ಬೆಂಗಳೂರು; ಕಳೆದ 6 ತಿಂಗಳಿನಿಂದ ಸರ್ಕಾರ 60% ನಲ್ಲಿ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಮಾಚಲ ಪ್ರದೇಶ, ಕೇರಳ ದಿವಾಳಿಯ ದಿಕ್ಕಿನಲ್ಲಿ ಹೋಗ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ದಿವಾಳಿಯತ್ತ ಹೆಜ್ಜೆ ಇಡ್ತಿದೆ. ಇದು 60% ಸರ್ಕಾರ ಅಂತ ಕುಮಾರಸ್ವಾಮಿ ಹೇಳಿದ್ರು. ಮೊದಲು 40% ಇತ್ತು, ಈಗ 60% ಮುಂದೆ 65% ನಡೆಸಬೇಕು ಅಂತ ಮಂತ್ರಿಮಂಡದಲ್ಲಿ ಚರ್ಚೆ ಆಗುತ್ತಿದೆ. 30*40 ಸೈಟ್ 10 ಲಕ್ಷ ,40*60 ಸೈಟ್ ನಲ್ಲಿ ಮನೆ ಕಟ್ಟಲು 20 ಲಕ್ಷ ಕೊಡಬೇಕು. ರೇರಾ 15 ಸಾವಿರ ಪ್ರತೀ ಫ್ಲಾಟ್ ಕೊಡಬೇಕು. ಕಳೆದ 6 ತಿಂಗಳಿನಿಂದ ಸರ್ಕಾರ 60% ನಲ್ಲಿ ಇದೆ. ಸರ್ಕಾರದಲ್ಲಿ ಸಹ ಇಲ್ಲ. ನಮ್ಮ ಮೇಲೆ 40% ಅಂತ ಈ ಹಿಂದೆ ಫೋಟೋ ಹಿಡಿಸಿದ್ರು. ಅದೇ ಗುತ್ತಿಗೆದಾರರು ಈಗ ಕಾಂಗ್ರೆಸ್ 40% ಗಿಂತ ಹೆಚ್ಚು ಪೀಕುತ್ತಿದ್ದಾರೆ. 32 ಸಾವಿರ ಕೋಟಿ ರೂ. ಅಂದಾಜು ಸರ್ಕಾರದಿಂದ ಬರಬೇಕಿದೆ. ಈಗ ಮತ್ತೆ ತೆರಿಗಳನ್ನ ಹಾಕಬೇಕು ಅಷ್ಟೆ ಎಂದಿದ್ದಾರೆ.
ಸಂಕ್ರಾಂತಿ ಒಳಗೆ ಮಾಡದಿದ್ದರೆ ಕೆಲಸ ಸ್ಥಗಿತ ಮಾಡುವುದಾಗಿ ಗಡುವು ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ಘೋಷಣೆ ಮಾಡಿದ್ದಾರೆ.ತೊಗರಿ ಖರೀದಿ ಬಳಿ ಇವರ ಬಳಿ ಹಣ ಇಲ್ಲ, ರೈತರು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಬಜೆಟ್ ನಲ್ಲಿ ನುಡಿದಂತೆ ನಡೆದ್ದೇವೆ ಅಂತಾರೆ. ದೇವಾಲಯಗಳಲ್ಲಿ ಕೈ ಮುಗಿದು ಒಳಗೆ ಬನ್ನಿ ಅಂತ ಫೋಟೋ ಹಾಕಿರುತ್ತಾರೆ. ನುಡಿದಂತೆ ನಡೆದ ಸರ್ಕಾರ, ಪರ್ವ ಏನೆಲ್ಲ ಹಾಕಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಿಟ್ಟ 28 ಸಾವಿರ ಕೋಟಿಯಲ್ಲಿ 13 ಸಾವಿರ ರೂ. ಮಾತ್ರ ಖರ್ಚು ಮಾಡಿದ್ದಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ 3077 ಕೋಟಿ ಖರ್ಚು ಮಾಡಬೇಕು. 