ಬೆಂಗಳೂರು; ಕೋವಿಡ್ ಅಕ್ರಮದ ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಡಾ.ಎಂ.ವಿಷ್ಣುಪ್ರಸಾದ್ ಅವರ ದೂರು ಆಧರಿಸಿ FIR ದಾಖಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ, ಐವರು ವೈದ್ಯರು, ಲ್ಯಾಗ್ ಎಕ್ಸ್ಪೋರ್ಟ್ ಕಂಪನಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋವಿಡ್ ಅಕ್ರಮದ ತನಿಖೆಗೆ SIT ರಚನೆಯಾಗುವ ಸಾಧ್ಯತೆ ಎನ್ನಲಾಗಿದೆ. ಪಿಪಿಇ ಕಿಟ್, N-95 ಮಾಸ್ಕ್ ಖರೀದಿಯಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ ಅಕ್ರಮ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಎಫ್ ಐಆರ್ ದಾಖಲಾಗಿದೆ.
ನಿಯಮ ಬಾಹಿರವಾಗಿ ಹೆಚ್ಚುವರಿ ಕಿಟ್ ಖರೀದಿಗೆ ಆದೇಶ ನೀಡಲಾಗಿತ್ತು. ಆದರೆ ಕೋಟ್ಯಂತರ ಹಣ ಸಂದಾಯದ ಬಳಿಕವೂ ಕಿಟ್ ನೀಡಿಲ್ಲ? ಎಂದು ಕಿಟ್ ಸರಬರಾಜು ಮಾಡದಿರುವ ಆರೋಪದಡಿ FIR ದಾಖಲಾಗಿದೆ. ಷಡ್ಯಂತ್ರ ರೂಪಿಸಿ ಜನರ ಹಣ ದುರ್ಬಳಕೆ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಒಟ್ಟು ₹167 ಕೋಟಿಗೂ ಅಧಿಕ ಹಣ ಅಕ್ರಮವೆಸಗಿರುವ ಆರೋಪ ಕೇಳಿ ಬಂದಿದೆ. ಡಾ.ಗಿರೀಶ್, ಜಿ.ಪಿ.ರಘು, .ಮುನಿರಾಜ್, ಲ್ಯಾಗ್ ಎಕ್ಸ್ಪೋರ್ಟ್,ಪ್ರೂಡೆಂಟ್ ಮ್ಯಾನೆಜ್‌ಮೆಂಟ್ ಸಲೂಷನ್ಸ್ ಕಂಪನಿ, ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ.
ಜಸ್ಟಿಸದ ಕುನ್ಹಾ ವರದಿ ಆಧಾರದ ಮೇಲೆ ಹಲವಾರು ರೀತಿಯ ಕ್ರಮ ಆಗೋದು ಅನಿವಾರ್ಯ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಕೋವಿಡ್ ಕುರಿತು ಕುನ್ಹಾ ವರದಿ ಅನ್ವಯ ಎಫ್ ಐಆರ್ ದಾಖಲು ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ದೊಡ್ಡ ಭ್ರಷ್ಟಾಚಾರ ಆಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ.ಕೆಲವು ಕಡೆ ಅನಾವಶ್ಯಕ ವಾಗಿ ಬೆಲೆ ಹೆಚ್ಚು ಕೊಟ್ಟ ಖರೀದಿ ಮಾಡಿದ್ದಾರೆ. ಬೋಗಸ್ ಕಂಪನಿಗೆ ಆರ್ಡರ್ ಕೊಟ್ಟಿದ್ದಾರೆ. ಹೀಗಾಗಿ ಕಾನೂನಿನ ಪ್ರಕಾರ ಏನೂ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳಬೇಕು. ಒಂದೊಂದು ಪ್ರಕರಣ ಒಂದೊಂದು ರೀತಿ ಇದೆ. ಈಗ ಎಫ್ ಐ ಆರ್ ದಾಖಲಾಗಿದೆ. ಕೂಡಲೇ ಎಫ್ ಐಆರ್ ದಾಖಲು ಮಾಡೋದಿದೆ, ಇನ್ನೂ ಕೆಲವು ತನಿಖೆ ಮಾಡಲು ಇದೆ. ಸಾವಿರಾರು ಪುಟಗಳ ವರದಿ ಇದೆ.ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಬೇಕು ಹೀಗಾಗಿ ಎಫ್ ಐಆರ್ ದಾಖಲಾಗಿದೆ ಎಂದಿದ್ದಾರೆ.
