ಮನೆ Latest News ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಪಾರ್ಟಿ ವಿಚಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ...

ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಪಾರ್ಟಿ ವಿಚಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ

0

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಪಾರ್ಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಡಿನ್ನರ್ ಮೀಟಿಂಗ್ ರೂವಾರಿಯೇ ಸಿದ್ದರಾಮಯ್ಯ. ಡಿನ್ನರ್ ಮೀಟಿಂಗ್ ಏರ್ಪಾಡು ಮಾಡ್ತಿರೋದೆ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.

30 ತಿಂಗಳು ಆದ್ಮೇಲೆ ಇಳಿಯಬೇಕಲ್ಲ. ಅದಕ್ಕೆ ಸುಮ್ಮನ ಏನೇನೊ ಆಟ ಆಡ್ತಿದ್ದಾರೆ. 16th ಲೂಹಿ ಅಂತ ಯೂರೋಪ್ ನಲ್ಲಿ ಒಬ್ಬರು ಇದ್ರು. ಅವನನ್ನ ನಿನ್ನ ನಂತರ ಯಾರು ಅಂತ ಕೇಳ್ತಾರೆ. ಆಗ ಆತ ನನ್ನ ನಂತರ ಜಲಪ್ರಯಳ ಆಗಲಿ ಅಂತಾನೆ. ಜಲಪ್ರಳಯ ಆದರೆ ಒಬ್ಬರೂ ಉಳಿಯುವಂತಿಲ್ಲ. ಸಿದ್ದರಾಮಯ್ಯ ನಂತರ ಎಲ್ಲವೂ ಜಲಪ್ರಳಯ.ಕಾಂಗ್ರೆಸ್ ಸಹ ಇರಬಾರದು ಅನ್ನೋ ಹಾಗೆ. ಸಿದ್ದರಾಮಯ್ಯ ಬೆಳವಣಿಗೆ ಸರ್ಕಾರಕ್ಕೆ ತೊಂದರೆ. ಕಾಂಗ್ರೆಸ್ ಪಕ್ಷವನ್ನ ಮುಗಿಸುವ ವಿಚಾರ. ಸಿದ್ದರಾಮಯ್ಯ ಮುಂದುವರಿಯಬೇಕು ಅಥವಾ ಹೇಳಿದವರು ಮುಂದುವರಿಯಬೇಕು ಅದಕ್ಕೆ ಈ ಡಿನ್ನರ್ ಮೀಟಿಂಗ್. Its all depend upon ಹೈಕಮಾಂಡ್, ಅವರು ಏನು ಹೇಳ್ತಾರೊ ನೋಡ್ಬೇಕು. ಡಿಕೆ‌ ಶಿವಕುಮಾರ್ ಗೆ ಯಾವುದೇ ಕಾರಣಕ್ಕೂ ತಪ್ಪಿಸೋಕೆ ಆಗೊಲ್ಲ. ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ 40 ವರ್ಷದಿಂದ ಕಾಂಗ್ರೆಸ್ ನಲ್ಲಿ‌ ಇದ್ದಾರೆ. ಅವರು ಯಾವುದೇ ಊರಿಗೆ ಹೋದ್ರೂ 50 ಜನ ಕಾರ್ಯಕರ್ತರನ್ನ ಗುರುತಿಸುತ್ತಾರೆ. ಆ ಕಾರ್ಯಕರ್ತರೂ ಈ ಸಿದ್ದರಾಮಯ್ಯಗೆ ಗೊತ್ತಿಲ್ಲ. ಚಮಚ, ಚೇಳಾಗಳನ್ನ ಸಿದ್ದರಾಮಯ್ಯ ಜೊತೆಗೆ ಇಟ್ಟುಕೊಂಡು ತಿರುಗಾಡ್ತಿದ್ದಾರೆ ಎಂದರು.

ಅಧಿಕಾರ ಹಂಚಿಕೆ ಆಗಲೇಬೇಕು. ಡಿ ಕೆ ಶಿವಕುಮಾರ್ ದುಡಿದಿಲ್ವಾ? ಒಕ್ಕಲಿಗ ಸಮಾಜ ವೋಟ್ ಹಾಕಿಲ್ವಾ?. 136 ಸೀಟು ಬರೋಕೆ ಅವರ ಹೂಡಿಕೆ ಇಲ್ವಾ?. ಇಷ್ಟೆಲ್ಲ ಇದ್ರೂ ಅವರಿಗೆ ಅವಕಾಶ ಕೊಡೊಲ್ಲ ಅಂದ್ರೆ ಹೇಗೆ?. Its commit of the AICC, ಆಗಲೇಬೇಕು. ಉಪಮುಖ್ಯಮಂತ್ರಿ ಆದ್ಮೇಲೆ ಮುಖ್ಯಮಂತ್ರಿ ಮಾಡಲೇಬೇಕು. ಈ ಹಿಂದೆ ಡಿಸಿಎಂ ಆಗಿದ್ದವರೆಲ್ಲ ಸಿಎಂ ಆಗಿದ್ದಾರೆ. ಡಿಕೆಶಿ ಕೇಳುವುದರಲ್ಲಿ ತಪ್ಪೇನಿದೆ? ಎಂದ ನಾಳೆ ಪರಮೇಶ್ವರ್ ಡಿನ್ನರ್ ಮೀಟಿಂಗ್ ವಿಚಾರಕ್ಕೆ ರಿಯಾಕ್ಟ್ ಮಾಡಿ ಕರೆಯಲಿ ಬಿಡಿ, ಊಟ ಮಾಡ್ತಾರೆ ಹೋಗ್ತಾರೆ ಎಂದಿದ್ದಾರೆ.

ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರ ಬಗ್ಗೆ ಮಾತನಾಡಿ ಅನ್ನ, ಅಕ್ಷರ, ನೀರು, ಉದ್ಯೋಗ ಕೊಟ್ಟವರು ಪ್ರಿನ್ಸಸ್. ಅವರ ಹೆಸರು ತೆಗೆದು ಸಿದ್ದರಾಮಯ್ಯ ಹಾಕಿದ್ರೆ ಯಾರೂ ಒಪ್ಪಲ್ಲ.ಮೂಡಾ ಕಚೇರಿಗೆ ಸಿದ್ದರಾಮಯ್ಯ ಹೆಸರಿಟ್ಟರೆ ಒಳ್ಳೆಯದು. ಮೂಡಾ ಮಾಲ್, ಮೂಡಾ ಸಿದ್ದರಾಮಯ್ಯ ಅಂತ ಹೆಸರಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವ್ಯಂಗ್ಯ ಮಾಡಿದ್ದಾರೆ.