ಬೆಂಗಳೂರು; ರಾಜಕೀಯ ಉದ್ದೇಶದಿಂದ ದೆಹಲಿಗೆ ಹೋಗಿರಲಿಲ್ಲ ಎಂದು ದೆಹಲಿಯಲ್ಲಿ ಎಐಸಿಸಿ ನಾಯಕರ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ಎರಡು ದಿನ ದೆಹಲಿಗೆ ತೆರಳಿದ್ದೆ. ರಾಜಕೀಯ ಉದ್ದೇಶದಿಂದ ದೆಹಲಿಗೆ ಹೋಗಿರಲಿಲ್ಲ. ಎಐಸಿಸಿ ಹೊಸ ಕಟ್ಟಡ ಉದ್ಘಾಟನೆಗೆ ಹೋಗಿರಲಿಲ್ಲ. ಹಾಗಾಗಿ ಕಟ್ಟಡ ನೋಡಲು ಹೋದಾಗ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿದ್ದೆ. ರಾಜಕೀಯ ಅಜೆಂಡಾ ಇಟ್ಕೊಂಡು ಹೋಗಿರಲಿಲ್ಲ.ಇದರಲ್ಲಿ ಮುಚ್ಚಿಡುವುದಂತದ್ದು ಏನೂ ಇಲ್ಲ. ಒಂದು ವೇಳೆ ರಾಜಕೀಯ ಚರ್ಚೆ ಮಾಡಿದ್ರೆ ಮಾಡಿದ್ದೆ ಅಂತ ಹೇಳ್ತೀನಿ. ಅಧ್ಯಕ್ಷರ ಬದಲಾವಣೆ , ಸಿಎಂ ಬದಲಾವಣೆ ಬಗ್ಗೆ ಎಲ್ಲೂ ಮಾತನಾಡಿಲ್ಲ. ಶೋಷಿತರ ಸಮಾವೇಶ ಬಗ್ಗೆ ಆಗಲಿ ಇನ್ನೊಂದು ವಿಚಾರ ಆಗಲಿ ರಾಜಕೀಯನೇ ಮಾತನಾಡಿಲ್ಲ. ಹತ್ತದಿನೈದು ನಿಮಿಷ ಭೇಟಿಯಾಗಿ ಬಂದೆ ಅಷ್ಟೇ. ದಯಮಾಡಿ ರಾಜಕೀಯದ ಬಗ್ಗೆ ಪ್ರಶ್ನೆ ಕೇಳಬೇಡಿ. ಕೆ.ಎನ್.ರಾಜಣ್ಣ, ಡಿಕೆಶಿ ಬಗ್ಗೆಯೂ ಕೇಳಬೇಡಿ ಎಂದು ಮಾಧ್ಯಮಗಳ ಮೇಲೆ ಪರಮೇಶ್ವರ್ ಗರಂ ಆಗಿದ್ದಾರೆ.
ಇನ್ನು ಸಿಎಂ ಮುಡಾ ಪ್ರಕರಣ ಕ್ಲೀನ್ ಚಿಟ್ ವಿಚಾರದ ಬಗ್ಗೆ ಮಾತಾನಾಡಿದ ಅವರು ಸಿಬಿಐಗೆ ಕೊಡುವ ವಿಚಾರದಲ್ಲಿ ಹೈಕೋರ್ಟ್ ಬೇಡ ಅಂತ ತೀರ್ಪು ನೀಡಿದೆ. ಎರಡು ಇಲಾಖೆ ಒಂದೇ ವಿಚಾರವಾಗಿ ತನಿಖೆ ಮಾಡಬಾರದು ಅಂತ ಹೇಳಿದೆ. ಹಾಗಾದ್ರೆ ತನಿಖೆಯನ್ನೇ ಪ್ರಶ್ನೆ ಮಾಡ್ತಿದ್ದಾರಾ ಬಿಜೆಪಿಯವರು. ಇವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತೆ. ಸರಿ ಇಲ್ಲ ಅಂದಾಯ ಯಾವುದೂ ಸರಿ ಇರಲ್ಲ. ಹೈಕೋರ್ಟೇ ಬೇಡ ಅಂದಾಗ ಮತ್ತೆ ಯಾಕೆ. ಬಿಜೆಪಿಯವರು ಬೇಕಾದ್ರೆ ಕೋರ್ಟಿಗೆ ಹೋಗಲಿ. ಮತ್ತೆ ಮತ್ತೆ ಅದೇ ವಿಚಾರ ಯಾಕೆ ಪ್ರಸ್ತಾಪ ಮಾಡ್ತಾರೆ. ಲೋಕಾಯುಕ್ತ ದವರೇ ತನಿಖೆ ಮಾಡಬೇಕು ಅಂತ ಕೋರ್ಟ್ ಹೇಳಿದೆ. ಅದಕ್ಕೆ ಅವರು ತನಿಖೆ ಮಾಡ್ತಿದ್ದಾರೆ. ಅವರ ತನಿಖೆಗೆ ಸರ್ಕಾರ ಯಾವುದೇ ಡೈರೆಕ್ಷನ್ ಕೊಡಲ್ಲ. ಲೋಕಾಯುಕ್ತ ಇಂಡಿಪೆಂಡೆಂಟ್ ಬಾಡಿ ಎಂದಿದ್ದಾರೆ.
ಗೃಹಲಕ್ಷ್ಮಿ ಹಣ ಹಾಕದ ವಿಚಾರದ ಬಗ್ಗೆ ಮಾತನಾಡಿದ ಅವರು ಒಂದೆರಡು ಏರಿಯಾದಲ್ಲಿ ಆಗಿದೆ. ಇದು ನಮ್ಮ ಮೊದಲ ಕಾರ್ಯಕ್ರಮ. ಎಲ್ಲವನ್ನೂ ಸರಿಪಡಿಸಿಕೊಳ್ತೇವೆ. ಸರಿಪಡಿಸಿಕೊಂಡು ಮುಂದುವರೆಯುತ್ತೇವೆ. ಹಿಂದಿನ ಸರ್ಕಾರ ಎಷ್ಟು ಬಿಲ್ ಪಾವತಿ ಮಾಡದೆ ಬಿಟ್ಟು ಹೋಗಿದ್ರು. ನಾವು ಈಗ ಅದೆಲ್ಲಾ ಬಾಕಿಯನ್ನ ಕೊಟ್ಟಿದ್ದೇವೆ. ಓವರ್ ಡ್ರಾಫ್ಟ್ ಮಾಡಿ, ಮ್ಯಾನೇಜ್ ಮಾಡ್ತೀವಿ. ಸರ್ಕಾರದ ಪರವಾಗಿ ಜನರಿಗೆ ಮನವಿ ಮಾಡ್ತೀನಿ, ದಯವಿಟ್ಟು ಸಹಕರಿಸಿ ಅಂತ ಎಂದು ಮನವಿ ಮಾಡಿದ್ದಾರೆ.