ಮನೆ Latest News ಕೋಲಾರದಲ್ಲಿ ಕಾಲೇಜು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಕೋಲಾರದಲ್ಲಿ ಕಾಲೇಜು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

0

ಕೋಲಾರ; ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲದೇ ಪ್ರೀತಿಸಿದವರು ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಜೀವ ತೆಗೆಯುವ ಮಟ್ಟಕ್ಕೂ ಹೋಗುತ್ತಿರೋದು ಆಘಾತಕಾರಿ ಬೆಳವಣಿಗೆ. ಅಂತಹ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇವೆ.ಅದರಲ್ಲೂ ಪ್ರೀತಿ ಹೆಸರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ವಯಸ್ಸಲ್ಲದ ವಯಸ್ಸಿನಲ್ಲಿ ಹೆಣ್ಮಕ್ಕಳು ತಾಯಾಗ್ತಿರೋ ಪ್ರಕರಣಗಳು ಜಾಸ್ತಿಯಾಗ್ತಿವೆ.ಇಂತಹದ್ದೇ ಪ್ರಕರಣಕ್ಕೆ ಚಿನ್ನದ ನಾಡು ಕೋಲಾರ ಸಾಕ್ಷಿಯಾಗಿದೆ.

ನಿಮೆಗೆಲ್ಲಾ ನೆನಪಿರಬಹುದು ಕಳೆದ ವರ್ಷ ಡಿಸೆಂಬರ್ ನಲ್ಲಿ ಅಪ್ರಾಪ್ತ  ಬಾಲಕಿಯೊಬ್ಬಳು ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿತ್ತು. ಬಳಿಕ ಆಕೆಯನ್ನು ಕಲಬುರಗಿಯ ಅಮೂಲ್ಯ ಶಿಶು ಗೃಹಕ್ಕೆ ದಾಖಲಿಸಲಾಗಿತ್ತು. ಬಾಲಕಿ ಗರ್ಭಿಣಿಯಾಗೋದಕ್ಕೆ ಕಾರಣ ಯಾರು ಅಂತಾ ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಗೊತ್ತಾಗಿತ್ತು.  ಆಕೆಯ ಸೋದರ ಸಂಬಂಧಿಯೇ ಕಾರಣ ಅನ್ನೋದು ಬಯಲಾಗಿತ್ತು. ಬಳಿಕ ಆತನನ್ನು ಪತ್ತೆ ಮಾಡಿ ಪೊಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿದ್ದರು.

ಇದೀಗ ಅಂತಹದ್ದೇ ಘಟನೆ ಕೋಲಾರದಲ್ಲಿ ನಡೆದಿದೆ.  ಕೋಲಾರದಲ್ಲಿ  ಪ್ರಥಮ ಪಿಯು ವಿದ್ಯಾರ್ಥಿನಿಯೊಬ್ಬಳು ತಾನು ಓದುತ್ತಿದ್ದ ಕಾಲೇಜಿನ  ಕ್ಯಾಂಪಸ್‌ನಲ್ಲಿರುವ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಕೋಲಾರ ನಗರದ ಹೊರವಲಯದಲ್ಲಿರುವ ಖಾಸಗಿ ಕಾಲೇಜು ಒಂದರಲ್ಲಿ ಈ ಘಟನೆ ನಡೆದಿದೆ.

ಕೋಲಾರ ನಗರದ ಹೊರವಲಯದಲ್ಲಿರುವ ಖಾಸಗಿ ಎಸ್‌.ಎಫ್.ಎಸ್‌. ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿ ಕಾಲೇಜು ಆವರಣದಲ್ಲಿರುವ ಟಾಯ್ಲೆಟ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಮಗುವಿಗೆ ಜನ್ಮ ನೀಡುತ್ತಲೇ  ತಾಯಿ ಹಾಗೂ ಮಗುವನ್ನು  ಆ‌ರ್.ಎಲ್‌. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈಕೆ ಶ್ರೀನಿವಾಸಪುರ ಮೂಲದ ಫಸ್ಟ್ ಪಿ.ಯು.ಸಿ. ವಿದ್ಯಾರ್ಥಿನಿಯಾಗಿದ್ದು, ಆಕೆ ಮುಳಬಾಗಿಲಿನ ಅನಿಲ್‌ ಕುಮಾ‌ರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಇನ್ನು ಈ ಅನಿಲ್ ಕುಮಾ‌ರ್ ಶ್ರೀನಿವಾಸಪುರದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. 2 ವರ್ಷಗಳಿಂದ ಅನಿಲ್  ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅಲ್ಲದೇ ಮದುವೆ ಮಾಡಿಕೊಳ್ಳುವಂತೆ ಒತ್ತಾಯಪಡಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಗೆ ಈಗಷ್ಟೇ 17ನ ವರ್ಷ ಪೂರ್ಣಗೊಂಡಿದೆ.ಹಾಗಾಗಿ ಮದುವೆಯಾಗಲು ಸಾಧ್ಯವಿಲ್ಲ.

 

ಇತ್ತ ಕೋಲಾರ ಮಹಿಳಾ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಹಾಗೂ ಕಾಲೇಜಿಗೆ ಭೇಟಿ ನೀಡಿ ಘಟನೆ ಬಗ್ಗೆ  ಮಾಹಿತಿ ಕಲೆ ಹಾಕಿದ್ದಾರೆ.ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ನೀಡಿದ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿಕೊಂಡಿರುವ ಪೋಲಿಸರು ಅನಿಲ್‌ಕುಮಾರ್‌ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.