ಮನೆ Latest News ಕಬ್ಬು ದರ ಏರಿಕೆ ವಿಚಾರವಾಗಿ ಕೇಂದ್ರ ಸರಕಾರ ಎಫ್ ಆರ್ ಪಿ ನಿರ್ಧಾರದ...

ಕಬ್ಬು ದರ ಏರಿಕೆ ವಿಚಾರವಾಗಿ ಕೇಂದ್ರ ಸರಕಾರ ಎಫ್ ಆರ್ ಪಿ ನಿರ್ಧಾರದ ಜವಾಬ್ದಾರಿ ಅವರ ಮೇಲೆ ಇದೆ: ಶಿವಮೊಗ್ಗ ದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ

0

ಬೆಂಗಳೂರು; ಕಬ್ಬು ದರ ಏರಿಕೆ ವಿಚಾರವಾಗಿ ಕೇಂದ್ರ  ಸರಕಾರ ಎಫ್ ಆರ್ ಪಿ  ನಿರ್ಧಾರದ ಜವಾಬ್ದಾರಿ ಅವರ ಮೇಲೆ ಇದೆ ಎಂದು ಶಿವಮೊಗ್ಗ ದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಬಹಳ ವರ್ಷದಿಂದ  ರೈತರಿಗೆ ಅದು ತೊಂದರೆ ಆಗಿದೆ. ಸಕ್ಕರೆ ಬೆಲೆ ಹೆಚ್ಚಳ ಆಗುವುದಿಲ್ಲ. ಎಫ್ ಆರ್ ಪಿ ಹೆಚ್ಚಳ ಮಾಡುವುದಿಲ್ಲ.

ಇದರಿಂದ ಕಾರ್ಖಾನೆ ಮಾಲೀಕರಿಗೆ  ಕಷ್ಟ ಆಗಿದೆ. ಇವರಿಂದ  ರೈತರಿಗೆ  ಸಿಗಬೇಕಾಗಿರುವ  ದರ ಕಬ್ಬಿಗೆ  ಸಿಗುತ್ತಿಲ್ಲ .ಈ ಹಿನ್ನಲೆಯಲ್ಲಿ  ರೈತರಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ  ಸಂಸದರು ಮತ್ತು ರಾಜ್ಯದ ಐವರು ಸಚಿವರು ಇದ್ದಾರೆ .ಅವರು ಕೇಂದ್ರ ದಲ್ಲಿ ಕುಳಿತು ಸಮಸ್ಯೆ  ಬಗೆಹರಿಸಬೇಕು. ಕೇಂದ್ರ  ಸಬೂಬು  ಹೇಳಿ ಜಾರಿ ಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೈತರಿಗೆ  ಸುಲಭವಾಗಿ  ರಾಜ್ಯ ಸರಕಾರ ಮತ್ತು  ಶಾಸಕರು ಸಿಗುತ್ತಾರೆ .ಹೀಗಾಗಿ  ನಮ್ಮ  ಮೇಲೆಯೇ ಹೆಚ್ಚು  ಒತ್ತಡ ಇದೆ.ಈಗಾಗಲೇ  ಸಚಿವರು ರೈತರ ಜೊತೆ ಮಾತುಕತೆ ಮಾಡಿದ್ದಾರೆ.ಸಿಎಂ ಈಗಾಗಲೇ  ಕಾರ್ಖಾನೆ  ಮಾಲೀಕರು ಮತ್ತು  ಕಬ್ಬು ಬೆಳೆಗಾರರ  ಜೊತೆ ಸಭೆ  ನಡೆಸುತ್ತಿದ್ದಾರೆ. ಇಂದು ಸಿಎಂ ಒಂದು ತೀರ್ಮಾನ  ತೆಗೆದುಕೊಳ್ಳುತ್ತಾರೆ. ಕೇಂದ್ರ  ಸರಕಾರವೇ 100 -200 ರೂಪಾಯಿ  ದರ ಜಾಸ್ತಿ ಮಾಡಬೇಕು. ಕೇಂದ್ರಕ್ಕೆ ರಾಜ್ಯ ಸರ್ಕಾರ ಎಲ್ಲ ತೆರಿಗೆ ಸಂದಾಯ ಮಾಡುತ್ತದೆ.ಕೇಂದ್ರ  ಸರ್ಕಾರ  ಜವಾಬ್ದಾರಿಯು ರಾಜ್ಯ  ಸರ್ಕಾರಕ್ಕೆ  ಮಾಡು ಅಂದ್ರೆ  ಹೇಗೆ .ಕೇಂದ್ರ  ಸರಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದ್ದಾರೆ.

19 ಸಂಸದರು ಮತ್ತು ಸಚಿವರು ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಅವರು ಇದರ ಬಗ್ಗೆ  ಪ್ರಶ್ನೆ ಮಾಡಬೇಕು . ರಾಜ್ಯ ರೈತರ ಹಿತಾಸಕ್ತಿ  ಕಾಪಾಡಲು  ಬದ್ಧವಾಗಿದೆ. ಕೇಂದ್ರ  ಸರಕಾರ ಕಬ್ಬು  ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡಬೇಕು. ನಾವು ನೀಡುವುದು  ಕೇವಲ  ತಾತ್ಕಾಲಿಕ  ಪರಿಹಾರ ಆಗುತ್ತದೆ ಎಂದು ಕೇಂದ್ರ  ಸರಕಾರದ ವಿರುದ್ಧ ಕೃಷಿ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ.