ಮನೆ Latest News ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು

ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು

0

ಬೆಂಗಳೂರು; ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ  ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಚಲನಚಿತ್ರ ನಟರಿಗೆ ಡಿಕೆಶಿ ವಾರ್ನಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ತರ ಸಪೋರ್ಟ್ ಮಾಡಬೇಕಂತೆ.?. ರಿಪೇರಿ ಮಾಡೋದಕ್ಕೆ ಆ ಕೆಲಸ ಮಾಡಲು ಬಹಳ ಜನ ಇದ್ದಾರೆ. ಇವರಿಗೆ 135 ಸೀಟು ಕೊಟ್ಟಿರೋದು ರಾಜ್ಯದ ಜನರ ಸಮಸ್ಯೆ ಆಲಿಸಲು,ಇವರು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ. ಅವರು ಬಹುಶಃ ಭೂಮಿ ಮೇಲಿಲ್ಲ ಅನ್ಸುತ್ತೆ. ಅವರ ಬಗ್ಗೆ ಮಾತಾಡದೆ, ಮೌನವಾಗಿರೋದೇ ಒಳ್ಳೆಯದು ಎಂದಿದ್ದಾರೆ.

ಡಿಸಿಎಂ ಹಿಂದುತ್ವದ ಜಪ ಮಾಡ್ತಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅವರವರ ಭಾವಕ್ಕೆ ಬಿಟ್ಟಿದ್ದು, ನಾನು ಟೀಕೆ ಮಾಡಲು ಹೋಗಲ್ಲ.ಅಂಬೇಡ್ಕರ್ ಅವರೇ ಅವರವರ ಭಾವನೆಗೆ ಅವಕಾಶ ನೀಡಿದ್ದಾರೆ ಎಂದರು. ರಾಜಕಾರಣಿ ಮಕ್ಕಳು ಚಲನಚಿತ್ರದಲ್ಲಿ ಪ್ಲಾಪ್ ಆಗಿ, ಈಗ ರಾಜಕಾರಣಕ್ಕೆ ಬಂದಿದ್ದಾರೆ ಅಂತ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತೆ.ಕೆಲವು ಬಾರಿ ಬದಲಾವಣೆ ಆಗುತ್ತೆ.ನಾನೇ ಒಂದು ಕಾಲದಲ್ಲಿ ರಾಜಕೀಯಕ್ಕೆ ಬರ್ತೀನಿ ಅಂದುಕೊಂಡಿರಲಿಲ್ಲ.ನಾನೇ ಅಚಾನಕ್ಕಾಗಿ ಬಂದೆ.ಏಳು ಬೀಳುಗಳಿರುತ್ತೆ.ಅದಕ್ಕೆ ಅಷ್ಟೇನು ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದಿದ್ದಾರೆ.

ನಾಳೆ ಅಧಿವೇಶನ ವಿಚಾರದ ಬಗ್ಗೆ ಈಗಿನ ಸರ್ಕಾರದಲ್ಲಿ ಏನೇ ಚರ್ಚೆ ಮಾಡುದ್ರೂ ಉಪಯೋಗ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಕೊಡ್ತೀವಿ ಅಂದ್ರು, ಎಷ್ಟು ಕೊಟ್ಟರು.ರಾಜ್ಯದಲ್ಲಿ ಇರೋ ಸಮಸ್ಯೆಗೆ ಹೆಚ್ಚಿನ ಮಹತ್ವಕ್ಕಿಂತ ರಾಜಕೀಯ ಪರ ವಿರೋಧ ಹೇಳಿಕೆಗೆ ಮಹತ್ವ ಹೆಚ್ಚಿದೆ.ಆದ್ರೆ ರಾಜ್ಯದ ಸಮಸ್ಯೆಗೆ ಹೆಚ್ಚು ಮಹತ್ವ ಇಲ್ಲ.ಇಂದಿನ ಸಭೆಯಲ್ಲಿ ಏನೆಲ್ಲಾ ಚರ್ಚೆ ಮಾಡಬೇಕು ಅಂತ ಚರ್ಚೆ ಮಾಡ್ತೀವಿ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಟರು ಯಾಕೆ ಬರಬೇಕು?; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಮುನಿರತ್ನ ತಿರುಗೇಟು

