ಮನೆ ಪ್ರಸ್ತುತ ವಿದ್ಯಮಾನ ಸಚಿವರಾದ ಡಾ.ಜಿ ಪರಮೇಶ್ವರ್ ಮತ್ತು ಹೆಚ್ ಕೆ ಪಾಟೀಲ್ ಜಂಟಿ ಸುದ್ದಿಗೋಷ್ಠಿ

ಸಚಿವರಾದ ಡಾ.ಜಿ ಪರಮೇಶ್ವರ್ ಮತ್ತು ಹೆಚ್ ಕೆ ಪಾಟೀಲ್ ಜಂಟಿ ಸುದ್ದಿಗೋಷ್ಠಿ

0

ಬೆಂಗಳೂರು;  ಸಚಿವರಾದ ಡಾ.ಜಿ ಪರಮೇಶ್ವರ್ ಮತ್ತು ಹೆಚ್ ಕೆ ಪಾಟೀಲ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್ ನಾನು ಗೃಹ ಸಚಿವರು ಸಭೆ ನಡೆಸಿದ್ದೇವೆ. ಮೈಕ್ರೋ ಫೈನಾನ್ಸ್ ಬಗ್ಗೆ ಚರ್ಚೆ ನಡೆಸಿದ್ದೇವೆ.ಮನಿಲ್ಯಾಡ್ರಿಂಗ್ ಪರ್ಸನ್ಸ್ ಬಗ್ಗೆ ಚರ್ಚೆ ಮಾಡಿದ್ದೇವೆ.ಸಾಲ ವಸೂಲಿ ವೇಳೆ ಕಿರುಕುಳದ ಬಗ್ಗೆ ಚರ್ಚಿಸಿದ್ದೇವೆ.ಇದರ ನಿಗ್ರಹದ ಬಗ್ಗೆ ಸುಧೀರ್ಘವಾಗಿ ಚರ್ಚೆ ಆಗಿದೆ.ಕರ್ನಾಟಕ ಮೈಕ್ರೋ ಫೈನಾನ್ಸ್ ಪ್ರಿವೆನ್ಶೀವ್ ಬಿಲ್ ತರಲು ಚರ್ಚೆ ನಡೆದಿದೆ.೨೫ ರಂದು ಸಿಎಂ ತುರ್ತು ಸಭೆ ನಡೆಸಿದ್ದರು.ವಿಶೇಷ ಕಾನೂನು ತರುವ ಬಗ್ಗೆ ಅಂದು ಚರ್ಚೆಯಾಗಿತ್ತು.ಸಣ್ಣ,ಕಿರುಸಾಲ ಪಡೆಯುವವರಿಗೆ ರಕ್ಷಣೆ ಕೊಡುವುದು.ಅವರ ಮೇಲಿನ ಕಿರುಕುಳ ನಿಯಂತ್ರಣದ ಬಗ್ಗೆ ಕಾನೂನನ್ನು  ಬೇಗ ಜಾರಿಗೆ ತರಬೇಕೆಂಬ ನಿಟ್ಟಿನಲ್ಲಿ ಸಲಹೆ ನೀಡಿದ್ದರು.ಅದರ ಆಧಾರದ‌ಮೇಲೆ ಇಂದು ಸಭೆ ನಡೆಸಿದ್ದೇವೆ.ಕಾನೂನು ಸಂಸದೀಯ ಇಲಾಖೆ,ಗೃಹ ಇಲಾಖೆ,ಕಂದಾಯ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಿದ್ದೇವೆ.ಈ ಮಸೂದೆ ಬಹಳ ಮಹತ್ವದ್ದಾಗಿದೆ ಎಂದರು,

ಕೆಲವು ವಿಚಾರದಲ್ಲಿ ಸಿಎಂ ಜೊತೆ ಚರ್ಚಿಸಬೇಕಿದೆ.ಇಂದು ಸಂಜೆ ಅವರ ಜೊತೆ ಮಾತನಾಡ್ತೇವೆ.ಅಂತಿಮ ನಿರ್ಣಯಕ್ಕೆ ನಾವು ಬಂದಿದ್ದೇವೆ.ಸಾಲದ ಕಿರುಕುಳ ತಡೆಯುವುದು ಮುಖ್ಯ ಉದ್ದೇಶ.ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತೇವೆ ಎಂದರು. ಸಂಜೆ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ.ನಾಳೆ ಕ್ಯಾಬಿನೆಟ್ ಸಭೆ ಇದೆ ಅಲ್ಲಿ ಮಂಡಿಸ್ತೇವೆ.ಸುಗ್ರೀವಾಜ್ಙೆ ಮೂಲಕ ಕಾನೂನು‌ ತರ್ತೇವೆ ಎಂದಿದ್ದಾರೆ.

