ಮನೆ Latest News ವಿಧಾನಸೌಧದಲ್ಲಿ ಗ್ಯಾರಂಟಿ  ಅನುಷ್ಠಾನ ಸಮಿತಿ  ಅಧ್ಯಕ್ಷ ಹೆಚ್ ಎಂ ರೇವಣ್ಣರಿಂದ ಸುದ್ದಿಗೋಷ್ಟಿ

ವಿಧಾನಸೌಧದಲ್ಲಿ ಗ್ಯಾರಂಟಿ  ಅನುಷ್ಠಾನ ಸಮಿತಿ  ಅಧ್ಯಕ್ಷ ಹೆಚ್ ಎಂ ರೇವಣ್ಣರಿಂದ ಸುದ್ದಿಗೋಷ್ಟಿ

0

ವಿಧಾನಸೌಧದಲ್ಲಿ ಗ್ಯಾರಂಟಿ  ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣರಿಂದ ಸುದ್ದಿಗೋಷ್ಟಿ ನಡೆಯಿತು.ಈ ವೇಳೆ ಮಾತನಾಡಿದ ಅವರು ಭಾರತದಲ್ಲಿ ಕರ್ನಾಟಕ ರಾಜ್ಯ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ನ್ಯಾಯ,  ತಲ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿ ಇದೆ. ನಾವು ಗ್ಯಾರಂಟಿ ಕೋಡ್ತೀವಿ ಅಂದಾಗ ಬಿಜೆಪಿ ಮೋದಿ ಅವರಿಂದ ಹಿಡಿದು ರಾಜ್ಯ ನಾಯಕರು ಗ್ಯಾರಂಟಿ ಯೋಜನೆಗಳನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗುತ್ತೆ ಅಂತ ಹೇಳಿ ವಿರೋಧ ಮಾಡಿದ್ರು. ಸಿದ್ದರಾಮಯ್ಯ ಅವ್ರ ಸಿಎಂ ಆಗಿದ ತಕ್ಷಣವೇ ಮೊದಲ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ರು. ಮಹಿಳೆಯ ಸಬಲೀಕರಣಕ್ಕೆ  ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆ ಮಾಡಿದ್ದಾರೆ. ಶಕ್ತಿ ಯೋಜನೆ ಅಡಿ ೫೦೦ ಕೋಟಿಗೂ ಹೆಚ್ಚು ಮಹಿಳೆಯರು ಪ್ರವಾಸ ಮಾಡಿದ್ದಾರೆ.ಶಕ್ತಿ ಯೋಜನೆಯಿಂದ ಆಗಿರುವ ಉಪಯೋಗ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ ಎಂದರು.

ಗ್ಯಾರಂಟಿ ಹಣದಿಂದ ಅನೇಕ ಜನ ಮಹಿಳೆಯರು ಸ್ವಾವಲಂಬಿಗಳು ಆಗಿದ್ದಾರೆ. ಗೃಹ ಲಕ್ಷ್ಮಿ ಗೆ ಎರಡು ಸಾವಿರ ಕೋಡ್ತೀವಿ ಅಂದಾಗ ಅತ್ತೆಗೆ ಕೊಡ್ತೀರಾ, ಸೊಸೆಗೆ ಕೊಡ್ತೀರಾ ಅಂದ್ರು. ಅನೇಕ ಮಹಿಳೆಯರು ಬಳೆ,ಬಟ್ಟೆ ಅಂಗಡಿ,ಬೋರ್ ವೆಲ್ ಕೊರೆಸಿದ್ದಾರೆ. ಅನೇಕ ಮಹಿಳೆಯರ ಜೀವ ಶೈಲಿ ಆಗಿದೆ. ಗೃಹ ಜ್ಯೋತಿಯಿಂದ ಅನೇಕ ಮನೆಗಳಿಗೆ ಬೆಳಕು ಬಂದಿದೆ. ಯಾರು ಹಸಿವಿನಿಂದ ಯಾರು ಸಾಯಬಾರದ್ದು ಅಂತ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದ್ರು. ಕೇಂದ್ರ ಸರ್ಕಾರದ ಬಳಿ ಅಕ್ಕಿ ಕೇಳಿದಾಗ ಕೊಟ್ಟಿಲ್ಲ. ಆಗ ೫ ಕೆಜಿ ಅಕ್ಕಿ ಕೋಟ್ವಿ,ಐದು ಕೆಜಿಗೆ  ಹಣ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ 7 ಕೆಜಿಗೆ ಇಳಿಸಿತ್ತು. ನಮ್ಮ ಸರ್ಕಾರ 10 ಕೆಜಿ ಅಕ್ಕಿ ಕೋಡ್ತಾ ಇದ್ದೀವಿ. ಎಲ್ಲ ಜಿಲ್ಲೆಯಲ್ಲಿ ಯೋಜನೆಗಳು ಜಾರಿ ಆಗಿವೆ. ಅಭಿವೃದ್ಧಿ ಗೆ ಮೈಸೂರಿನಲ್ಲಿ 2.5 ಸಾವಿರ ಕೋಟಿ ಬಿಡುಗಡೆ ಆಗಿದೆ. ನೀರಾವರಿ ಯೋಜನೆಗೆ ಹಣ ನೀಡಿದ್ದಾರೆ. ಅನೇಕ ಯೋಜನೆಗಳು ನಡೆಯುತ್ತಿವೆ. ಅದರು ಬಿಜೆಪಿಅವ್ರು ಅಭಿವೃದ್ಧಿ ಇಲ್ಲವೆಂದು ಆರೋಪ ಮಾಡ್ತಾರೆ. ನಾನು ಅದನ್ನ ಖಂಡಿಸುತ್ತೇನೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ನಮ್ಮ ರಾಜ್ಯ ಸರ್ಕಾರ ಸದೃಢವಾಗಿದೆ. ಜೆಡಿಎಸ್ ಬಿಜೆಪಿ ಇನ್ನಾದ್ರು ಟೀಕೆ ಮಾಡೋದು ಬಿಡಬೇಕು. ಗೃಹ ಲಕ್ಷ್ಮಿ ಯೋಜನೆ ನಿಲ್ಲಿಸಿಲ್ಲ. ಕೆಲವೊಮ್ಮೆ ಎರಡು ತಿಂಗಳಿಗೆ ಕೊಟ್ಟಿದ್ದೇವೆ. ಮುಂದೆ ಕೋಡ್ತೀವಿ,ನಿಲ್ಲಿಸಲ್ಲ ಎಂದು ಹೆಚ್ ಎಂ ರೇವಣ್ಣ ಹೇಳಿದ್ದಾರೆ.