ಬೆಂಗಳೂರು; ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಟರು ಯಾಕೆ ಬರಬೇಕು? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಮುನಿರತ್ನ  ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಡಿಸಿಎಂ ಡಿ ಕೆ ಶಿವಕುಮಾರ್ ನಿನ್ನೆ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದಿದ್ದಾರೆ. ಸರ್ಕಾರದಿಂದ ಎಲ್ಲ ಸವಲತ್ತು ಕೊಡಬೇಕು ಸಿಗದಂತೆ ಮಾಡ್ತೇನೆ ಎಂದಿದ್ದಾರೆ. ಕನ್ನಡ ಚಿತ್ರರಂಗ ಅವರದ್ದಲ್ಲ, ಚಿತ್ರರಂಗಕ್ಕೆಒಂದು ಇತಿಹಾಸ ಇದೆ. ಇಷ್ಟು ಹಗುರವಾಗಿ ಟೈಟ್ ಮಾಡ್ತೇನೆ ಅಂದ್ರೆ, ನಿಮ್ಮ ಕಾಲೇಜಲ್ಲಿ ನಿಮ್ಮ ತೋಟದಲ್ಲಿ ಕೆಲಸ ಮಾಡುವವರು ತಪ್ಪು ಮಾಡಿದರೆ ಟೈಟ್ ಮಾಡಿ.ನೆಲ ಜಲ ಭಾಷೆಗೋಸ್ಕರ ಹೋರಾಟ ಮಾಡುವವರು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಫೋಟೋ ಯಾಕೆ ಇಟ್ಕೊಂಡು ಹೋರಾಟ ಮಾಡಿದಿರಿ? ನೀವು ಮೇಕೆದಾಟು ನಗಾರಿ ಹೊಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಲು ಕಾಂಗ್ರೆಸ್ ಬಾವುಟ ಇಟ್ಕೊಂಡು ಚಾಲನೆ ಕೊಟ್ಟಿದ್ದೀರಿ.ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಟರು ಯಾಕೆ ಬರಬೇಕು?.ಕನ್ನಡದ ಬಾವುಟ ಇಟ್ಟುಕೊಂಡು ಹೋರಾಟ ಮಾಡಿದ್ರಾ?. ಅಧಿಕಾರಕ್ಕೋಸ್ಕರ ನೀವು ಪಾದಯಾತ್ರೆ ಮಾಡಿದ್ದು. ಅದಾದಮೇಲೆ ಮೇಲೆ ಸರ್ಕಾರ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೋನಿಯಾ ರಾಹುಲ್ ಹೇಳಿದಂತೆ ತಮಿಳುನಾಡು ಕೇಳುತ್ತದೆ. ಕರ್ನಾಟಕಕ್ಕೆ ಅನುಕೂಲ ಆಗಲಿ ಅಂತ ತಮಿಳುನಾಡಿನ ಜೊತೆಗೆ ಕೂಡಿ ಪ್ರಧಾನಿಗೆ ಮನವಿ‌ ಕೊಡಿ ಎಂದ ಅವರು  ಕಾಂಗ್ರೆಸ್ ಬಾವುಟ ಹಿಡಿದುಕೊಂಡು ನಟ್ಟು ಬೋಲ್ಟು ಮಾತಾಡ್ತೀರಲ್ಲ ಇದನ್ನು ಬಿಡಿ. ನಾನು ನಿಮ್ಮ ಜೊತೆಗೆ ೨೦ ವರ್ಷದಿಂದ ಸ್ನೇಹಿತ.ನಾವಿಬ್ಬರೂ ಒಟ್ಟಿಗೆ ಬೆಳೆದವರು, ದೇವರು ಈ ಮಟ್ಟಕ್ಕೆ ಕೊಂಡೊಯ್ದ ಮೇಲೆ ಹೇಗೆ ಬಿಹೇವ್ ಮಾಡಬೇಕು. ಕರ್ನಾಟಕದ ಜನತೆ ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ ಅಂತ ಹೇಳ್ತಿದ್ದಾರೆ.ದೇವೇಗೌಡರು ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡಿದ್ರೆ ನೀವೆಲ್ಲಿ ಇರ್ತಾ ಇದ್ರಿ? ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡ್ರು ನಿಮ್ಮ ನಟ್ಟು ಬೋಲ್ಟು ಟೈಟ್ ಮಾಡಿಲ್ಲ ಅದಕ್ಕೆ ಇಷ್ಟು ಬೆಳೆದಿದ್ದೀರಿ. ಅದಕ್ಕೆ ರೇವಣ್ಣ ಮೇಲೊಂದು ಕೇಸ್, ಸೂರಜ್ ಮೇಲೊಂದು ಕೇಸ್. ನನ್ನ ರೇಪಿಸ್ಟ್ ರೇಪಿಸ್ಟ್ ಅಂತ ಕರೆದಿದ್ದೀರಿ ಡಿ ಕೆ ಸುರೇಶ್. ನಾನು ಅತ್ಯಾಚಾರ ಮಾಡಿಲ್ಲ ಅಂತ ಪ್ರಮಾಣ ಮಾಡ್ತೇನೆ. ನೀವೂ ಪ್ರಮಾಣ ಮಾಡಿ ಶತ್ರು ಸಂಹಾರ ಯಾಗ ಮಾಡುವ ಪ್ರತ್ಯಂಗಿರ ದೇವಸ್ಥಾನದಲ್ಲಿ ಪ್ರಮಾಣ ಮಾಡಿ.ಕುಸುಮಾ ಮತ್ತು ಹನುಮಂತರಾಯಪ್ಪ ಸುಳ್ಳು ಕೇಸ್ ಹಾಕಿಸಿಲ್ಲ ನನ್ನ ಮೇಲೆ ಎಂದು ಪ್ರಮಾಣ ಮಾಡಿ. ನಾನು ಮದುವೆಯಾಗಿ ೩೯ ವರ್ಷ ಆಯ್ತು.ನಿಮ್ಮ ದ್ವೇಷ ನನ್ನ ಮೇಲಿರಲಿ ಸುಳ್ಳು ಕೇಸ್ ಹಾಕಿಸಿದ್ದೀರಿ. ಭೂಮಂಡಲದ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೇನೆ ನಾನು ಅತ್ಯಾಚಾರ ಮಾಡಿಲ್ಲ ಎಂದು. ನಾನು ನಿಮ್ಮಣ್ಣ ೨೦ ನೇ ವರ್ಷದಿಂದ ಸ್ನೇಹಿತರು ಡಿಕೆ ಸುರೇಶ್ ಅವರೇ. ನಾವಿಬ್ಬರೂ ಸ್ನೇಹಿತರಾಗಿದ್ದಾಗ ಡಿಕೆ ಸುರೇಶ್ ಬೆಂಗಳೂರಿಗೇ ಬಂದಿರಲಿಲ್ಲ. ನನಗೆ ಜೈಲು ತೋರಿಸಿದ್ದು ಡಿಕೆ ಸಹೋದರರು, ಡಿಕೆಶಿಗೆ ದೇವರೇ ತಿಹಾರ್ ಜೈಲು ತೋರಿಸಿದ್ದಾನೆ ಎಂದರು.