1076 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಅಭಿವೃದ್ಧಿ ಚುರುಕು, ಶರವೇಗದಲ್ಲಿ, ನುಡಿದಂತೆ ನಡೆದ ಸರ್ಕಾರ ಏನೆಲ್ಲ ಹೇಳಿದ್ರು.ಆದ್ರೆ ಇದು ಮನೆಹಾಳು ಸರ್ಕಾರ ಅಂತ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಮಿಷನ್ ಗಾಗಿ ಇಡೀ ರಾಜ್ಯವನ್ನ ಕತ್ತಲೆಗೆ ದೂಡುತ್ತಿದೆ. ಹಿಟ್ನಾಳ್ ಹೇಳಿದ್ರು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂದ್ರು. ವೋಟ್ ಹಾಕುವಾಗಲೂ ಅಡ್ಜೆಸ್ಟ್ ಮಾಡ್ಕೊಳ್ಳಿ ಅಂತ ಹೇಳಬೇಕಿತ್ತು. ಖರ್ಗೆಯವರೇ ಪಾಪರ್ ಮಾಡಿಬಿಡ್ತೀರಿ ನೀವು ಅಂತ ಕಾಂಗ್ರೆಸ್ ನವರಿಗೆ ಹೇಳಿದ್ದಾರೆ. ರಾಜುಕಾಗೆ ದಿನನಿತ್ಯ ಕೂಗುತ್ತಿದ್ದಾರೆ.ಅಭಿವೃದ್ಧಿ ಕುಂಠಿತ ಆಗಿದೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಅಭಿವೃದ್ಧಿ ಆಗುತ್ತಿದ್ದಾರೆ. ಮತ್ತು 5% ಕಮಿಷನ್ ಜಾಸ್ತಿ ಮಾಡಲು ಕಾಂಗ್ರೆಸ್ ಹೊರಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಮಿಷನ್ ಹೆಚ್ಚಾಗಲಿದೆ. ಗುತ್ತಿಗೆದಾರರ ಆತ್ಮಹತ್ಯೆಗೆ ಅರ್ಜಿ ಹಾಕಿಕೊಳ್ಳುವ ಕಾಲ ಬಂದಿದೆ. ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ದಾಖಲೆ ಇದ್ಯಾ ಅಂತ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಈ ಹಿಂದೆ 40% ಗೆ ನೀವು ದಾಖಲೆ ಕೊಟ್ರಾ? ಸಿದ್ದರಾಮಣ್ಣ?. ಇದ್ಯಾವ ನ್ಯಾಯ? ಇದು 60% ಲೂಟಿಯ ಸರ್ಕಾರ. ಕುಮಾರಸ್ವಾಮಿ ಹೇಳಿಕೆಯನ್ನ ಸಮರ್ಥನೆ ಮಾಡುತ್ತೇನೆ ಎಂದಿದ್ದಾರೆ.
ರಾಜು ಕಪನೂರು ಮೇಲೆ ರೌಡಿಶೀಟರ್ ವಿಚಾರದ ಬಗ್ಗೆ ಮಾತನಾಡಿ ಭದ್ರತೆ ದೃಷ್ಟಿಯಿಂದ ಗುತ್ತಿಗೆದಾರರ ಬಂಧನೆ ಮಾಡಬೇಕಿತ್ತು. ರೌಡಿಶೀಟರ್ ತೆಗೆಸಿದವರು ಯಾರು?. ಕಾಂಗ್ರೆಸ್ ನವರೇ ತೆಗೆಸಿದ್ದಾರೆ. ಬಂಧನ ಮಾಡಲು ಕಂಬಿನ ಗದ್ದೆಯಲ್ಲಿ ಇಟ್ಟಿದ್ದಾರೆ. ಗದ್ದೆ ಕೊಯ್ದ ಮೇಲೆ ಕರೆದುಕೊಂಡು ಬರ್ತಾರೆ. ಈ ಕೇಸ್ ನಲ್ಲೂ ಕಬ್ಬಿನ ಗದ್ದೆ ಇಟ್ಟಿಕೊಂಡಿರಬಹುದು ಎಂದಿದ್ದಾರೆ.