ಮನೆ Latest News ಅತ್ತ ಬೇಲ್ ಗಾಗಿ ಡಿ ಗ್ಯಾಂಗ್ ಸರ್ಕಸ್; ಇತ್ತ ಡಿ ಗ್ಯಾಂಗ್ ಸಿನಿಮಾ ಟೈಟಲ್ ಗಾಗಿ...

ಅತ್ತ ಬೇಲ್ ಗಾಗಿ ಡಿ ಗ್ಯಾಂಗ್ ಸರ್ಕಸ್; ಇತ್ತ ಡಿ ಗ್ಯಾಂಗ್ ಸಿನಿಮಾ ಟೈಟಲ್ ಗಾಗಿ ನಿರ್ಮಾಪಕರು ಪೈಪೋಟಿ

0

ಬೆಂಗಳೂರು; ಚಿತ್ರದುರ್ಗ ಮೂಲದ ತನ್ನ ಅಭಿಮಾನಿ ರೇಣುಕಾಸ್ವಾಮಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಅತ್ತ ದರ್ಶನ್ ಹಾಗೂ ಗ್ಯಾಂಗ್ ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಸರ್ಕಸ್ ನಡೆಸುತ್ತಿದ್ದರೆ ಇತ್ತ ಡಿ ಗ್ಯಾಂಗ್ ನ ಸಿನಿಮಾ ಟೈಟಲ್ ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ.

ಹೌದು.. ಈಗಾಗಲೇ ಡಿ ಗ್ಯಾಂಗ್ ಸಿನಿಮಾ ಟೈಟಲ್ ನೋಂದಣಿ ಮಾಡಿಕೊಳ್ಳಲು  ನಿರ್ಮಾಪಕರು ಟೈಟಲ್ ಮುಗಿ ಬಿದ್ದಿದ್ದರು. ಆದ್ರೇ ಯಾರಿಗೂ ಟೈಟಲ್ ಇದುವರೆಗೂ ನೀಡಿಲ್ಲ. ಈಗ ಖೈದಿ ನಂ.6106 ಟೈಟಲ್ ಗೆ ಇದೇ ರೀತಿ ಫುಲ್ ಪೈಪೋಟಿ ನಡೆಯುತ್ತಿದೆಯಂತೆ. ಇದೇ ಟೈಟಲ್ ಬೇಕು ಅಂತಾ ಭರ್ಜರಿಯಾಗಿಯೇ ಫೈಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಈಗಾಗ್ಲೆ ನಿರ್ದೇಶಕ ರಾಕಿ ಸೋಮ್ಲಿ ಅನ್ನೋ ಡಿ ಗ್ಯಾಂಗ್ ಟೈಟಲ್ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ದರ್ಶನ್ ಪ್ರಕರಣ ಕೋರ್ಟ್ ನಲ್ಲಿರುವ ಕಾರಣ ಈ ಅರ್ಜಿಯನ್ನು ಪೆಂಡಿಂಗ್ ನಲ್ಲಿ ಇರಿಸಲಾಗಿದೆ. ಹಾಗಾಗಿ ಡಿ ಗ್ಯಾಂಗ್ ಟೈಟಲ್ ನೀಡಿಲ್ಲ.

ಇದರ ಬೆನ್ನಲ್ಲೇ ಇದೀಗ ಖೈದಿ ನಂ.6106  ಟೈಟಲ್ ಗಾಗಿ  ಭದ್ರಾವತಿಯ ನಿರ್ಮಾಪಕ ಕುಮಾರ್ ಎಂಬುವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದ್ರೆ ಇದಕ್ಕೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ಕೊಟ್ಟಿಲ್ಲ. ಹೀಗಾಗಿ ಡಿ ಗ್ಯಾಂಗ್, ಹಾಗೂ ಖೈದಿ ನಂ.6106 ಟೈಟಲ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.ಅಲ್ಲದೇ ಯಾರಿಗೆ ಈ ಟೈಟಲ್ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.ಒಟ್ಟಿನಲ್ಲಿ ಮನೆ ಹೊತ್ತಿ ಉರಿಯುತ್ತಿರುವಾಗ ಇನ್ನ್ಯಾರೋ ಬೀಡಿ ಹೊತ್ತಿಸಿಕೊಂಡ್ರಂತೆ ಎಂಬತಾಗಿದೆ ಕಥೆ. ಅತ್ತ ಆರೋಪಿಗಳು ಒಮ್ಮೆ ಈ ಪ್ರಕರಣದಿಂದ ನಮಗೆ ಮುಕ್ತಿ ಸಿಗಲಿ ಅಂತಾ ಯತ್ನಿಸುತ್ತಿದ್ರೆ ಇತ್ತ ನಿರ್ಮಾಪಕರು ಇದೇ ಪ್ರಕರಣದಿಂದ ಸಿನಿಮಾ ಟೈಟಲ್ ತಗೊಂಡು ಸಿನಿಮಾ ಮಾಡಿ ದುಡ್ ಮಾಡೋಣ ಅನ್ನೋ ಪ್ಲ್ಯಾನ್ ನಲ್ಲಿದ್ದಾರೆ.

ಇನ್ನು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಅಭಿಮಾನಿಗಳಿಗೆ ಪತಿ ಪರವಾಗಿ ವಿಜಯಲಕ್ಷ್ಮೀ ಭಾವುಕ ಪತ್ರ ಬರೆದಿದ್ದಾರೆ. ಈ ಪತ್ರದ ಸಾರಾಂಶ ಹೀಗಿದೆ…

ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ.

ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ.

ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ.

ಸತ್ಯಮೇವ ಜಯತೆ!

ಸದ್ಯ ವಿಜಯಲಕ್ಷ್ಮೀ ಅವರು ಅಭಿಮಾನಿಗಳಿಗೆ ಪತ್ರ ಬರೆದಿರೋದು ಅವರಿಗೆ ದರ್ಶನ್ ಅವರೇ ಪತ್ರ ಬರೆದಷ್ಟು ಖುಷಿ ಕೊಟ್ಟಿದ್ದು ನಮ್ಮ ಬಾಸ್ ಸೇಫ್ ಆಗಿ ಹೊರಗೆ ಬರಲಿ ಅಂತಾ ಪ್ರಾರ್ಥಿಸುತ್ತಿದ್ದಾರೆ.