ಮನೆ Latest News ಸಿಂಧೂರ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಹಂತಕ್ಕೆ ಬಂದಿದ್ದಾರೆ; ಸಿಎಂ ಸಿದ್ದರಾಮಯ್ಯ ಅವರನ್ನು ಲೇವಡಿ...

ಸಿಂಧೂರ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಹಂತಕ್ಕೆ ಬಂದಿದ್ದಾರೆ; ಸಿಎಂ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ ಛಲವಾದಿ ನಾರಾಯಣ ಸ್ವಾಮಿ

0

ಬೆಂಗಳೂರು: ಸಿಂಧೂರ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಹಂತಕ್ಕೆ ಬಂದಿದ್ದಾರೆ ಎಂದು  ಸಿಎಂ ಸಿದ್ದರಾಮಯ್ಯ ಅವರನ್ನು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಲೇವಡಿ ಮಾಡಿದ್ದಾರೆ. ಆಪರೇಷನ್ ಸಿಂಧೂರ್ ವಿಚಾರದ ಬಗ್ಗೆ ಮಾತನಾಡಿದ ಅವರು ಜನ ರುಬ್ಬುತ್ತಾರೆ ಅಂತ ಸಾಕ್ಷಿ ಕೇಳುವುದು ಬಿಟ್ಟಿದ್ದಾರೆ. ಎಂದಿದ್ದಾರೆ.

ಸಿಎಂ ಸಿಂಧೂರ ಹಚ್ಚಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ಮಾಡಿದ್ದರಿಂದ‌ ಎರಡು ರೀತಿಯ ಬೆಲೆ ಸಿಕ್ಕಿದೆ. ಸಿಂಧೂರದ ವಿರುದ್ಧ ಇದ್ದವರ ಹಣೆಗೆ ಸಿಂಧೂರ ಬಂದಿದೆ. ಇದು ಮೋದಿ ಅವರಿಂದ ಮಾತ್ರ ಸಾಧ್ಯ. ಸಿಂಧೂರ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಹಂತಕ್ಕೆ ಬಂದಿದ್ದಾರೆ. ಓದದ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ‌ ಕೈಯಲ್ಲಿ ಚೆನ್ನಾಗಿ ಓದಲಿ ಅಂತಾ ಕಪಾಳಕ್ಕೆ ಹೊಡೆಸುತ್ತಿದ್ದರು. ಮೋದಿ ಇಬ್ಬರು ಹೆಣ್ಣು ಮಕ್ಕಳನ್ನು ಕರೆಸಿ ಪಾಕಿಸ್ತಾನಕ್ಕೆ ಕಪಾಳಕ್ಕೆ ಹೊಡೆಸಿದ್ದಾರೆ ಎಂದು ವಿಪಕ್ಷದ ಕಾಲೆಳೆದಿದ್ದಾರೆ.

ಪಾಕಿಸ್ತಾನಕ್ಕೆ ಶಕ್ತಿ ಎಲ್ಲಿದೆ ಅಂದರೆ ಭಾರತದಲ್ಲಿದೆ. ಅವರ ರುಂಡ ಚೆಂಡಾಡಿದರೆ, ಶಕ್ತಿ ಯಾರು ಕೊಡುತ್ತಿದ್ದರು ಅಂತ ಗೊತ್ತಾಗಲಿದೆ. ನಿನ್ನೆಯಿಂದ ಕೆಲವು ವ್ಯಕ್ತಿಗಳು ಮುಖಗಳನ್ನು ಊದಿಸಿಕೊಂಡು ಹೇಳಲೋ ಬೇಡವೋ ಅಂತ‌ ಹೇಳುತ್ತಿದ್ದಾರೆ. ಅವರು ಅಳುವುದು ಒಂದು ಬಾಕಿ. ಮೋದಿ‌ ಇದ್ದಾರೆ, ನಿಮ್ಮನ್ನೂ ಕಾಯುತ್ತಾರೆ. ಗಟ್ಟಿಯಾಗಿ ಭಾರತದ ಪರವಾಗಿ ಮಾತಾಡಿ ಎಂದಿದ್ದಾರೆ.

ಕೆಪಿಎಸ್ಸಿ ಪರೀಕ್ಷೆ ಎಡವಟ್ಟುಗಳ ಕುರಿತು ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು  ಕೆಪಿಎಸ್ಸಿ ಮರು ಪರೀಕ್ಷೆ ಮಾಡುವಂತೆ ಕೋರ್ಟ್ ಹೇಳಿದ ಮೇಲೂ ಅನ್ಯಾಯ ಆಗಿದೆ. ಆ ಅಭ್ಯರ್ಥಿಗಳು ನಮ್ಮ ಕಚೇರಿಗೆ ಬಂದು ಮನವಿ ಮಾಡಿದರು. ಪ್ರಶ್ನೆ ಮಾಡಿದವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಅಧಿಕಾರಿ ಆಗುವ ಅರ್ಹತೆ ಇರುವವರಿಗೆ, ಪೊಲೀಸರನ್ನು ಬಿಟ್ಟು ಹಲ್ಲೆ ಮಾಡಿಸುವ ಕೆಲಸ ಮಾಡಿದ್ದಾರೆ. ಕೋರ್ಟಿಗೆ ಹೋದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. ಕೋರ್ಟ್ ಆದೇಶ ಬಂದ ಮೇಲೂ ಮೀನಾ ಮೇಷ ಎಣಿಸಲಾಗುತ್ತಿದೆ. ಅಭ್ಯರ್ಥಿಗಳು ಯಾವುದೇ ರೀತಿಯ ಹೋರಾಟ ಮಾಡಿದರೂ ನಮ್ಮ ಪಕ್ಷ ಅವರ ಪರ ನಿಲ್ಲಲಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಭ್ಯರ್ಥಿಗಳು ಅನ್ಯಾಯ ಆಗಿದೆ ಅಂತ‌ ಹೋರಾಟ ಮಾಡಿದ್ದರು. ಆಗ ಅಂದಿನ ವಿಪಕ್ಷ ನಾಯಕ, ಈಗಿನ ಸಿಎಂ ಸಿದ್ದರಾಮಯ್ಯ ನ್ಯಾಯ ಕೊಡುವುದಾಗಿ ಹೇಳಿದ್ದರು. ಒಂದು ಹೆಣ್ಣು ಮಗು ಅಂತೂ ವೀರಾವೇಶದಿಂದ ಹೋರಾಟ ಮಾಡಿದ್ದರು. ಈಗ ಆ ಹೆಣ್ಣು ಮಗು ಎಲ್ಲಿ ನಾಪತ್ತೆಯಾಗಿದ್ದಾಳೋ ಗೊತ್ತಿಲ್ಲ. ತಾಯಿ ನಿಮ್ಮದೇ ಸಿಎಂ ಇದ್ದಾರೆ, ನ್ಯಾಯ ಕೇಳಿ ಕೊಡಿಸಮ್ಮ ಎಂದ ಅವರು ಇದು ಸ್ಕೀಮ್ ಸರ್ಕಾರ ಅಲ್ಲ, ಸ್ಕ್ಯಾಮ್ ಸರ್ಕಾರ. ನಿವೃತ್ತಿ ಆದ ಅಧಿಕಾರಿಗಳನ್ನು ಇವರು ಇನ್ನೂ ಬಿಡುತ್ತಿಲ್ಲ.  ಹೊಸದಾಗಿ ಬಂದವರಿಗೆ ಅನುಭವ ಆಗಬೇಕು ಅಂತ, ನಿವೃತ್ತಿ ಆದವರಿಂದ ಲೂಟಿ ಮಾಡಿಸುತ್ತಿದ್ದಾರೆ.  ವಿದ್ಯಾರ್ಥಿಗಳ ಜೊತೆ ಹೋರಾಟಕ್ಕೆ ನಾವೂ ಸಿದ್ದರಿದ್ದೇವೆ. ಪ್ರಜ್ಞೆ ಇರುವ ಸರ್ಕಾರ, ಎಲ್ಲರಿಗೂ ಪರೀಕ್ಷೆಗೆ ಅವಕಾಶ ಕೊಡಬೇಕು ಎಂದಿದ್ದಾರೆ.