ಬೆಂಗಳೂರು; ಸ್ನೇಹಿತರು ಕೇಳಿದರು ಹೀಗಾಗಿ ಒಂದು ಪಾರ್ಟಿ ಕೊಟ್ಟಿದ್ದೆ, ಆರ್ ಅಶೋಕ್ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಶಾಸಕ ಮಾಗಡಿ ಬಾಲಕೃಷ್ಣ ಹೇಳಿದ್ದಾರೆ.
ಸ್ನೇಹಿತರು ಕೇಳಿದರು ಹೀಗಾಗಿ ಒಂದು ಪಾರ್ಟಿ ಕೊಟ್ಟಿದ್ದೆ. ಆರ್ ಅಶೋಕ್ ಹೇಳುತ್ತಿರುವುದೆಲ್ಲಾ ಸುಳ್ಳು.
ಬರ್ತಡೇ ಗಾಗಿ ಊಟ ಕರೆದಿದ್ವಿ ಸೇರಿದ್ವಿ. ಅಲ್ಲಿ ಲೋಕಾಭಿರಾಮವಾಗಿ ಚರ್ಚೆಯಾಗಿದೆ. ಸುಮಾರು ಜನ ಹಿರಿಯರು ಬಂದಿದ್ದರು ಆಶೀರ್ವಾದ ಮಾಡಿ ಹೋದರು. ಬಹಳಷ್ಟು ಮಂತ್ರಿಗಳು ಕೂಡ ಬಂದಿದ್ದರು ಕೆಲವು ಮಂತ್ರಿಗಳು ಬಣದ ಪರವಾಗಿ ಏನು ಬಂದಿರಲಿಲ್ಲ. ನಾನು ಕೆಲವು ಮಂತ್ರಿಗಳನ್ನು ಕರೆದಿದ್ದೆ. ನನಗೆ ವಿಶ್ ಮಾಡುವುದಕ್ಕೆಂದು ಕೆಲವು ಮಂತ್ರಿಗಳು ಕೂಡ ಬಂದಿದ್ದರು. ಇದರಲ್ಲಿ ಬಣದ ರಾಜಕೀಯ ಏನು ಇಲ್ಲ . ಡಿಕೆ ಪರ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಚರ್ಚೆ ಏನು ಇಲ್ಲ. ಇದಕ್ಕೊಂದು ಇತಿಶ್ರೀ ಹಾಡಿ ಎಂಬುದಷ್ಟೇ ನಮ್ಮ ಆಗ್ರಹ. ಪಕ್ಷಕ್ಕೆ ಇದರಿಂದ ಡ್ಯಾಮೇಜ್ ಆಗಬಾರದು.ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ಇಷ್ಟೆಲ್ಲಾ ಇದ್ದುಕೊಂಡು ಯಾವುದೋ ಸಣ್ಣ ವಿಚಾರಕ್ಕೆ ಡ್ಯಾಮೇಜ್ ಆಗಬಾರದು ಎಂದಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ ಮಾಡಿ ಇದಕ್ಕಾಗಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಏನಾದ್ರೂ ಒಂದು ಇತ್ಯರ್ಥಪಡಿಸಿ.ಅವ್ರ್ ನಮ್ದು ಇವರು ನಮ್ದು ಎಂದು ಹೇಳುವ ಬದಲು ಎರಡು ವರ್ಷ ಬಾಯಿ ಮುಚ್ಕೊಂಡ್ ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಲಿ. ರಾಜ್ಯಕ್ಕೆ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಹೈಕಮಾಂಡ್ ಹೇಳಿದ್ರೆ ಅಷ್ಟೇ ಸಾಕು. ಮೊನ್ನೆ ನಡೆದ ಡಿನ್ನರ್ ಮೀಟಿಂಗ್ ನಲ್ಲಿ ಲೋಕಾಭಿರಾಮವಾಗಿ ಚರ್ಚೆಯಾಗಿದೆ ಅಷ್ಟೇ. ಹೈಕಮಾಂಡ್ ಇದಕ್ಕೊಂದು ಅಂತಿಮ ರೂಪ ಎಳೆಯಬೇಕು ಎಂಬುದಷ್ಟೇ ಶಾಸಕರ ಅಭಿಪ್ರಾಯ. ನೀವು ಯಾರನ್ನು ಇಟ್ಕೊಳ್ತಿರೋ ಯಾರನ್ನ ಮುಂದುವರಿಸುತ್ತಿರೋ ಅನ್ನೋದು ಚರ್ಚೆ ಅಲ್ಲ. ಈ ಚರ್ಚೆಗೊಂದು ಇತಿಶ್ರೀ ಹಾಡಿ ಎಂಬುದಷ್ಟೇ ಆಗ್ರಹ. ಹೈಕಮಾಂಡ್ ಏನ್ ನಿರ್ಧಾರ ಮಾಡಿದೆ ಏನ್ ಮಾತಾಡ್ಕೊಂಡಿದ್ದೀರಾ ಮಾತಾಡಿದಿರೋ ಇಲ್ವೋ ಇದೆಲ್ಲವೂ ಒಂದು ಅಂತಿಮ ನಿರ್ಧಾರಕ್ಕೆ ಬಂದು ಬಿಡಲಿ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬರ್ತಾ ಇದೆ. ಇದೆಲ್ಲದಕ್ಕೂ ಒಂದು ಅಂತಿಮ ರೂಪ ಬೇಕಲ್ಲ.ಜನರು ಹೋದಲ್ಲಿ ಬಂದಲ್ಲಿ ಇದನ್ನೇ ಕೇಳ್ತಿದ್ದಾರೆ. ಯಾವ ಹಳ್ಳಿಗೆ ಹೋದರು ನಾಯಕತ್ವದ ವಿಚಾರವನ್ನೇ ಕೇಳ್ತಿದ್ದಾರೆ. ಏನಾಯ್ತು ಎಂಬುದನ್ನೇ ಎಲ್ಲರೂ ಕೇಳ್ತಿದ್ದಾರೆ .ಅದಕ್ಕೊಂದು ಅಂತಿಮ ರೂಪ ಹೈಕಮಾಂಡ್ ಕೊಡಲಿ ಎಂದಿದ್ದಾರೆ.
