕೊಟ್ರೂ ಮಾಡ್ತೇನೆ. ಕುಮಾರಸ್ವಾಮಿಯೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರ ೨೦೨೮ ರವರೆಗೆ ಇರಲಿದೆ ಅಂತ. ಸುಮ್ಮನೆ ಆಗ ಹೋಗುತ್ತ ಈಗ ಹೋಗುತ್ತೆ ಅಂತಾರೆ.೨೦೨೮ ರವರೆಗೆ ಏನೂ ಆಗಲ್ಲ. ಬಿಜೆಪಿಯವರು ಹಗಲು ಗನಸು ಕಾಣ್ತಿದ್ದಾರಷ್ಟೇ ಎಂದು ತಿಳಿಸಿದ್ದಾರೆ.