ಬೆಂಗಳೂರು; ಜಸ್ಟೀಸ್ ಕುನ್ಹಾ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಜಸ್ಟೀಸ್ ಕುನ್ಹಾ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಆರ್ಸಿಬಿ, ಡಿಎನ್ ಎ ಮೇಲೆ ಕೋರ್ಟಿನಲ್ಲಿ ಕೇಸ್ ಇದೆ. ಮುಂದೆ ಯಾವ ರೀತಿ ಅನುಮತಿ ನೀಡಬೇಕು. ಈ ಕುರಿತು ಶಿಫಾರಸ್ಸನ್ನು ಮಾಡಿದ್ದಾರೆ. ಹಾಗೇ ನಾವು ಇಲಾಖಾ ತನಿಖೆಯನ್ನು ಮಾಡಲು ನಿರ್ಧರಿಸಿದ್ದೇವೆ. ವರದಿಯಲ್ಲಿ ಗೋವಿಂದರಾಜ್ ಹೆಸರು ಉಲ್ಲೇಖ ಇಲ್ಲ. ಆರ್ ಸಿಬಿ, ಡಿಎನ್ ಎ,ಕೆಎಸ್ಸಿಎ,ಪೊಲೀಸರ ಉಲ್ಲೇಖ ಇದೆ ಎಂದಿದ್ದಾರೆ.
ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಮಾತನಾಡಿದ ಅವರು ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ಅಕ್ರಮ ಆಗಿದೆ ಅಂದಿದ್ದಾರೆ. ಕರ್ನಾಟಕದಲ್ಲೂ ಆಗಿದೆ ಅಂದಿದ್ದಾರೆ. ಅದನ್ನ ಪ್ರೂವ್ ಮಾಡ್ತಿನಿ ಅಂದಿದ್ದಾರೆ. ನೋಡೋಣ ಎಂದರು. ಇದೇ ವೇಳೆ ಜಾತಿಗಣತಿ ಗೆ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿ ಸಲಹೆ ಕೊಟ್ಟು ಸಕಾರಾತ್ಮಕ ಟೀಕೆ ಮಾಡಲಿ. ಅದನ್ನ ಪರಿಗಣಿಸೋಣ. ಅಡಳಿತ ಪಕ್ಷದ ಮೇಲೆ ಟೀಕೆ ಮಾಡೋದು ಸಹಜ. ನಾವು ವಿಪಕ್ಷದಲ್ಲಿದ್ದಾಗಲೂ ಮಾಡಿದ್ದೇವೆ ಎಂದರು. ಮಹದಾಯಿಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿ 2022 ರಲ್ಲಿ ಕೇಂದ್ರ ಒಂದು ರೀತಿಯಲ್ಲಿ ಅನುಮತಿ ನೀಡಿತ್ತು. ಆ ಮೇಲೆ ಸಂಘರ್ಷ ಪ್ರಾರಂಭ ಆಗಿದೆ. ಇದು ಕುಡಿಯುವ ನೀರಿನ ಯೋಜನೆ. ಇದಕ್ಕೆ ನಿರ್ಬಂಧ ಬರಬಾರದು. ಅದಕ್ಕೆ ಕೇಂದ್ರ ಬಗೆಹರಿಸಿಕೊಡಬೇಕು. ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಯೋಜನೆ. ಅದಕ್ಕೂ ಕೇಂದ್ರ ಅನುಮತಿ ಕೊಡಬೇಕು ಎಂದು ತಿಳಿಸಿದರು.
ನೀರಾವರಿ ವಿಚಾರವಾಗಿ ಸರ್ವ ಪಕ್ಷ ವಿಚಾರದ ಬಗ್ಗೆ ಮಾತನಾಡಿ ಅದನ್ನ ಸಿಎಂ,ನೀರಾವರಿ ಸಚಿವರು ತೀರ್ಮಾನ ಎಂದಿದ್ದಾರೆ. ಬಿಕ್ಲು ಶಿವು ಕೇಸ್ ವಿಚಾರದ ಬಗ್ಗೆ ಮಾತನಾಡಿ ಎಸ್ ಐ ಟಿ ಅಲ್ಲ. ಸಿಓಡಿಗೆ ನೀಡಿದ್ದೇವೆ. ಸ್ಥಳೀಯ ಪೊಲೀಸರು ತನಿಖೆ ಮಾಡ್ತಿದ್ರು. ಇದರ ನಡುವೆ ಸಿಓಡಿಗೆ ಕೊಡಬೇಕು ಅಂತ ಆಗಿದೆ ಎಂದರು.