ನೀವು ಏನೇ ನಿರ್ಧಾರವನ್ನು ತಿಳಿಸಿ ಹೈಕಮಾಂಡ್ ಮನಸಲ್ಲಿ ಏನಿದೆ ನಮಗಂತೂ ಗೊತ್ತಿಲ್ಲ.ಅವರ ಪರ ಇವರ ಪರ ಅಂತ ನಾವಂತೂ ಕೇಳ್ತಾಯಿಲ್ಲ. ಇದಕ್ಕೊಂದು ಅಂತಿಮ ತೆರೆ ಎಳಿರಿ ಚರ್ಚೆ ನಿಲ್ಲಿಸಿ ಎಂಬುದಷ್ಟೇ ನಮ್ಮ ಅಭಿಪ್ರಾಯ. ಈ ಚರ್ಚೆಗೊಂದು ತೆರೆ ಎಳೆಯಿರಿ ಎಂಬುದಷ್ಟೇ ನಮ್ಮ ಅಭಿಪ್ರಾಯ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಸಹಜ. ಬಹಳ ಒಳ್ಳೆ ಕೆಲಸ ಮಾಡಿ ಒಂದು ಸಣ್ಣ ಕೆಟ್ಟ ಕೆಲಸ ಮಾಡಿದರೆ ಅದರಿಂದಲೇ ನಮಗೆ ಹಿನ್ನಡೆ ಆಗಬಹುದಲ್ವಾ. ಆ ಹಿನ್ನಡೆಯು ಆಗಬಾರದು ಎಂಬುದಷ್ಟೇ ನಮ್ಮ ಅಭಿಪ್ರಾಯ. ದೆಹಲಿಗೆ ಹೋಗಿ ಅಲ್ಲಿಗೆ ಹೋಗಿ ಹೇಳುವಂತದ್ದು ಏನು ಇಲ್ಲ. ದೆಹಲಿಯಲ್ಲಿ ಇರುವವರಿಗೂ ಇದೆಲ್ಲ ಗೊತ್ತಿದೆ. ಅವರೇ ಒಂದು ತೀರ್ಮಾನ ಮಾಡಲಿ. ನನ್ನ ಬರ್ತಡೆಗೆ ಲೀಡ್ ಮಾಡಿದ್ದೆ ಅಷ್ಟೇ, ಮತ್ತೇನು ನಾನು ಲೀಡ್ ಮಾಡಿಲ್ಲ.ಆಡಳಿತದ ಮೇಲೆ ಏನು ಪರಿಣಾಮ ಬೀರ್ತಿಲ್ಲ. ಆದರೆ ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸಾರ್ವಜನಿಕರು ಇದನ್ನೇ ಚರ್ಚೆ ಮಾಡುತ್ತಿದ್ದಾರೆ.
ನಾವು ಬರ್ತಡೇ ಮಾಡಿಕೊಂಡರು ಅದನ್ನು ಬಣ ರಾಜಕೀಯ ಎನ್ನುತ್ತೀರಾ ನಾವೇನ್ ಮಾಡಬೇಕು ಹೇಳಿ. ಸಾಕಷ್ಟು ಜನ ಎಂಎಲ್ಎಗಳಲ್ಲೂ ಇದೆ ಅಭಿಪ್ರಾಯ ಇದೆ. ಹೈಕಮಾಂಡ್ ಇದಕ್ಕೊಂದು ಅಂತಿಮ ರೂಪ ಕೊಡಬೇಕು ಎಂಬುದು ಇದೆ ಎಂದಿದ್ದಾರೆ.
