ಮನೆ Latest News ವೈಟು ಬ್ಲ್ಯಾಕು ಎಲ್ಲದಕ್ಕೂ ಅವರೇ ಸಮರ್ಥನೆ ಕೊಡಬೇಕು; ರಾಜಣ್ಣ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ...

ವೈಟು ಬ್ಲ್ಯಾಕು ಎಲ್ಲದಕ್ಕೂ ಅವರೇ ಸಮರ್ಥನೆ ಕೊಡಬೇಕು; ರಾಜಣ್ಣ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

0

ಬೆಂಗಳೂರು; 2004ರಲ್ಲಿ ನಾನು ಜೆಡಿಎಸ್​​ನಿಂದ ಸ್ಪರ್ಧಿಸಿ ಶಾಸಕನಾಗಿದ್ದೆ, ಆಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್​ ವೈಟ್ ವಾಶ್​ ಆಗಿತ್ತು ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಅವರವರ ಹೇಳಿಕೆಗೆ ಅವರೇ ಸಮರ್ಥನೆ ಕೊಡಬೇಕು. ವೈಟು ಬ್ಲ್ಯಾಕು ಎಲ್ಲದಕ್ಕೂ ಅವರೇ ಸಮರ್ಥನೆ ಕೊಡಬೇಕು. ಅವರ ಹೇಳಿಕೆಗೆ ನಾನು ಉತ್ತರ ಕೊಡೋದಕ್ಕಾಗಲ್ಲ. ನನ್ನ ಜೊತೆಗೆ ಅವರು ಏನೂ ಹೇಳಿಕೊಂಡಿಲ್ಲ . ಸಿಎಂ, ಅಧ್ಯಕ್ಷರು ಇದ್ದಾರೆ ಅದರ ಬಗ್ಗೆ ಅವರೇ ಮಾತಾಡಬೇಕು. ನಾವು ಏನೇ ಹೇಳಿದ್ರು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡೋದು.ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ, ಅವರೇ ಉಳಿದಿದ್ದು ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ.

ದೆಹಲಿಗೆ ರೊಟಿನ್ ಹೋಗಿದ್ವಿ, ಅದರಲ್ಲಿ ವಿಶೇಷತೆ ಏನಿಲ್ಲ. ಸುರ್ಜೇವಾಲಾ ಮಾತ್ರ ಭೇಟಿ ಯಾಗಿದ್ದೆ. ಯಾವುದೇ ಪ್ರಸ್ತಾಪ ಆಗಿಲ್ಲ ಅಲ್ಲಿ, ಬೇರೇನು ಚರ್ಚೆ ಆಗಿಲ್ಲ. ಅವಕಾಶ ಬಂದಾಗ ಚರ್ಚೆ ಬಗ್ಗೆ ನೋಡೋಣ. ಬಿಹಾರ ಚುನಾವಣೆ ಫಲಿತಾಂಶ ಇನ್ನೂ ಬರಬೇಕು. ಸಿಎಂ ಜೊತೆ ನಾನು ಏನು ದೆಹಲಿಗೆ ಹೋಗಿಲ್ಲ ಎಂದಿದ್ದಾರೆ.

ಐದು ವರ್ಷ ಸಿಎಂ ಎಂಬ ಜಮ್ಮೀರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಹೇಳಿದ್ಮೆಲೆ ಮತ್ತೆ ನಾನು ಇನ್ನೇನು ಹೇಳಲಿ..? ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರದ ಬಗ್ಗೆ ಮಾತನಾಡಿ  ರಾಜು ಕಾಗೇ ಪತ್ರ ಗೊತ್ತಿಲ್ಲ. ನಮ್ಮ ನಿಲುವು ಅಖಂಡ ಕರ್ನಾಟಕ ಇರಬೇಕೆಂಬುದು. ಉಮೇಶ್ ಕತ್ತಿ ಇದ್ದಾಗಲೇ ಅಖಂಡ ಕರ್ನಾಟಕ ಇರಬೇಕು ಎಂದಿದ್ದೇನೆ. ಹೇಳೋದಕ್ಕೆ ಎಲ್ಲರಿಗೂ ಸ್ವತಂತ್ರ ಇದೆ ಎಂದು ತಿಳಿಸಿದ್ದಾರೆ.

ರಿಶಫಲ್ ಬಗ್ಗೆ ವರಿಷ್ಠರು ಹೇಳಬೇಕು. ಮೊದಲೇ ಕ್ರಾಂತಿ ಆಗಲ್ಲ ಅಂತಾ ಹೇಳಿದ್ದೀವಲ್ಲ. ಫೈನಲ್ ಆಗಿ ಪಕ್ಷದಲ್ಲಿನ ಎಲ್ಲರು ಅಲ್ಲಿಗೆ ಬಂದಿದ್ದಾರೆ ಅಷ್ಟೇ. ನವೆಂಬರ್ ಬಳಿಕ ಯಾವುದೇ ಕ್ರಾಂತಿ ಇಲ್ಲ ಎಂದು ತಿಳಿಸಿದ್ದಾರೆ.