ಮನೆ Latest News ದೇಶ ಲೂಟಿ ಆದರೂ ಪರವಾಗಿಲ್ಲ ನಿಮ್ಮನ್ನಾ ಆರಾಧಿಸಬೇಕಾ ?; ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ ಕೆ...

ದೇಶ ಲೂಟಿ ಆದರೂ ಪರವಾಗಿಲ್ಲ ನಿಮ್ಮನ್ನಾ ಆರಾಧಿಸಬೇಕಾ ?; ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ ಕೆ ವ್ಯಂಗ್ಯ

0

ಬೆಂಗಳೂರು; ನನ್ನನ್ನು ಮುಟ್ಟಿದರೇ ಜನ ದಂಗೇ ಏಳುತ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ದೇಶ ಲೂಟಿ ಆದರೂ ಪರವಾಗಿಲ್ಲ ನಿಮ್ಮನ್ನಾ ಆರಾಧಿಸಬೇಕಾ ? ಎಂದು ಪ್ರಶ್ನಿಸಿದ್ದಾರೆ.

ವಾಲ್ಮೀಕಿ ಹಗರಣದ 87 ಕೋಟಿ ಲೂಟಿ ಮಾಡಿರುವುದಕ್ಕೆ ನಿಮ್ಮನ್ನು ಆರಾಧಿಸಬೇಕಾ ?. ದೇಶ ಕೊಳ್ಳೆ ಹೊಡೆಯುತ್ತಿದ್ದರು ನಿಮ್ಮನ್ನು ಮುಟ್ಟಬಾರದಾ ? ಕೋವಿಡ್ ಹಗರಣದ ತನಿಖೆ ಬಗ್ಗೆಯೂ ಹೆಚ್ ಡಿ ಕೆ ಕೆಂಡಾಮಂಡಲರಾಗಿದ್ದಾರೆ. ಕೆಂಪಣ್ಣ ಆಯೋಗದ ವರದಿಯನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದೀರಾ ? ಸದನ ಸಮಿತಿ ನೈಸ್ ಸಿಬಿಐಗೆ ವಹಿಸಬೇಕಾ ಅಂದರು ಕೊಟ್ಟರಾ ?ನೀವು ಒಬ್ಬರೇ ರಾಜ್ಯ ಉಳಿಸುವವರ ಅಲ್ಲವಾ ? ಇನ್ನು ಯಾರ ಕೈಲೂ ಉಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮಾತು ಎತ್ತಿದ್ದರೇ ಇಡಿ, ಸಿಬಿಐ ಬಗ್ಗೆ ದುರಪಯೋಗ ಎಂದು ಆರೋಪ ಮಾಡುತ್ತೀರಾ? ನೀವು ಪೊಲೀಸ್ ಎಸ್ಐಟಿ ಮೂಲಕ ಮಾಡುತ್ತಿರುವುದು ಏನು ? ರಾಜ್ಯಪಾಲರ ಕಚೇರಿ ಸರ್ಚ್ ಮಾಡಬೇಕೆಂಬ ಅಧಿಕಾರಿ ಬಗ್ಗೆ ಮಾತನಾಡಿದೆ.vನ್ನ ಮೇಲೆ ಎಫ್ ಐ ಆರ್ ಮಾಡಿದರು. ನನಗೆ ತನಿಖೆ ಬಗ್ಗೆ ಕಿಂಚಿತ್ತೂ ಭಯ ಇಲ್ಲ. 15 ವರ್ಷದಿಂದ ತನಿಖೆ ಮಾಡುತ್ತಾನೆ ಇದ್ದೀರಾ? ಈ ರೀತಿ ಆದರೆ ನಿಮ್ಮ ಸಚಿವರ ಮೇಲೆ ಎಷ್ಟು ಎಫ್ ಐ ಆರ್ ಆಗಬೇಕು. ನಿಮ್ಮ ಆರೋಪಗನ್ನು ಯಾವುದು ಸಾಬೀತಾ ಮಾಡಿದ್ದೀರಾ ?. ಜಾಹೀರಾತು ನೀಡಿ ಆರೋಪ ಮಾಡಿದ್ದೀರಿ.ಪ್ರಾಸಿಕ್ಯೂಷನಿಂದ ಏನು ಆಗುವುದಿಲ್ಲ . ಪೋಸ್ಟ್ ಹಾಕಿದವರನ್ನು ಅರೆಸ್ಟ್ ಮಾಡುತ್ತೀರಾ. ಸರ್ಕಾರ ಅತಂತ್ರವಾಗುವುದಕ್ಕೆ ಈಗ ಕಾಲ ಬಂದಿಲ್ಲ. ಮುಂದಿನ ದಿನಗಳಲ್ಲಿ ಅದು ಬರುತ್ತದೆ ಎಂದಿದ್ದಾರೆ.