ವಿರೋಧ ಪಕ್ಷದವರು ಇನ್ನೇನ್ ಆರೋಪ ಮಾಡುವುದಕ್ಕೆ ಸಾಧ್ಯ?. ಅಶೋಕಣ್ಣನ ಆರೋಪ ಏನೇ ಇರಲಿ ನಮ್ದೇನೋ ಹಿಂಗಿದೆ ಬಿಜೆಪಿಯವರದ್ದು ಹೆಂಗಿದೆ??.ಬಿಜೆಪಿಯಲ್ಲಿ ಒಬ್ಬ ರಾಜ್ಯಾಧ್ಯಕ್ಷನನ್ನ ಮಾಡುವುದಕ್ಕೆ ಆಗಲಿಲ್ಲ. ಯಡಿಯೂರಪ್ಪ ಒಂದು ಬಣ, ಯತ್ನಾಳ್ ಒಂದು ಬಣ, ರಮೇಶ್ ಜಾರಕಿಹೊಳಿ ಇನ್ನೊಂದು ಬಣ.ಒಬ್ಬೊಬ್ಬರದು ಒಂದೊಂದು ಬಣ. ನಿಮ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಮ್ಮ ತಟ್ಟೆಯ ನೊಣ ನೋಡುವುದಕ್ಕೆ ಯಾಕೆ ಬರ್ತೀರಾ??. ಈ ದೇಶವನ್ನೇ ಆಳ್ತಿರೋ ಪಕ್ಷಕ್ಕೆ ಒಬ್ಬ ರಾಜ್ಯಾಧ್ಯಕ್ಷನನ್ನೇ ಮಾಡುವುದಕ್ಕಾಗ್ಲಿಲ್ಲ ಅಂದ್ರೆ ಇನ್ನು ನಾವು ವಿರೋಧ ಪಕ್ಷದಲ್ಲಿ ರವರು ನಾವೇನ್ ಮಾಡೋದಕ್ಕೆ ಸಾಧ್ಯ? ..ಎಲ್ಲ ಪಕ್ಷದಲ್ಲೂ ಸಣ್ಣಪುಟ್ಟ ನ್ಯೂನ್ಯತೆಗಳು ಇರುತ್ತವೆ.ಇದೇ ವಿಚಾರ ದೊಡ್ಡದಾಗಬಾರದು ಎಂದು ಹೈಕಮಾಂಡ್ಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹೈಕಮಾಂಡ್ ಏನಾದ್ರೂ ತೀರ್ಮಾನ ಮಾಡಲಿ ಶಾಸಕರು ಒಪ್ಪಿಕೊಳ್ಳುತ್ತೇವೆ.ಇದು ಚರ್ಚೆ ಆಗದ ಹಾಗೆ ನಿಲ್ಲಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದೊಂದು ಚರ್ಚೆ ಆಗಬಾರದು ಮುಂದೆ .ಇದಕ್ಕೊಂದು ಅಂತಿಮ ರೂಪ ಕೊಡಿ ಅಂತ ಕೇಳಿಕೊಳ್ಳುತ್ತಿದ್ದೇವೆ.ಹೈಕಮಾಂಡ್ ಬೇರೆ ಬೇರೆ ಸಮಸ್ಯೆಗಳಲ್ಲಿ ಬೇರೆ ಬೇರೆ ವಿಚಾರಗಳಲ್ಲಿ ಬಿಜಿಯಾಗಿದ್ದಾರೆ.ಅದರ ಮಧ್ಯೆ ಇಲ್ಲಿಯ ವಿಷಯಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ.ಬೇರೆ ಬೇರೆ ರಾಜ್ಯಗಳಲ್ಲೂ ಚುನಾವಣೆ ಇದೆ.ಹೀಗಾಗಿ ಹೈಕಮಾಂಡ್ ಅಲ್ಲಿ ಗಮನ ಹರಿಸಿದೆ. ಬೇರೆ ಬೇರೆ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಇಲ್ಲಿಯ ವಿಷಯ ಬಗೆಹರಿಯಬಹುದು.ಈ ಗೊಂದಲ ಶುರುವಾಗಿ ಮೂರ್ನಾಲ್ಕು ತಿಂಗಳು ಆಗುತ್ತಿದೆ. ಅಸ್ಸಾಂ ಕೇರಳ ಚುನಾವಣೆ ಮುಗಿದ ಮೇಲೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಇದಕ್ಕೊಂದು ಅಂತಿಮ ರೂಪ ಎಳೆಯಬಹುದು.ಬೇರೆ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಇದಕ್ಕೊಂದು ಇತಿಶ್ರೀ ಹಾಡಬಹುದು.ಏಪ್ರಿಲ್ ಮೇ ಚುನಾವಣೆ ವರೆಗೂ ಕೂಡ ಬಹುಶಃ ಇದಕ್ಕೊಂದು ಅಂತಿಮ ರೂಪ ಕಾಣಲ್ಲ ಎಂದು ಭಾವಿಸಿದ್ದೇನೆ.ಆಮೇಲೆ ಮಧ್ಯ ಪ್ರವೇಶ ಮಾಡಬಹುದು. ಐದು ರಾಜ್ಯಗಳ ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ಒಂದು ತೀರ್ಮಾನ ಮಾಡಬಹುದು ಎಂದು ತಿಳಿಸಿದ್ದಾರೆ.











