ಮನೆ Latest News ಜಾತಿ‌ಗಣತಿ ಅನುಷ್ಠಾನಕ್ಕೆ ಬಿ.ಕೆ. ಹರಿಪ್ರಸಾದ್ ಒತ್ತಾಯ ; ಹರಿಪ್ರಸಾದ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು

ಜಾತಿ‌ಗಣತಿ ಅನುಷ್ಠಾನಕ್ಕೆ ಬಿ.ಕೆ. ಹರಿಪ್ರಸಾದ್ ಒತ್ತಾಯ ; ಹರಿಪ್ರಸಾದ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು

0

ಬೆಂಗಳೂರು: ಸರ್ಕಾರ ಬಿದ್ರೆ ಬಿಳಲಿ ಯಾಕೆ ಹೆದರಬೇಕು, ಜಾತಿ ಜನಗಣತಿ ಜಾರಿಗೆ ಬರಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.

ಜಾತಿ ಜನಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ.ಆದ್ರೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ?.ಮೊದಲು ಜಾತಿ ಗಣತಿ ಜಾರಿ ‌ಮಾಡಲಿ.ಎಲ್ಲ ಸಮುದಾಯಕ್ಕೆ ಅನುಕೂಲ ಇದೆ.ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ ಎಂದು ಬಿ ಕೆ ಹರಿಪ್ರಸಾದ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ, ಪ್ರಣಾಳಿಕೆ ಬಗ್ಗೆ ಗೌರವ ಇರುವವರು ಬೆಂಬಲ ಕೊಡಬೇಕು.ಕಾಂಗ್ರೆಸ್ ಪಕ್ಷದ ಪ್ರಣಾಳಿಯಲ್ಲಿ ಜಾತಿಗಣತಿ ಜಾರಿ ಬಗ್ಗೆ ಹೇಳಿದ್ದಾರೆ.ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಹೇಳಿದ್ರು.ರಾಹುಲ್ ಗಾಂಧಿ ಹೇಳಿದ್ರು ಪ್ರಪಂಚ ಬಿದ್ರು ಜಾತಿಗಣತಿ ಜಾರಿಯಾಗಬೇಕು ಅಂತಾ ಹೇಳಿದ್ದಾರೆ. ಪ್ರಪಂಚ ತಲೆ ಕೆಳಗಾಗಲಿ ಜಾತಿ ಜನಗಣತಿ ಜಾರಿಗೆ ತರಬೇಕು. ಸರ್ಕಾರ ಬಿದ್ರೆ ಬೀಳಲಿ ಯಾಕೆ ಹೆದರಬೇಕು.ಸರ್ಕಾರಕ್ಕೆ ಕಂಟಕ ಎದುರಾದ್ರೆ ಆಗಲಿ ಜಾತಿ ಜನಗಣತಿ ತರಬೇಕು.ನಮ್ಮ ಸರ್ಕಾರ ಬಂದಿರೋದು ಅಧಿಕಾರ ಅನುಭವಿಸುವುದಕ್ಕಲ್ಲ.ಕಾಂಗ್ರೆಸ್ ಪ್ರಣಾಳಿಕೆ ಓದಿದವರು, ಕಾಂಗ್ರೆಸ್ ಪ್ರಣಾಳಿಕೆ ಮೇಲೆ ನಂಬಿಕೆ ಇರುವವರು ಜಾತಿ ಜನಗಣತಿ ಬೆಂಬಲಿಸಲಿ.

ಇನ್ನು ಜಾತಿ‌ಗಣತಿ ಅನುಷ್ಠಾನಕ್ಕೆ ಬಿ.ಕೆ. ಹರಿಪ್ರಸಾದ್ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ  ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದಿನ ಅಧಿಕಾರ ಅವಧಿಯಲ್ಲಿ ಜಾತಿಗಣತಿ ಮಾಡಿಸಿದ್ರು.ಈಗ ಅವರ ಅವಧಿಯಲ್ಲಿ ಯಾಕೆ ಅನುಷ್ಠಾನಕ್ಕೆ ತರ್ತಿಲ್ಲ. ಇದನ್ನ ನಾನು ಹೇಳ್ತಿಲ್ಲ ಅವರ ಪಕ್ಕದಲ್ಲಿ ಹೇಳ್ತಿದ್ದಾರೆ.ಬಾಲಕೃಷ್ಣ, ಡಿಕೆ ಸುರೇಶ್ ಅನೇಕರು ಹೇಳ್ತಿದ್ದಾರೆ.ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಅವರು ಈಗ ಈ ವಿಚಾರವನ್ನ ಎತ್ತಿದ್ದಾರೆ.ಜಾತಿಗಣತಿಗೆ ಬಿಜೆಪಿಯ ವಿರೋಧ ಇಲ್ಲ.ಇದು ಅವೈಜ್ಞಾನಿಕವಾಗಿ ನಡೆದಿದೆ ಅಂತ ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ.ಶಾಮನೂರು ಶಿವಶಂಕರಪ್ಪ ಅವರು ವಿರೋಧ ಮಾಡಿದ್ದಾರೆ.ಇದು ವೈಜ್ಞಾನಿಕವಾಗಿ ನಡೆಯಬೇಕು ಎಂದಿದ್ದಾರೆ.