ಬೆಂಗಳೂರು; ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಬಜೆಟ್‌ಗೆ ನನ್ನ ಸಲಹೆ ಎಂದಾದರೂ ಅವರು ತೆಗೆದುಕೊಳ್ಳಬಹುದು ಎಂದಿದ್ದಾರೆ.
ಮಾರ್ಚ್ ಮೂರಿಂದ ಅಧಿವೇಶನದ ಆರಂಭವಾಗ್ತಿದೆ. ಆಯುವ್ಯವಯದ ಅಧಿವೇಶನದ ಹೀಗಾಗಿ ಮಹತ್ವ ಇರಲಿದೆ. ಜನರ ಶ್ರಮದ ಬೆವರಿಗೆ ಖಜಾನೆ. ಬಜೆಟ್ ಬಗ್ಗೆ ಹಣಕಾಸು ಸಚಿವರ ಓದುತ್ತಾರೆ . ಹಲವಾರು ದುಂದು ವೆಚ್ಚಗಳು ಆಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲವಾಗಿದೆ. ಬಜೆಟ್ ಮುಂಚಿತವಾಗಿ ಶಾಸಕರೊಂದಿಗೆ ಚರ್ಚೆಯಾಗಬೇಕು. ಸರ್ಕಾರ ನಡೆಸೋರಿಗೆ ಇದರ ಬಗ್ಗೆ ಕಾಳಜಿ ಇಲ್ಲ. ಕ್ಯಾಬಿನೆಟ್ ರ್ಯಾಂಕ್ ಸಚಿವರು 34 ಇದ್ದಾರೆ. ಇವರಿಗೆ ಪಿಎ ಗಳು ಆಫೀಸರ್ ಗಳು ಇದ್ದಾರೆ.ಎಷ್ಟು ಬೇಕಾದರೂ ಜನರನ್ನ ಆಫೀಸ್‌ಗೆ ತೆಗೆದುಕೊಂಡಿದ್ದಾರೆ. ಇವರಿಗೆ ಯಾರು ಅಧಿಕಾರ ಕೊಟ್ಟವರು? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಕಚೇರಿಯಲ್ಲಿಯೂ 200 ಜನ ಸಿಬ್ಬಂದಿಯಿದ್ದಾರೆ. ಇವರಿಗೆ ಇಷ್ಟೊಂದು ಜನ ನೇಮಕ್ಕೆ ಅಧಿಕಾರ ಕೊಟ್ಟವರು ಯಾರು? ಬಜೆಟ್‌ಗೆ ನನ್ನ ಸಲಹೆ ಎಂದಾದರೂ ಅವರು ತೆಗೆದಯಕೊಳ್ಳಬಹುದು. 16ನೇ ಆಯುವಯ ಮಂಡಣೆ ಮಾಡ್ತಿದ್ದಾರೆ. ಯಾವುದಾದರೂ ಹೊಸ ರೂಪ ಕೊಡಬೇಕು. ಹೊಸ ರೂಪ ಕೊಡುವಂತದ್ದು ಆಗ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಪಿಎ ಪಿಎಸ್ ಕ್ಯಾಬಿನೆಟ್ ರ್ಯಾಂಕ್. ಪ್ರಭಾಕರ್ ಕ್ಯಾಬಿನೆಟ್ ರ್ಯಾಂಕ್ . ವಿರೋದ ಪಕ್ಷವೂ ಹಣಕಾಸಿನ ವಿಚಾರದಲ್ಲಿ ಶೂನ್ಯ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಕೆಲಸ ವಾಗಬೇಕು. ವಿರೋಧ ಪಕ್ಷ ಆಡಳಿತ ಪಕ್ಷ ಎಲ್ಲದರಲ್ಲೂ ಸಮರ್ಥರಿದ್ದಾರೆ .ಆದರೆ ಎಲ್ಲೋ ಒಂದು ಕಡೆ ಅಸಮರ್ಥರಾಗ್ತಿದ್ದಾರೆ. ಎಸ್ ಎಮ್ ಕೃಷ್ಣ ಆಡಳಿತದ ವೇಳೆ ಅವರ ಕಚೇರಿಯಲ್ಲಿ 470 ಜನ ಸಿಬ್ಬಂದಿ ಇದ್ದರು. ಆಗ ನಾನು ವಿರೋಧಿಸಿದ್ದೆ. ಕಚೇರಿ ಸಿಬ್ಬಂದಿ ಕಡಿತ ಮಾಡಿ ಎಂದಿದ್ದೆ. ಲೋಕಲ್ ಬಾಡಿ ಎಲೆಕ್ಷನ್ ಮಾಡದೇ 5 ವರ್ಷವಾಯ್ತು.ಜಿಎಸ್‌ಟಿ ಮೀಟಿಂಗ್‌ನ ಸಿಎಂ ಸಿದ್ದರಾಮಯ್ಯ ಅಟೆಂಡ್ ಮಾಡಿಲ್ಲ. ಫೈನಾನ್ಸ್ ಮಿನಿಸ್ಟರ್ ಅವರೇ ಇದ್ದಾರೆ. ಅವರು ಜಿಎಸ್‌ಟಿ ಮೀಟಿಂಗ್‌ಗೆ ಹೋಗಬೇಕಿತ್ತು. ರಾಜ್ಯಕ್ಕಾಗುವ ಅನ್ಯಾಯದ ಬಗ್ಗೆ ಮಾತಾಡಬೇಕಿತ್ತು. ಸುಮ್ಮನೆ ಇಲ್ಲಿ ಏನೋ ಹೇಳೋದಲ್ಲ ಎಂದಿದ್ದಾರೆ.











