ಮನೆ Latest News ವಿಧಾನ ಪರಿಷತ್ ಸದಸ್ಯರಿಗೆ ಗಂಡಭೇರುಂಡ ಲಾಂಛನ ವಿರತಣೆ

ವಿಧಾನ ಪರಿಷತ್ ಸದಸ್ಯರಿಗೆ ಗಂಡಭೇರುಂಡ ಲಾಂಛನ ವಿರತಣೆ

0

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ಇಂದು ಕರ್ನಾಟಕ ಸರ್ಕಾರದ ಲಾಂಛನ ಗಂಡಭೇರುಂಡ ವಿತರಣೆ ಮಾಡಲಾಗಿದೆ. ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಲಾಂಛನವನ್ನು ವಿತರಿಸಲಾಗಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಗಂಡಭೇರುಂಡ ಲಾಂಛನ ವಿರತಣೆ ಮಾಡಿದರು. 71 ಜನ ಪರಿಷತ್ ಸದಸ್ಯರಿಗೆ ಪರಿಷತ್ ಟಿ ಎ ಶರವಣ ಲಾಂಛನ ಸಿದ್ದಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ ಶರವಣ ಅವರು ಮೊನ್ನೆ ಬಂದು ಲಾಂಛನ ಕೊಡುತ್ತೇನೆ ಎಂದಿದ್ದರು.ಬೆಳ್ಳಿ ಮೇಲೆ ಬಂಗಾರದ ಲೇಪನ ಮಾಡಿದ್ದಾರೆ. ನಮ್ಮೆಲ್ಲರಿಗೂ ಹೊಸ ಲಾಂಛನ ತಂದು ಕೊಟ್ಟಿದ್ದಾರೆ. ಅವರ ವ್ಯಾಪಾರ ದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಎಲ್ಲರಿಗೂ ಲಾಂಛನ ಕೊಡೋದಕ್ಕೆ ತಯಾರಿಸಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ನಾವು ಸಾರ್ವಜನಿಕ ಜೀವನದಲ್ಲಿ ಇರೋರು. ಶಾಸಕರು ಧರಿಸುವ ಲಾಂಛನ ಒರಿಜನಲ್ ಆಗಿರಬೇಕು.ಅದಕ್ಕೆ ನಾನು ಬಂಗಾರ ಬಲು ಭಾರ ಆಗಿದೆ. ಬಡವರ ಬಂಗಾರ ಬೆಳ್ಳಿ ಮೇಲೆ ಚಿನ್ನದ ಲೇಪನ ಹಾಕಿ ಮಾಡಿದ್ದೇವೆ. ಮೇಲ್ಮನೆ ಶಾಸಕರಿಗೆ ಕೊಡಬೇಕು ಎಂದು ಕೇಳಿಕೊಂಡೆ. ಹೊರಟ್ಟಿ ಅವರು ಹೇಳಿದ್ದಕ್ಕೆ ನಾವು ವಿತರಿಸುತ್ತಿದ್ದೇವೆ. ಕೆಳಮನೆಯವರೂ ಸಹ ನಮಗೂ ಕೊಡಿ ಎಂದು ಕೇಳಿದ್ದಾರೆ. ೨೨೫ ಜನರಿಗೂ ಕೊಡುತ್ತೇನೆ ಎಂದಿದ್ದೇನೆ. ಎಲ್ಲರೂ ಧರಿಸುತ್ತಾರೆ ಅಂತ ಭರವಸೆ ಇದೆ ಎಂದರು.