ಮನೆ Latest News ಅರಣ್ಯ ಅಪರಾಧ ತಡೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಗರುಡಾಕ್ಷಿ ತಂತ್ರಾಂಶ ಬಿಡುಗಡೆ

ಅರಣ್ಯ ಅಪರಾಧ ತಡೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಗರುಡಾಕ್ಷಿ ತಂತ್ರಾಂಶ ಬಿಡುಗಡೆ

0

ಬೆಂಗಳೂರು; ಅರಣ್ಯ ಅಪರಾಧ ತಡೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಗರುಡಾಕ್ಷಿ ತಂತ್ರಾಂಶ ಬಿಡುಗಡೆ ಮಾಡಲಾಗಿದೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗರುಡಾಕ್ಷಿ ತಂತ್ರಾಂಶ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇದು ಅರಣ್ಯ ಅಪರಾಧ ಪ್ರಕರಣಗಳ ನಿರ್ವಹಣೆಗೆ ಆನ್ ಲೈನ್ ವೇದಿಕೆ ಎಂದರು. ಇವತ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಕೆಲ ಸುಧಾರಣೆ ತರ್ತಿದ್ದೇವೆ. ದಿನದಿಂದ ದಿನಕ್ಕೆ ಅರಣ್ಯ ಅಪರಾಧಗಳು ಹೆಚ್ಚಾಗ್ತಿದೆ. ಭೂಮಿ ಬೆಲೆ ಜಾಸ್ತಿ ಆಗ್ತಿರೋದ್ರಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಒತ್ತುವರಿಗಳು ಜಾಸ್ತಿ ಆಗ್ತಿವೆ, ನಾವು ಕೂಡ ತೆರವು ಮಾಡ್ತಿದ್ದೇವೆ. ಒಂದೇ ಒಂದು ಇಂಚು ಕೂಡ ಒತ್ತುವರಿ ಬಿಡಬಾರದು ಅಂತ ನಿರ್ಧರಿಸಿದ್ದೇವೆ. ಅರಣ್ಯ ಅಪರಾಧ ತಡೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಗರುಡಾಕ್ಷಿ ಆನ್ ಲೈನ್ ತಂದಿದ್ದೇವೆ. ಎಫ್ ಐಆರ್ ದಾಖಲಿಸಲು ಕೂಡ ಅನುಕೂಲವಾಗಲಿದೆ. ಕುಳಿತಲ್ಲಿಯೇ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಬೆಂಗಳೂರು ವಿಭಾಗ, ಶಿರಸಿ, ಮಲೆಮಹದೇಶ್ವರ ವಿಭಾಗದಲ್ಲಿ ಜಾರಿಯಾಗಲಿದೆ ಎಂದ ಅವರು  ನಾವೆಲ್ಲರೂ ಆಧುನಿಕ ಯುಗದಲ್ಲಿದ್ದೇವೆ. ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಇದರಂತೆ ನಮ್ಮ‌ ಇಲಾಖೆಯೂ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಅರಣ್ಯ ಇಲಾಖೆಯ ಒತ್ತುವರಿ ಪ್ರಕರಣಗಳು ದಾಖಲಾಗುತ್ತಿರುತ್ತೆ. ಒತ್ತುವರಿ ತೆರವುಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಮೀಟಿಂಗ್ ಬಗ್ಗೆ ಮಾತನಾಡಿ ಹೊಸ ವರ್ಷದ ಖುಷಿಗೆ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಡಿನ್ನರ್ ಮೀಟಿಂಗ್ ನ ಖುಷಿಯಿಂದ ಕರೆಯುತ್ತೇವೆ. ದಿನವೂ ಮಾಡ್ತೇವೆ, ಇದರಲ್ಲಿ ತಪ್ಪೇನಿದೆ?. ಪ್ರತಿಯೊಂದಕ್ಕೂ ಮೋಟಿವೇಟ್ ಮಾಡಿದ್ರೆ ಹೇಗೆ ?. ನಾನೂ ಡಿನ್ನರ್ ಮೀಟಿಂಗ್ ಕರೆಯುತ್ತೇನೆ. ನಿಮಗೂ ಆಹ್ವಾನ ನೀಡುತ್ತೇನೆ ಎಂದು ವ್ಯಂಗ್ಯವಾಡಿದ್ರು. ಮುಂದಿನ ಸಂಪುಟದಲ್ಲಿ ಜಾತಿ ಜನಗಣತಿ ವರದಿ ಮಂಡನೆ ವಿಚಾರದ ಬಗ್ಗೆ ಮಾತನಾಡಿ ನಮ್ಮ ಸರ್ಕಾರವೇ ಆದೇಶ ಮಾಡಿತ್ತು. ಈಗ ವರದಿ ಕ್ಯಾಬಿನೆಟ್ ನಲ್ಲಿ ಮಂಡನೆ ಆಗಲಿದೆ. ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡ್ತೇವೆ. ಯಾವ ಸಮುದಾಯಕ್ಕೂ ಅನ್ಯಾಯ ಆಗದ ರೀತಿಯಲ್ಲಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ಬಂಡಿಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಮಾತನಾಡಿ ತುರ್ತು ಸಂದರ್ಭಗಳಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಇದೆ. ರಾತ್ರಿ 9ರ ಬಳಿಕವೂ ನಿರ್ದಿಷ್ಟ ಬಸ್ ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ .ಎಲ್ಲಾ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡುವ ಪ್ರಸ್ತಾಪ ಇಲ್ಲ .ಈ ಬಗ್ಗೆ ನಮ್ಮ ನಾಯಕರಿಗೆ ಏನಾದರೂ ಮಾಹಿತಿ ಅಗತ್ಯವಿದ್ದರೆ ಮನವರಿಕೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ರು.