ಇನ್ನು ಇದೇ ವೇಳೆ ಮೇಕೆದಾಟು ಪಾದಯಾತ್ರೆಯ ಫೋಟೋ ರಿಲೀಸ್ ಮಾಡಿದ್ದಾರೆ ಮುನಿರತ್ನ. ಕಾಂಗ್ರೆಸ್ ಬಾವುಟ ಕಾಂಗ್ರೆಸ್ ಶಾಲು ಹಾಕಿಕೊಂಡ ನಾಯಕರ ಫೋಟೋ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ನೀವು ಅಧಿಕಾರಕ್ಕೆ ಮಾಡಿದ ಹೋರಾಟ ಅದು.ಅದಕ್ಕೆ ಚಿತ್ರರಂಗ ಸಾಥ್ ಕೊಡಬೇಕಾಗಿತ್ತಾ? ನೀವು ಮುಖ್ಯಮಂತ್ರಿ ಸ್ಥಾನ ಕೊಡದಿದ್ರೆ ಏಕನಾಥ್ ಶಿಂಧೆ ಆಗ್ತೇನೆ ಅಂತಾ ರಿವರ್ಸ್ ಸ್ಟ್ರಾಟಜಿ ಮಾಡ್ತಿದ್ದಾರೆ ಅಷ್ಟೇ. ಇವರು ಏಕವ್ಯಕ್ತಿ ಆಗ್ತಾರೆ ಹೊರತು, ಏಕನಾಥ್ ಶಿಂಧೆ ಆಗಲ್ಲ ಎಂದು ಅಮಿತ್ ಶಾ‌ ಜೊತೆ ಕಾಣಿಸಿಕೊಂಡಿದ್ದಕ್ಕೆ ಮುನಿರತ್ನ ಕೌಂಟರ್ ಕೊಟ್ಟಿದ್ದಾರೆ.ನಾವು ಚುನಾವಣೆಗೆ ಬೇಕಾದರೆ ಹೋಗ್ತೇವೆ, ಆದ್ರೆ ಡಿಕೆಶಿ ಅವರನ್ನ ಕರೆದುಕೊಳ್ಳಲ್ಲ.  ಡಿಕೆಶಿ ಯಿಂದ ನಮ್ಮ ಪಕ್ಷ ಬೆಳೆಸುವ ಅಗತ್ಯ ಇಲ್ಲ. ನಮ್ಮ ಪಕ್ಷದಲ್ಲೇ ಬಹಳಷ್ಟು ನಾಯಕರಿದ್ದಾರೆ ಎಂದಿದ್ದಾರೆ.