ಮನೆ ಪ್ರಸ್ತುತ ವಿದ್ಯಮಾನ ಕಾಂಗ್ರೆಸ್ ಬೀಳಿಸಲು ಬಿಜೆಪಿ ಕೈ ಶಾಸಕರಿಗೆ 100 ಕೋಟಿ ಆಫರ್ ಮಾಡುತ್ತಿದೆ; ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ...

ಕಾಂಗ್ರೆಸ್ ಬೀಳಿಸಲು ಬಿಜೆಪಿ ಕೈ ಶಾಸಕರಿಗೆ 100 ಕೋಟಿ ಆಫರ್ ಮಾಡುತ್ತಿದೆ; ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ಗಾಣಿಗ ರವಿಕುಮಾರ್ ಶಾಕಿಂಗ್ ಹೇಳಿಕೆ

0

ಮಂಡ್ಯ; ಕಾಂಗ್ರೆಸ್ ಬೀಳಿಸಲು ಬಿಜೆಪಿ ಕೈ ಶಾಸಕರಿಗೆ 100 ಕೋಟಿ ಆಫರ್ ಮಾಡುತ್ತಿದೆ ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ಗಾಣಿಗ ರವಿಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸೋದಾಗಿ ರಾಜ್ಯದ ಮೂವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತು ಕೊಟ್ಟಿದ್ದಾರೆ. ಹಾಗಾಗಿ ಬಿಜೆಪಿಯ ಕೆಲವು ದಲ್ಲಾಳಿಗಳು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡುತ್ತಿದ್ದಾರೆ ಎಂದು ಶಾಸಕ ಗಾಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ  ಮಾತನಾಡಿದ ಅವರು, ಹಿಂದೆ 50 ಕೋಟಿ ಇದ್ದ ಆಫರ್ ಇದೀಗ 100 ಕೋಟಿಗೆ ಏರಿಕೆಯಾಗಿದೆ. 100 ಕೋಟಿ ಕೊಟ್ಟು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ ಎಂದಿದ್ದಾರೆ. ಎಂಎಲ್ಎ ಗಳ ಖರೀದಿ ಮಾಡಲು ಬಿಜೆಪಿಯವರು 100 ಕೋಟಿಗೆ ಹೋಗಿದ್ದಾರೆ.ನಿತ್ಯ ಸರ್ಕಾರ ಬಿಳಿಸಲು ಸಂಚು ನಡೆಯುತ್ತಿದೆ.

ನಮ್ಮ ಸರ್ಕಾರ ಗಟ್ಟಿ ಇದೆ ಅಲ್ಲಾಡಿಸಲು ಆಗಲ್ಲ. ಬಿ ಎಲ್ ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದು ಗಾಣಿಗ ರವಿ ಅವರು ಆರೋಪಿಸಿದ್ದಾರೆ.

ಬಿಜೆಪಿಯವರು ಎಷ್ಟೇ ಗಾಳ ಹಾಕಿದ್ರೂ ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿ ಇರುವ ಸರ್ಕಾರ.ಈ ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ.ಸರ್ಕಾರ ಬೀಳಿಸಲು ಮೋದಿಗೆ ಈ ಐದು ಜನ ಮಾತು ಕೊಟ್ಟಿದ್ದಾರೆ.ನಮ್ಮ ಶಾಸಕರಿಗೆ ಬಿಜೆಪಿಯ ಬ್ರೋಕರ್ ಗಳಿಂದ ಡಿಮ್ಯಾಂಡ್ ಬರುತ್ತಿದೆ.ಆದರೆ ನಮ್ಮ ಶಾಸಕರು ಬಲಿಯಾಗಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ ಅದನ್ನು ಅಸ್ಥಿರ ಗೊಳಿಸಲು ಸಂಚು ರೂಪಿಸುತ್ತಿದ್ದಾರೆ.ಪ್ರತಿನಿತ್ಯ ಶಾಸಕರನ್ನ ಸಂಪರ್ಕ ಮಾಡ್ತಿದ್ದಾರೆ.ನೀವು ಬರ್ತಿರಾ? ನೀವು ಬರ್ತಿರಾ ಅಂತಾ ಕೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅವರು ಎಷ್ಟೇ ಆಮಿಷ ಒಡ್ಡಿದರೂ ಕೂಡ ನಮ್ಮ  ಶಾಸಕರು ಯಾರು ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರ ಬೀಳಿಸೋದಕ್ಕೆ ಯಾವ ಬಿಜೆಪಿಯವರಿಗೂ ತಾಕತ್ ಇಲ್ಲ.50 ರಿಂದ 100‌ ಕೋಟಿಗೆ ಬಿಜೆಪಿ ಹೋಗಿದ್ದಾರೆ. ಈ ಬಗ್ಗೆ ಸಾಕ್ಷಿ ಕಲೆ ಹಾಕುತ್ತಿದ್ದೇವೆ ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡ್ತೇವೆ. ಅದನ್ನು ಇಡಿಗೆ  ಕೊಡುವ ಕೆಲಸ ಮಾಡ್ತೇವೆ ಎಂದು ರವಿ ಇದೇ ವೇಳೆ ಹೇಳಿದ್ದಾರೆ.

 

ಇದರ ಮಧ್ಯೆ ಶಾಸಕ ರವಿ ಗಾಣಿಗ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಎಚ್ ಸಿ ಮಹದೇವಪ್ಪ ರಿಯ್ಯಾಕ್ಟ್ ಮಾಡಿದ್ದಾರೆ.ಇದು ಹೊಸ ಸಂಗತಿಯಾ..?ಇದುವರೆಗೂ ಬಿಜೆಪಿ ಹಾಗೂ ಜೆಡಿಎಸ್ ಗೆ ಬಹುಮತ ಕೊಟ್ಟಿದ್ರಾ..?ಅವರ ರಾಜಕೀಯ ಹೊಸ ಪ್ರಯೋಗವೇ ಆಪರೇಷನ್.ಹೀಗಾಗಿ MLA ಗಳನ್ನು ಖರೀದಿ ಮಾಡುವುದು ಕೆಲಸ ಬಿಜೆಪಿ ಜೆಡಿಎಸ್ ಮಾಡ್ತಿದೆ.ಜನರ ಮತಕ್ಕೆ ಬೆಲೆ ಕೊಡಬೇಕು, ಜನರು ಕೊಟ್ಟ ಬಹುಮತಕ್ಕೆ ರೆಸ್ಪೆಕ್ಟ್ ಕೊಡಬೇಕು.ಆದರೆ ಏಕಾಏಕಿ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಬಳಕೆ ಮಾಡ್ಕೋತ್ತಾರೆ.ಆದರೆ ಸಿದ್ದರಾಮಯ್ಯ ದೊಡ್ಡ ಲೀಡರ್.ಹೀಗಾಗಿ ಅಡ್ಡ ದಾರಿಯಿಂದ ಶಾಸಕರನ್ನ ಖರೀದಿ ಮಾಡುವ ಕೆಲಸ ಮಾಡ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸದ್ಯ ರವಿ ಗಾಣಿಗ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಎಲ್ಲಿಗೆ ಹೋಗಿ ಮುಟ್ಟಿತ್ತೆ ಅನ್ನೋದನ್ನು ಕಾದು ನೋಡ್ಬೇಕು.