ಮನೆ ಪ್ರಸ್ತುತ ವಿದ್ಯಮಾನ ಪೊಲೀಸರ ಕೈ ಸೇರಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ FSL ವರದಿಗಳು

ಪೊಲೀಸರ ಕೈ ಸೇರಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ FSL ವರದಿಗಳು

0

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ 6 FSL ವರದಿಗಳು ಪೊಲೀಸರ ಕೈ ಸೇರಿವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರಿಗೆ ಸಿಸಿಟಿವಿ, ಬ್ಲಡ್ ರಿಪೋರ್ಟ್ ಕುರಿತ 6 FSL ವರದಿಗಳು ಇ-ಮೇಲ್ ಮೂಲಕ ತಲುಪಿದ್ದು, ಈ ಮೂಲಕ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಮಹತ್ವದ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿವೆ.

ಇನ್ನು ಎಫ್ ಎಸ್ ಎಲ್ ವರದಿಯಲ್ಲಿ ಹಲವು ಭಯಾನಕ ವಿಚಾರಗಳು ಬಯಲಾಗಿವೆ. ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ​ ಎಫ್​ಎಸ್​​ಎಲ್​ ವರದಿಯಲ್ಲಿ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಆತ ಸಾವನ್ನಪ್ಪಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ ರೇಣುಕಾಸ್ವಾಮಿಯ ಮೊಣಕಾಲು ಮೂಳೆ ಮುರಿದಿದ್ದು, ಆತನ ಬಲಗಣ್ಣಿಗೂ ಕೂಡ ಗಾಯವಾಗಿದೆ ಅನ್ನೋದು ವರದಿಯಿಂದ ಗೊತ್ತಿದೆ. ಪ್ರಕರಣದ 17 ಆರೋಪಿಗಳಲ್ಲಿ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಇದೀಗ FSL ವರದಿ ಬಂದಿರೋದರಿಂದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖಾಧಿಕಾರಿಗಳು, ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಡಿ ಬಾಸ್ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಪತ್ತೆ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಯಾವಾಗ ತನಗೆ ಬೇಲ್ ಸಿಗುತ್ತೆ ಅಂತಾ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಅವರು ಹೇಗಾದ್ರೂ ಮಾಡಿ ದರ್ಶನ್ ಅವರಿಗೆ ಬೇಲ್ ಕೊಡಿಸಲೇ ಬೇಕು ಅಂತಾ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಹೀಗಿರುವಾಗಲೇ ನಟ ದರ್ಶನ್ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಭಾಗಿಯಾಗಿದ್ದಾರೆ ಅನ್ನೋದಕ್ಕೆ ಪೊಲೀಸರಿಗೆ ಮಹತ್ವದ ಸಾಕ್ಷಿಯೊಂದು ಲಭಿಸಿದೆ. ಎಫ್ ಎಸ್ ಎಲ್ ವರದಿಯೊಂದು ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋದನ್ನು ದೃಢಿಕರಿಸಿದೆ.

ಹೌದು.. ಕೊಲೆಯಾದ ದಿನ ದರ್ಶನ್ ಪಟ್ಟಣಗೆರೆಯ ಶೆಡ್ ನಲ್ಲಿದ್ದರು . ಅಲ್ಲದೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದಕ್ಕೆ ಪೂರಕವಾದ ಸಾಕ್ಷಿ ಲಭಿಸಿದೆ. ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ ಬಟ್ಟೆಯನ್ನು ಸ್ಥಳ ಮಹಜರು ವೇಳೆ ದರ್ಶನ್ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಟ್ಟೆಯನ್ನು ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಅದರಲ್ಲಿದ್ದ ರಕ್ತದ ಕಲೆ ಇದೀಗ ರೇಣುಕಾಸ್ವಾಮಿಯದ್ದೇ ಅನ್ನೋ ವರದಿ ಬಂದಿದೆ ಎನ್ನಲಾಗಿದೆ. ಹಾಗಾಗಿ ದರ್ಶನ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಕನ್ಫರ್ಮ್ ಎಂಬಂತಾಗಿದೆ. ಹಾಗಾಗಿ ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಹತ್ವದ ಸಾಕ್ಷಿ ಲಭ್ಯವಾಗಿದ್ದು. ದರ್ಶನ್ ಪಾಲಿ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಇನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್  ಇದೇ ತಿಂಗಳ ಅಂತ್ಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರೋಪಿಗಳು ಕೂಡ ಚಾರ್ಜ್ ಶೀಟ್  ಸಲ್ಲಿಸಲು ಕಾಯುತ್ತಿದ್ದಾರೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.