ಬೆಂಗಳೂರು; ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಕಿರುಕುಳ ವಿಚಾರಕ್ಕೆ ಸಂಬಂಧಪಟ್ಟಂತೆ ಸುಗ್ರೀವಾಜ್ಞೆ ಜಾರಿ ಸಂಬಂಧ ಮಹತ್ವದ ಸಭೆ ನಡೆಯಿತು.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು.ಕಾನೂನು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿರಿದ್ದರು.
ಸಭೆ ಬಳಿಕ ಮಾತನಾಡಿದ ಕಾನೂನು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಮೈಕ್ರೋ ಫೈನಾನ್ಸ್ ಸಮಸ್ಯೆಗೆ ಪರಿಹಾರ ಕೊಡದ ಬಜೆಟ್ ಎಂದು ಕಿಡಿ ಕಾರಿದ್ರು.ಇದು ಬಜೆಟ್ಟಾ? ಬಿಹಾರ ಚುನಾವಣಾ ಮ್ಯಾನಿಫ್ಯಾಸ್ಟೋ?.ಮನಸೋ ಇಚ್ಚೇ ಬಂದ ಹಾಗೆ ಬಜೆಟ್ ಮಾಡಿದ್ದಾರೆ.ಈ ಬಜೆಟ್ ನಲ್ಲಿ ಏನೇನೋ ನಿರೀಕ್ಷೆ ಇತ್ತು, ಏನೂ ಆಗಿಲ್ಲ.ಇದು ಸಂಪೂರ್ಣ ನಿರಾಶಾದಾಯಕ ಬಜೆಟ್. ಕೃಷಿಕರಿಗೆ ಇರುವ ತೊಂದರೆ ಬಗ್ಗೆ ಗಮನಹರಿಸಿಲ್ಲ.ಮೈಕ್ರೋ ಫೈನಾನ್ಸ್ ನಿಂದ ಜನರು ಆತ್ಮಹತ್ಯೆ ಮಾಡ್ಕೋಂತಿದ್ದಾರೆ.ಅದಕ್ಕೆ ಪರಿಹಾರ ಕೊಡಬೇಕು ಎಂಬ ಆಲೋಚನೆಯೂ ಬರಲಿಲ್ಲ.ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಸಮಸ್ಯೆ ಆಗಿದೆ.ಆರ್ ಬಿಐ ನೋಂದಾಯಿತ ಮೈಕ್ರೋ ಫೈನಾನ್ಸ್ ಗಳಿಂದ ಆತ್ಮಹತ್ಯೆ ಮಾಡ್ಕೊಳ್ಳುವ ಪರಿಸ್ಥಿತಿ ಬರ್ತಿದೆ.ಇದರ ಬಗ್ಗೆ ಯಾವುದೇ ಚಕಾರ ಎತ್ತದ ಬಜೆಟ್ ಎಂದು ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಇನ್ನು ಬಜೆಟ್ ಗೆ ಎಷ್ಟು ಮಾರ್ಕ್ಸ್ ನೀಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾಸೇ ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.