ಮನೆ Latest News ಸಿಗಂದೂರು ಸೇತುವೆ ಉದ್ಘಾಟನೆ ಸಿಎಂಗೆ ಗಡ್ಕರಿ ಆಹ್ವಾನ ಕೊಟ್ಟಿಲ್ಲ, ಇದು ಸರಿಯಲ್ಲ; ಕೇಂದ್ರದ ಮೇಲೆ ಪರಮೇಶ್ವರ್...

ಸಿಗಂದೂರು ಸೇತುವೆ ಉದ್ಘಾಟನೆ ಸಿಎಂಗೆ ಗಡ್ಕರಿ ಆಹ್ವಾನ ಕೊಟ್ಟಿಲ್ಲ, ಇದು ಸರಿಯಲ್ಲ; ಕೇಂದ್ರದ ಮೇಲೆ ಪರಮೇಶ್ವರ್ ಬೇಸರ

0

ಬೆಂಗಳೂರು;  ಸಿಗಂದೂರು ಸೇತುವೆ ಉದ್ಘಾಟನೆ ಸಿಎಂಗೆ ಗಡ್ಕರಿ ಆಹ್ವಾನ ಕೊಟ್ಟಿಲ್ಲ, ಇದು ಸರಿಯಲ್ಲ ಎಂದು ಕೇಂದ್ರದ ಮೇಲೆ ಪರಮೇಶ್ವರ್ ಬೇಸರ ಹೊರ ಹಾಕಿದ್ದಾರೆ.

ಶಿಷ್ಟಾಚಾರ ಸಮರ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೇ ಗಡ್ಕರಿ ಆಹ್ವಾನ ಕೊಟ್ಟಿಲ್ಲ, ಇದು ಸರಿಯಲ್ಲ. ಸಿಎಂ ಅವರು ಕಾರ್ಯಕ್ರಮ ಎರಡು ದಿನ ಮುಂದೂಡಿ ಅಂದ್ರೂ ಗಡ್ಕರಿಯವ್ರು ಕೇಳಲಿಲ್ಲ.ಎರಡು ದಿನ ಕಾರ್ಯಕ್ರಮ ಮುಂದೂಡಿದ್ದಿದ್ರೆ ಏನು ತೊಂದರೆ ಆಗ್ತಿತ್ತೋ ಗೊತ್ತಿಲ್ಲ ನನಗೆ. ಗಡ್ಕರಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ, ಅವ್ರು ಒಳ್ಳೆಯ ಕೆಲಸಗಾರ, ಕ್ರಿಯಾಶೀಲ ಸಚಿವರು ಅನ್ನೋದನ್ನು ಕೇಳಿದ್ದೀವಿ.ಆದ್ರೆ ಯೋಜನೆಯೊಂದರ ಉದ್ಘಾಟನೆ ಒಂದೆರಡು ದಿನ‌ ಮುಂದೂಡುವ ಬಗ್ಗೆ ಅರ್ಥ ಮಾಡಿಕೊಳ್ಳದಿದ್ರೆ ಏನು ಹೇಳೋಕ್ಕಾಗುತ್ತೆ?. ಯಾವುದೇ ಯೋಜನೆ ಇದ್ರೂ ರಾಜ್ಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿಶ್ವಾಸ ತಗೋಬೇಕು, ಇದೇ ಒಕ್ಕೂಟ ವ್ಯವಸ್ಥೆ. ಸೇತುವೆಗೆ ಹೆಸರಿಡೋದಾಗಲೀ, ಶಿಷ್ಟಾಚಾರ ಪಾಲನೆ ಆಗಲೀ ಗೊಂದಲ ಮಾಡಬಾರದು.ಕ್ರೆಡಿಟ್ ತಗೊಳ್ಳೋದು ಬೇರೆ ವಿಚಾರ, ಆದ್ರೆ ಶಿಷ್ಟಾಚಾರವಾದ್ರೂ ಪಾಲಿಸಬೇಕಿತ್ತು ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಕಾರ್ಕಳ ಪರಶುರಾಮ ಪ್ರತಿಮೆ ಫೈಬರ್ ಪ್ರತಿಮೆ ಎಂದಿದ್ದ ಕಾಂಗ್ರೆಸ್ ಆರೋಪಕ್ಕೆ ಹಿನ್ನಡೆಯಾದ ಬಗ್ಗೆ ಮಾತನಾಡಿದ ಅವರು ಪೊಲೀಸರ ಚಾರ್ಜ್‌ಶೀಟ್ ನಾನು ಇನ್ನೂ ನೋಡಿಲ್ಲ. ಸಂಪೂರ್ಣ ಮಾಹಿತಿ ಪಡೆದು ಮಾತಾಡ್ತೇನೆ ಎಂದಿದ್ದಾರೆ. ಕಾಲ್ತುಳಿತ ಕುರಿತ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಲ್ತುಳಿತ ವರದಿಯನ್ನು ನಾನು ಇನ್ನೂ ನೋಡಿಲ್ಲ. ಸಿಎಂಗೆ ವರದಿ ಕೊಟ್ಟಿದ್ದಾರೆ, ನಮಗೆ ಇನ್ನೂ ಸಿಕ್ಕಿಲ್ಲ. ಪೊಲೀಸ್ ಇಲಾಖೆಯದ್ದು ತಪ್ಪು ಅಂತ ವರದಿಯಲ್ಲಿ ಹೇಳಿದ್ದಾರೆ. ಇದು ಎಷ್ಟು ಸರಿ ಇದೆ ಅಂತ, ಯಾವ ಅರ್ಥದಲ್ಲಿ ನ್ಯಾ. ಕುನ್ಹಾ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ವರದಿ ನೋಡಿದ್ಮೇಲೆ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.