ಇನ್ನು ಎಸ್ ಐಟಿ ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಎಸ್ ಐಟಿ ರಚಿಸಬೇಕು ಅಂತಾ ಇದೆ.ಇದರ ಕುರಿತು ಹಿಂದೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಿತ್ತು. ಈಗ ಎಫ್ ಐಆರ್ ಆಗಿದೆ, ನಂತರ ಹೋಮ್ ಡಿಪಾರ್ಟ್ಮೆಂಟ್ ತೀರ್ಮಾನ ಆಗಬೇಕು.ಹಲವಾರು ಎಫ್ ಐಆರ್ ರಿಜಿಸ್ಟರ್ ಆಗೋಕೆ ತಯಾರಾಗುತ್ತದೆ.ಎಲ್ಲಾ ಸೇರಿಸಿ ತನಿಖೆ ಮಾಡೋದಕ್ಕೆ ಸಹಾಯ ವಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಆಹಾರ ಸುರಕ್ಷಿತೆ ಗುಣಮಟ್ಟ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ವಿಲೀನ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ತೀರ್ಮಾನ ತೆಗೆದುಕೊಂಡು, ಆಡಳಿತಾತ್ಮಕ ಜವಾಬ್ದಾರಿ ನೀಡಿದ್ವಿ.ಈಗ ಆದೇಶ ಹೊರಡಿಸಿದ್ದೇವೆ.ಎರಡೂ ನಿಭಾಯಿಸುವ ಅಧಿಕಾರಿಗಳು ಇರಬೇಕು ಅನ್ನೋದು ನಮ್ಮ ಪ್ರಯತ್ನ.ಔಷಧಿ ನಿಯಂತ್ರಣ ಇಲಾಖೆಯಲ್ಲಿ ಪಾರದರ್ಶಕ ವಾಗಿ ಇರಬೇಕು. ಉತ್ತಮ ದರ್ಜೇಗೆ ಏರಿಸಬೇಕಾಗಿದೆ.ಗುಣಮಟ್ಟ, ತಪಾಸಣೆ, ಪರಿವೀಕ್ಷಣೆ ಸೇರಿ ಎಲ್ಲಾ ಪ್ರಯೋಜನೆ ರೀತಿಯಲ್ಲಿ ಆಗಬೇಕು, ಇದು ಮುಖ್ಯ. ಅನೇಕ ಕಂಪ್ಲೆಂಟ್ ಇದೆ, ಹೀಗಾಗಿ ಎರಡೂ ಇಲಾಖೆಯನ್ನ ಜೋಡಿಸಿ, ಆಯುಕ್ತರನ್ನ ನೇಮಕ ಮಾಡಬೇಕು.ಪಾರದರ್ಶಕ ವಾಗಿ ಆಗಬೇಕು ಎಂಬ ಸುಧಾರಣೆ ಯಿಂದ ಇದನ್ನ ಮಾಡಿದ್ದೀವಿ ಎಂದಿದ್ದಾರೆ.
ಕೋವಿಡ್ ಹಗರಣ ಕುರಿತು ಎಫ್ಐಆರ್ ವಿಚಾರ; ಇದು ನಾಟಕ, ಬ್ಲಾಕ್ ಮೇಲ್ ಎಂದ ಶಾಸಕ ಯತ್ನಾಳ್
ಬೆಳಗಾವಿ: ಕೋವಿಡ್ ಹಗರಣ ಕುರಿತು ಎಫ್ಐಆರ್ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಯತ್ನಾಳ್ ಪ್ರತಿಕ್ರಿಯಿಸಿದ್ದು ಇದು ನಾಟಕ, ಬ್ಲಾಕ್ ಮೇಲ್ ಎಂದಿದ್ದಾರೆ.
ಕೋವಿಡ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಅವರು ಕಳ್ಳರು, ಇವರು ಕಳ್ಳರು ಎಂಬ ಅನ್ವರ್ ಮಾಣಿಪ್ಪಾಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಸರ್ಕಾರದ ದಿ ಗ್ರೆಟ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಸಾಹೇಬ್ರ ಬಳಿ ವಿಡಿಯೋ ಸಾಕ್ಷಿ ಇದೆ ಅಂತಾರೆ. ಇದನ್ನು ಬಿಡುಗಡೆ ಮಾಡಲಿ. ಇದರಲ್ಲಿ ಸರ್ಕಾರ. ಭಯ ಪಡಿಸುವ ಹುಚ್ಚು ಸಾಹಸ ಮಾಡುತ್ತಿದೆ ಅಷ್ಟೇ ಎಂದಿದ್ದಾರೆ.