ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ವೀಕ್ಷಕರು ಇಬ್ಬರೂ ಕೂಡ ಅತ್ಯಂತ ಕಾದು ಕೂರುವ ಕ್ಷಣ ಅಂದ್ರೆ ಅದು ಬಿಗ್ ಬಾಸ್ ಮನೆಗೆ ಫ್ಯಾಮಿಲಿ ಎಂಟ್ರಿ ಯಾವಾಗ ಅಂತಾ. ಅದರಲ್ಲೂ ಈ ಬಾರಿಯ ಸೀಸನ್ ನಲ್ಲಿ ಬಹುತೇಕರು ಹನುಮಂತ ಲಮಾಣಿ ಅವರ ಹೆತ್ತವರು ಬಿಗ್ ಬಾಸ್ ಮನೆಗೆ ಬರೋದಕ್ಕೆ ಕಾಯುತ್ತಿದ್ದರು. ಕೊನೆಗೂ ಅವರು ಬಿಗ್ ಬಾಸ್ ಮನೆಗೆ ಬಂದೇ ಬಿಟ್ಟಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಜನ ಸ್ಪರ್ಧಿಗಳಿದ್ದಾರೆ. ಆ ಜನ ಸ್ಪರ್ಧಿಗಳ ಪೈಕಿ ಕೊನೆಯದಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಹನುಮಂತು ಅವರ ಕುಟುಂಬ. ಹನುಮಂತು ಅವರ ಕುಟುಂಬ ಬರೋದಕ್ಕೆ ಮೊದಲು ಹನುಮಂತು ಪುಟ್ಟ ಮಗುವಿನಂತೆ ನಮ್ಮ ಮನೆಯವರು ಯಾವಾಗ ಬರ್ತಾರೆ ಅಂತಾ ಕಾದು ಕೂತಿದ್ದರು. ಪದೇ ಪದೇ ಯಾರೇ ಬಂದ್ರೂ ಹನುಮಂತು ಕಣ್ಣು ನಮ್ಮ ಮನೆಯವರೇ ಬಂದಿರ್ಬೋದಾ ಅಂತಾ ಹುಡುಕಾಡುತ್ತಿತ್ತು. ಕೊನೆಗೂ ಹನುಮಂತು ಅವರ ತಂದೆ ತಾಯಿ ಇಡೀ ಮನೆಗ ರೊಟ್ಟಿ ಊಟ ಸಹಿತ ಎಂಟ್ರಿಯಾಗುತ್ತಾರೆ.
ಇತ್ತ ಮನೆಗೆ ತಂದೆ ತಾಯಿ ಬರುತ್ತಿದ್ದಂತೆ ಹನುಮಂತು ಕೊಂಚ ಭಾವುಕರಾಗುತ್ತಾರೆ. ಲಂಬಾಣಿ ಭಾಷೆಯಲ್ಲೇ ಮಾತನಾಡುತ್ತಾ ಹನುಮಂತು ಅವರ ತಾಯಿ ಹನುಮಂತು ಅವರನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಹನುಮಂತು ಎಷ್ಟೇ ಸಮಾಧಾನ ಮಾಡೋದ್ರು ಅವರು ಅಳೋದು ನಿಲ್ಲಿಸೋದಿಲ್ಲ. ಕೊನೆಗೆ ಅಳಬೇಡ ನಾನು ಆರಾಮಿದ್ದೀನಿ ಅನ್ನುತ್ತಾರೆ ಹನುಮಂತು. ಅಲ್ಲಿಗೆ ನಿನ್ನೆಯ ಎಪಿಸೋಡ್ ಅಂತ್ಯವಾಗುತ್ತೆ.
