ಮನೆ Latest News ಅಕ್ಟೋಬರ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ ಮನೆಗೆ ಹೊಸ ಸದಸ್ಯ ಆಗಮನ

ಅಕ್ಟೋಬರ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ ಮನೆಗೆ ಹೊಸ ಸದಸ್ಯ ಆಗಮನ

0

ಬೆಂಗಳೂರು: ಕಳೆದ ವರ್ಷ ಆಗಸ್ಟ್ ನಲ್ಲಿ ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಚ ತಮ್ಮ ಬಹುಕಾಲದ ಗೆಳೆಯ ಬಿಗ್ ಬಾಸ್ ಖ್ಯಾತಿಯ ಕೊಡಗಿನ ಕುವರ ಭುವನ್ ಪೊನ್ನಣ್ಣ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಮೂಲಕ ಹಲವು ವರ್ಷಗಳಿಂದ ಭುವನ್ ಹಾಗೂ ಹರ್ಷಿಕಾ ಮಧ್ಯೆ ಏನೋ ಇದೆ ಅಂತಾ ಹರಿದಾಡ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದರು.

ಇದೀಗ ಈ ಮುದ್ದಾದ ಜೋಡಿ ಮದುವೆಯಾಗಿ ಒಂದು ವರ್ಷ ಆಗೋದ್ರೊಳಗೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ನಟಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಇದೀಗ ಮೊದಲ  ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಕೊಡವ ಶೈಲಿಯಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ದಂಪತಿ ಹಂಚಿಕೊಂಡಿದ್ದಾರೆ.

ಇನ್ನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಹರ್ಷಿಕಾ ಪಕ್ಕಾ ಗೃಹಿಣಿಯಂತಾಗಿದ್ದಾರೆ. ಸಿನಿಮಾದಿಂದ ದೂರವೇ ಉಳಿದ್ದಾರೆ ಹರ್ಷಿಕಾ. ಯೂಟ್ಯೂಬ್ ನಲ್ಲಿ ಒಂದಷ್ಟು ವೀಡಿಯೋ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿದ್ದಾರೆ.ಇದೀಗ ತಮ್ಮ ಮನೆಗೆ ಹೊಸ ಅತಿಥಿಯ ಆಗಮನ ಆಗುತ್ತಿರುವ ಶುಭ ಸಮಾಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭುವನ್ ಹಾಗೂ ಹರ್ಷಿಕಾ ಕೊಡವ ಧಿರಿಸಿನಲ್ಲಿರುವ ಫೋಟೋ ಒಂದನ್ನು ಶೇರ್ ಮಾಡಿರುವ ಹರ್ಷಿಕಾ. “ಗೆಳೆಯರೆ ,ಇಂದಿನವರೆಗು ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರದ್ದು ಬಹಳ ವರ್ಷಗಳ ಗೆಳೆತನ. ಕೊರೊನಾ ಸಂದರ್ಭದಲ್ಲಿ, ಮಡಿಕೇರಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ಭುವನ್ ಹಾಗೂ ಹರ್ಷಿಕಾ ಸಹಾಯ ಮಾಡಿದ್ರು. ಅಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಇದೀಗ ನಿಜ ಜೀವನದಲ್ಲೂ ಸತಿ ಪತಿಗಳಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇನ್ನು ಈ ವರ್ಷ ಹರ್ಷಿಕಾ ಭುವನ್ ಜೊತೆ ಇನ್ನೊಂದಿಷ್ಟು ತಾರಾ ಜೋಡಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಿಲನ ನಾಗರಾಜ್- ಡಾರ್ಲಿಂಗ್ ಕೃಷ್ಣ, ಚಂದನ್- ಕವಿತಾ ಗೌಡ,  ನೇಹ ಗೌಡ-ಚಂದನ್ ಹಾಗೇ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ – ರಣ್ವೀರ್ ಸಿಂಗ್ ಕೂಡ ಈ ವರ್ಷವೇ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ.