ಮನೆ Latest News ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನಲೆ: ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ ನಾವೂ ಪತ್ರ ಬರೆಯುತ್ತೇವೆ ಎಂದ...

ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನಲೆ: ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ ನಾವೂ ಪತ್ರ ಬರೆಯುತ್ತೇವೆ ಎಂದ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿಕೆ

0

ಬೆಂಗಳೂರು; ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನಲೆ  ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ ನಾವೂ ಪತ್ರ ಬರೆಯುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಇದು ಯಾರು ನಿರೀಕ್ಷೆ ಮಾಡದಂತಹ ಬೆಳವಣಿಗೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದಿಂದ ಈ ಎಪೆಕ್ಟ್ ಆಗಿದೆ. ಈಗಾಗಲೇ ಕೇಂದ್ರ ಸರ್ಕಾರ ಸಹ ಕಮಿಟಿ ರಚನೆ ಮಾಡಿ ಕ್ರಮ ತಗೆದುಕೊಳ್ಳಲು ಮುಂದಾಗಿದೆ. ರಾಜ್ಯದಲ್ಲೂ ಆಗಿರುವ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀವಿ. ಜನಸಾಮಾನ್ಯರು ಹೊಟೇಲ್ ಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ ನಾವೂ ಪತ್ರ ಬರೆಯುತ್ತೇವೆ. ಸಂಬಂಧಪಟ್ಟ ಜಿತೆ ಮುಖ್ಯಕಾರ್ಯದರ್ಶಿಯವರು ಮಾತನಾಡ್ತಾರೆ.ಈಗ ನಾವೂ ರಾಜಕೀಯವನ್ನ ಹೊರತುಪಡಿಸಿ ಕೆಲಸ ಮಾಡಬೇಕಿದೆ. ಈಗ ರಾಜಕೀಯ ಮಾಡುತ್ತಾ ಕೂತ್ರೆ ಅದಕ್ಕೆ ಪರಿಹಾರ ಸಿಗಲ್ಲ.ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ರೆ ಸದನದಲ್ಲಿ‌ ಉತ್ತರ ಪರಿಹಾರ ಸಿಗಲ್ಲ. ಕೇಂದ್ರ ಸರ್ಕಾರವೇ ಈಗ ಕ್ರಮ ಕೈಗೊಳ್ಳಬೇಕಾಗಿದೆ.ಸದನದಲ್ಲಿ ಬೇಕಾದ್ರೆ ಚರ್ಚೆ ಮಾಡಿ ಕೇಂದ್ರಕ್ಕೆ ತಿಳಿಸುವ ಕೆಲಸ‌ ಮಾಡಬಹುದು ಎಂದಿದ್ದಾರೆ

ನೇಮಕಾತಿಯಲ್ಲಿ ಒಳಮೀಸಲಾತಿ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಬಾರದೂ ಅಂತಾ ಯಾರು ಹೇಳ್ತಾ ಇದಾರೆ?.ಮೀಸಲಾತಿ ಜಾರಿ ಮಾಡುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ. ಈಗ ಕೆಲವು ಟೆಕ್ನಿಕಲ್ ಪ್ರೋಸೆಸ್ ಇದೆ. ಕಾನೂನಿನ ತೊಡಕುಗಳಿವೆ. ಈಗ ಚರ್ಚೆ ಮಾಡಿ ಎಲ್ಲವನ್ನೂ ಸರಿಪಡಿಸಬೇಕಾಗಿದೆ.ಎಲ್ಲರೂ ಸ್ವಲ್ಪ ಸಹನೆ ಇದ್ದ ಇದ್ರೆ ಎಲ್ಲ ಕೆಲಸ ಅಗುತ್ತೆ. ನಮ್ಮ ಮೇಲೂ ಸಾಕಷ್ಟು ಒತ್ತಡ ಆಗಿದೆ. ಒತ್ತಡ ಹಾಕುವ ಅವಶ್ಯಕತೆ ಇಲ್ಲ.ನಾವೆಲ್ಲ ಸಂಪುಟದಲ್ಲಿ ಇದ್ದೇವಿ ಎಲ್ಲರೂ ಚರ್ಚೆ ಮಾಡಿ ತೊಡಕುಗಳನ್ನ ಬಗೆಹರಿಸುತ್ತೇವೆ. ಬರುವ ಸಂಪುಟದಲ್ಲಿ ಇದಕ್ಕೆ ನಿರ್ಣಯ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಡಿಸಿಎಂ ಡಿಕೆಶಿವಕುಮಾರ್ ಡಿನ್ನರ್ ಸಭೆ ಆಯೋಜನೆ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ‌ 138 ಜನರಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಆತಂರಿಕ ಗೊಂದಲ ಇಲ್ಲ. ಅದು ನಿನ್ನೆ ಪ್ರದರ್ಶನವಾಗಿದೆ. ಕೆಲವು ನಾಯಕರ ಅಭಿಪ್ರಾಯ ಬೇರೆ ಬೇರೆ ಇರಬಹುದು. ಸ್ಥಾನಮಾನಗಳನ್ನ ಕೇಳುವುದು ಸಹ ತಪ್ಪಲ್ಲ. ಕೆಲವರಿಗೆ ಅವರಿಗೆ ಬೇಕಾದ ಸ್ಥಾನಮಾನಗಳನ್ನ ಕೇಳೋಕೆ ಅವಕಾಶ ಇದೆ. ಅದು ಪಕ್ಷದ ಚೌಕಟ್ಟಿನೊಳಗೆ ಆಗುತ್ತೆ. ಸ್ಥಾನಮಾನಗಳನ್ನ ನೀಡುವ ಬಗ್ಗೆ ಅದನ್ನ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. 8-10 ತಿಂಗಳಿನಿಂದ ಮಾಧ್ಯಮಗಳಲ್ಲಿ ಒಂದಲ್ಲ ಒಂದು ರೀತಿ ಹೇಳಿಕೆಗಳು ಬರತಾ ಇದ್ದಿದ್ದು ರಾಜಕಾರಣದಲ್ಲಿ ಸ್ವಾಭಾವಿಕ. ಅದಕ್ಕೆ ಬೇರೆ ಪಕ್ಷದವರು ಕಾಂಗ್ರೆಸ್ ಪಕ್ಷ ಒಡೆದುಹೋಗಿದೆ ಅನ್ನೋದು ಸರಿ ಅಲ್ಲ. ನಮ್ಮಲ್ಲಿನ ಒಗ್ಗಟ್ಟು ನಿನ್ನೆ ಪ್ರದರ್ಶನ ಆಗಿದೆ. ಪಕ್ಷದಲ್ಲಿ ಸಾಮರಸ್ಯ ಇದ್ರೆ ಮಾತ್ರ ಸರ್ಕಾರದಲ್ಲಿ ಸಾಮರಸ್ಯ ಇರುತ್ತೆ.
ನಮ್ಮ ಪಕ್ಷ ಅಧಿಕಾರದಲ್ಲಿದೆ ನಾವು ಜನರಿಗೆ ಒಳ್ಳೆಯ ಆಡಳಿತ ಕೊಡ್ತೇವಿ ಅಂತಾ ಹೇಳಿದ್ದೇವೆ.
ಗ್ಯಾರಂಟಿ ಸ್ಕೀಮ್ ಬಗ್ಗೆ ಚುನಾವಣೆಯಲ್ಲಿ ಹೇಳಿದ್ವಿ.  ಅದನ್ನ ನಾವೂ ಅನುಷ್ಠಾನ ಮಾಡಿದ್ದೇವೆ.
ನುಡಿದಂತೆ ನಡೆಯುವ ಸರ್ಕಾರ ನಮ್ಮದು.ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡಬಹುದು. ಆರ್ಥಿಕವಾಗಿ ದಿವಾಳಿ ಆಗಿದೆ ಅನ್ನಬಹುದು. ಆದ್ರೆ ನಾವೂ ಕೊಟ್ಟ ಭರವಸೆಯಂತೆ ಆಡಳಿತ ಮಾಡುತ್ತಿದ್ದೇವೆ.ಈಗ ಬಜೆಟ್ ನಲ್ಲೂ ಎಲ್ಲ ವಲಯಗಳಲ್ಲೂ ಕವರ್ ಮಾಡಿ ಅನುದಾನ ಕೊಟ್ಟಿದ್ದಾರೆ. ಎಲ್ಲ ಕ್ಷೇತ್ರ ಜಿಲ್ಲೆಗಳನ್ನ ಗಣನೆಗೆ ತಗೆದುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ ಎಂದಿದ್ದಾರೆ.
ನಮ್ಮ ಪಕ್ಷದಲ್ಲಿನ‌ ವಿದ್ಯಮಾನಗಳಿಗೂ ಬಿಜೆಪಿಗೂ ಎನ್ ಸಂಬಂಧ..?. ನಮ್ಮ ಪಕ್ಷದ ಆತಂರಿಕ‌ ವಿಚಾರ ನಾವ್ ಎನ್ ಬೇಕಾದ್ರು ಮಾಡಿಕೊಳ್ಳುತ್ತೇವೆ. ಬದಲಾವಣೆ ಬಗ್ಗೆ ನಮ್ಮ ಪಕ್ಷದವರು ಸಹಜವಾಗಿ ಮಾತನಾಡ್ತಾರೆ. ಆದ್ರೆ ಬಿಜೆಪಿಯವರು ಯಾಕೆ ಮಾತನಾಡಬೇಕು.ನಮ್ಮ‌ ಪಕ್ಷದಲ್ಲಿ ಎನ್ ಬೇಕಾದ್ರು ಆಗಬಹುದು.ಅದು ನಮ್ಮ ಆತಂರಿಕ‌ ವಿಚಾರ. ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಎನ್ ಸೂಚನೆ ಕೊಡ್ತಾರೆ ಅದು ನಮ್ಮ ಪಕ್ಷದ್ದು. ನಮ್ಮದೂ ರಾಷ್ಟ್ರೀಯ ಪಕ್ಷ, 138 ವರ್ಷ ಪಕ್ಷ ನಡೆಸಿದ ನಮಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅಂತಾ ಗೊತ್ತಿದೆ.ನಮ್ಮ ಶಾಸಕರು ಮಾತನಾಡಬಹದು. ಖಂಡಿತವಾಗಿ ಅವರು ಮಾತನಾಡಿಕೊಳ್ಳಬಹುದು. ಅವರಿಗೆ ಮಂತ್ರಿ ಆಗುವ ಆಸೆ ಇರಬಹುದು.‌ಅದು ತಪ್ಪು ಅಂತಾ ನಾನು ಹೇಳಲ್ಲ.ನಾವೂ ವಿರೋಧ ಪಕ್ಷದ ವಿಚಾರದಲ್ಲಿ ತಲೆ ಹಾಕಲ್ಲ.ನಾವ್ ಅಶೋಕ್ ಅವರನ್ನ ವಿಪಕ್ಷ ಸ್ಥಾನದಿಂದ ತಗೀರಿ ಅಂತಾ ನಾವೂ ಹೇಳಕ್ಕೆ ಆಗುತ್ತಾ..?.ಅದು ಅವರ ಪಕ್ಷದ ವಿಚಾರ. ಇದು ನಮ್ಮ‌ ಪಕ್ಷದ ಆತಂರಿಕ‌ ವಿಚಾರ.
ಆತಂರಿಕವಾಗಿ ನಮ್ಮ ಪಕ್ಷದಲ್ಲಿ ಚರ್ಚೆಗಳು ಆಗುತ್ತೆ ಎಂದಿದ್ದಾರೆ.