ಸದ್ಯಕ್ಕೆ ಹನುಮಂತು ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ ಹಾಗಾದ್ರೆ ಹನುಮಂತು ಅವರು ಇನ್ಮೇಲೆ ಆಟವನ್ನು ಇನ್ನೂ ಚೆನ್ನಾಗಿ ಆಡುತ್ತಾರಾ ಅಂತಾ. ವೀಕೆಂಡ್ ಎಪಿಸೋಡ್ ನಲ್ಲಿ ವೀಕ್ಷಕರ ಕಡೆಯಿಂದ ಹನುಮಂತು ಅವರಿಗೆ ಪ್ರಶ್ನೆಯೊಂದು ಬಂದಿತ್ತು. ಅದರಲ್ಲಿ ಹನುಮಂತು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಕೊಂಚ ಡಲ್ ಆಗಿದ್ದಾರೆ. ಯಾಕೆ ನಿಮ್ಮ ಹುಡುಗಿ ನೆನಪು ಆಗುತ್ತಿದ್ಯಾ ಅಂತಾ ಕೇಳಲಾಗಿತ್ತು. ಆಗ ಆ ಪ್ರಶ್ನೆಗೆ ಉತ್ತರಿಸಿದ ಹನುಮಂತು ಹಾಗೇನಿಲ್ಲ. ಇತ್ತೀಚೆಗೆ ನನಗೆ ಮನೆಯ ನೆನಪು ಕಾಡುತ್ತಿದೆ. ಮನೆಯ ನೆನಪು ಬಂದಾಗ ನಾನು ಕೊಂಚ ಡಲ್ ಆಗುತ್ತೇನೆ. ಹೊರತಾಗಿ ಬೇರೇನಿಲ್ಲ. ಮನೆಯವರ ಕಡೆಯಿಂದ ಒಂದು ಹಲೋ ಅನ್ನೋ ಧ್ವನಿ ಬಂದ್ರೆ ಸಾಕು. ನಾನು ಖುಷಿಯಾಗಿ ಮತ್ತೆ ಆಡುತ್ತೇನೆ ಎಂದಿದ್ದರು. ಇದೀಗ ಹನುಮಂತು ತಂದೆ ಹಾಗೂ ತಾಯಿ ಇಬ್ಬರೂ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇಬ್ಬರು ಬಂದ್ಮೇಲೆ ಇದೀಗ ಹನುಮಂತು ಮತ್ತೆ ತಮ್ಮ ರಿಯಲ್ ಖದರ್ ತೋರಿಸುತ್ತಾರಾ ಅಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಹಾಗೇ ನೋಡಿದ್ರೆ ಉಳಿದ ಸ್ಪರ್ಧಿಗಳಿಗೆ ಕಂಪೇರ್ ಮಾಡಿದ್ರೆ ಹನುಮಂತು ಅವರು ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಬೆಸರಲ್ಲಿ ಸೋಷಿಯಲ್ ಮಾಡಿದಲ್ಲಿ ಸಾಕಷ್ಟು ಫ್ಯಾನ್ ಪೇಜುಗಳಿವೆ. ಅವರೇ ವಿನ್ನರ್ ಆಗ್ಬೇಕು ಅನ್ನೋ ರೀತಿ ಅಭಿಯಾನಗಳೇ ನಡೆಯುತ್ತಿದೆ. ಸದ್ಯ ಮನೆಯವರು ನೋಡಿ ಹನುಮಂತು ಅವರಿಗೆ ಸ್ಪೆಷಲ್ ಎನರ್ಜಿ ಬಂದಿದ್ದು ಈಗ ಮತ್ತೆ ಜೋಷ್ ನಿಂದ ಆಡುತ್ತಾರಾ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನಿರೋದು ಕೆಲವೇ ಕೆಲವು ದಿನಗಳು ಆಗಿರೋದರಿಂದ ಹನುಮಂತು ಇರೋ ಕೆಲವೇ ಕೆಲವು ದಿನಗಳಲ್ಲಿ ತಮ್ಮ ರಿಯಲ್ ಆಟವನ್ನು ತೋರಿಸಬೇಕಿದೆ. ಮುಂದಿನ ದಿನಗಳಲ್ಲಿ ಹನುಮಂತು ಅವರು ಯಾವ ರೀತಿ ಆಟ ಆಡ್ತಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.