ನವದೆಹಲಿ : ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯ ಕಾವು ತಡೆಯಲಾರದೇ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ನಿನ್ನೆ ಶೇಖ್ ಹಸೀನಾ ಅವರು ರಾಜೀನಾಮೆಯನ್ನು ಸಲ್ಲಿಸಿದ್ದರು. ರಾಜೀನಾಮೆಯನ್ನು ಸಲ್ಲಿಸಿದ ಬಳಿಕ ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿದ್ದರು. ರಾಜೀನಮೆ ನೀಡಿದ ಕೆಲವೇ ಹೊತ್ತಲ್ಲಿ ಶೇಖ್ ಹಸೀನಾರ ಸಿ -130 ಸಾರಿಗೆ ವಿಮಾನದ ಮೂಲಕ ಸೋಮವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಗೆ ಆಗಮಿಸಿದ್ದರು.
ಇಂದು ಬೆಳಗ್ಗೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು 9 ಗಂಟೆ ವೇಳೆಗೆ ಹೆಲಿಕಾಪ್ಟರ್ ಮೂಲಕ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಹೆಲಿಕಾಪ್ಟರ್ ಒಂದು ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯಿಂದ ಹೊರಟು ಹೋಗಿದೆ. ಆದರೆ ಈ ಹೆಲಿಕಾಫ್ಟರ್ ಎಲ್ಲಿಗೆ ತೆರಳಿದೆ. ಅದರಲ್ಲಿ ಶೇಖ್ ಹಸೀನಾ ಇದ್ದರೋ ಇಲ್ಲವೋ ಅನ್ನೋ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಶೇಖ್ ಹಸೀನಾ ಭಾರತಕ್ಕೆ ಬರುತ್ತಿದ್ದಂತೆ ಅತ್ತ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಅಪಾಯದ ಮುನ್ಸೂಟನೆ ಅರಿತೇ ಶೇಖ್ ಹಸೀನಾ ಭಾರತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಶೇಖ್ ಹಸೀನಾ ಭಾರತಕ್ಕೆ ಬರುತ್ತಿದ್ದಂತೆ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದಾರೆ. ನುಗ್ಗಿದ್ದಲ್ಲದೇ ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿದ್ದಾರೆ. ಅಲ್ಲದೇ ಹಾನಿಗೀಡು ಮಾಡಿದ್ದಾರೆ.
ಶೇಖ್ ಹಸೀನಾ ಅವರ ಗಾನಾಭವನ ನಿವಾಸದ ಒಳಗೆ ನುಗ್ಗಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡಾಡಿದ ಪ್ರತಿಭಟನಾಕಾರರು ಅವರ ಮನೆಯಲ್ಲಿದ್ದ ದುಬಾರಿ ಬೆಲೆಯ ವಸ್ತುಗಳನ್ನು ದೋಚಿದ್ದು ಮಾತ್ರವಲ್ಲೇ ಅವರ ಸೀರೆ, ಇತರೆ ಉಡುಪುಗಳು ಅಷ್ಟೇ ಯಾಕೆ ಒಳ ಉಡುಪುಗಳನ್ನು ಬಿಡದೇ ಕೊಂಡೊಯ್ದಿದ್ದಾರೆ ಎನ್ನನಾಗಿದೆ. ಅಲ್ಲದೇ ಒಳಉಡುಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಅವುಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಸದ್ಯ ಆ ಫೋಟೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಅಡುಗೆ ಮನೆಯನ್ನೂ ಬಿಡದ ಪ್ರತಿಭಟನಾಕಾರರು ಅಲ್ಲಿದ್ದ ಹಸಿ ಮೀನು, ಬಾತುಕೋಳಿ, ಕೋಳಿಯನ್ನು ಕದ್ದು ಊಟ ಮಾಡಿ ಮಜಾ ಮಾಡಿದ್ದಾರೆ.ಅಲ್ಲದೇ ಶೇಖ್ ಹಸೀನಾ ಅವರ ಬೆಡ್ ರೂಂನಲ್ಲಿ ಮಲಗಿದ್ದಾರೆ ಎನ್ನಲಾಗಿದೆ.