ತ್ವರಿತವಾಗಿ ಕಾನೂನು ತರಬೇಕಿದೆ.ಬಹಳಷ್ಟು ಜನರಿಗೆ ತೊಂದರೆಯಾಗ್ತಿದೆ.ಸಮಾಜದ ಕೆಲಸ್ಥರದವರಿಗೆ ಕಿರುಕುಳ ಆಗ್ತಿದೆ.೫೦ರಿಂದ ೨ ಲಕ್ಷ ಸಾಲ ಪಡೆಯುವವರು.ಅಂತವರಿಗೆ ಹೆಚ್ಚಿನ ಕಿರುಕುಳ‌ ಆಗ್ತಿದೆ.ಹಲವರು ಸೂಸೈಡ್ ಮಾಡಿಕೊಂಡಿದ್ದಾರೆ. ಹಲವರು ಮನೆಬಿಟ್ಟಿದ್ದಾರೆ.ಅದಕ್ಕಾಗಿ ಈ ಕಾನೂನು ಅನಿವಾರ್ಯವಾಗಿದೆ.ಸೆಷನ್ ಮಾರ್ಚ್ ನಲ್ಲಿ‌ಬರಲಿದೆ.ಅಲ್ಲಿಯವರೆಗೆ ಕಾಯುವುದು ಬೇಡ ಎಂಬುದು ನಿಲುವು.ಹಾಗಾಗಿ ಸುಗ್ರೀವಾಜ್ಙೆ ಮೂಲಕ ಇದನ್ನ ತರ್ತಿದ್ದೇವೆ.ಕಾನೂನು‌ಸಚಿವರು ಡ್ರಾಫ್ಟ್ ತಯಾರು ಮಾಡಿದ್ದಾರೆ.ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಬೇಕು.ಇವತ್ತು ಎಲ್ಲವೂ ಫೈನಲೈಸ್ ಆದ್ರೆ ನಾಳೆ‌ ತರ್ತೇವೆ.ನಾಳಿನ ಕ್ಯಾಬಿನೆಟ್ ನಲ್ಲಿ ತರ್ತೇವೆ. ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ.ದೂರು ಕೊಡದಿದ್ರೂ ಕೇಸ್ ದಾಖಲಿಸುವಂತೆ ಹೇಳಿದ್ದೇನೆ.ಸುಮೊಟೋ ಅಡಿ ಕೇಸ್ ದಾಖಲಿಸುವಂತೆ ಸೂಚಿಸಿದ್ದೇನೆ.ಒತ್ತಾಯ ಪೂರ್ವಕವಾಗಿ ಯಾರು ಕಿರುಕುಳ ಕೊಡ್ತಾರೆ.ಸಾಲ ವಸೂಲಾತಿಗೆ ಮುಂದಾಗ್ತಾರೆ ಕ್ರಮ ತೆಗೆದುಕೊಳ್ತೇವೆ.ಅದಕ್ಕೆ ಹೊಸ ಕಾನೂನು ಅನಿವಾರ್ಯ. ಸಾಲವನ್ನ ಹಿಂದೇಯೂ ಕೊಡ್ತಿದ್ರು. ಕೈ ಸಾಲ ಪಡೆಯೋದು ಮಾಮೂಲಾಗಿತ್ತು.ಆದರೆ ಈರೀತಿ ವಸೂಲಿ ಸರಿಯಲ್ಲ. ವಸೂಲಿ ಪೆಂಡಿಂಗ್ ಇದ್ದಾಗ ವಸೂಲಿ. ಬ್ಯಾಂಕ್,ಫೈನಾನ್ಸ್ ಸಂಸ್ಥೆಗಳು ವಸೂಲಿ ಮಾಡುತ್ವೆ.ವಸೂಲಿ ಮಾಡುವಂತೆ ಅವರ ಹೈಯರ್ ಹೇಳಬಹುದು.ಆಕಾರಣಕ್ಕೆ ವಸೂಲಿ ಜಾಸ್ತಿಯಾಗಿರಬಹುದು ಎಂದಿದ್ದಾರೆ.