ಮನೆ ಪ್ರಸ್ತುತ ವಿದ್ಯಮಾನ ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ಕೊಡೋದನ್ನು ನಾನು ನಿರೀಕ್ಷೆ ಮಾಡಿದ್ದೆ: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ಕೊಡೋದನ್ನು ನಾನು ನಿರೀಕ್ಷೆ ಮಾಡಿದ್ದೆ: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು;ಮುಡಾ  ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ಕೊಡೋದನ್ನು ನಾನು ನಿರೀಕ್ಷೆ ಯಾವಾಗ ರಾಜ್ಯಪಾಲರು ಆಗಸ್ಟ್ 31 ರಂದು‌ ನೋಟೀಸ್ ಕೊಟ್ರೋ, ಆಗ ನಾನು‌ ನಿರೀಕ್ಷೆ ಮಾಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲಿ ಪಿಟಿಷನ್ ಇದೆ.ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆ ಇದೆ.ನನ್ನ ಮೇಲೆ ಮಾತ್ರ ಶೋಕಾಸ್ ನೋಟೀಸ್ ‌ಕಳುಹಿಸಿದ್ದಾರೆ.ನನಗೆ ‌ಮಾತ್ರ ನೋಟಿಸ್ ಕೊಟ್ಟಿದ್ದಾರೆ.ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ.ಅನೇಕ ರಾಜ್ಯದಲ್ಲಿ ಇದೆ ತರಹ ಮಾಡಿದ್ದಾರೆ.ದಿಲ್ಲಿ, ಜಾರ್ಖಾಂಡ್ ನಲ್ಲಿ ಕೂಡ ಇದೆ ರೀತಿ ಆಗಿದೆ.ಬಿಜೆಪಿ, ಜೆಡಿಎಸ್ ಎಲ್ಲ ಸೇರಿಕೊಂಡಿದ್ದಾರೆ.ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ.ನಾನು ಕಾನೂನು ಹೋರಾಟ ಮಾಡುತ್ತೇವೆ.ಹೈಕಮಾಂಡ್, ಪಕ್ಷ, ಶಾಸಕರು ನನ್ನ ಜೊತೆ ಇದ್ದಾರೆ.ಎಲ್ಲರೂ ನನ್ನ ಜೊತೆಗೆ ಇದ್ದಾರೆ.ನಾನು ರಾಜೀನಾಮೆ ‌ಕೊಡುವ ತಪ್ಪು ಮಾಡಿಲ್ಲ.ಅವರು ಕಾನೂನು ಬಾಹಿರ ಎಂದು ಸಿಎಂ ತಿಳಿಸಿದ್ದಾರೆ

ಇನ್ನು ಇದೇ ವೇಳೆ ಮಾತನಾಡಿದ ಅವರು ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಬಿಜೆಪಿಯ ಕೈಗೊಂಬೆಯಾಗಿದ್ದಾರೆ ರಾಜ್ಯಪಾಲರು.ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಸಚಿವ ಸಂತೋಷ್ ಲಾಡ್ ಈಗ ಬಿಜೆಪಿಯವರು ಸಿದ್ದರಾಮಯ್ಯ ರಾಜೀನಾಮೆ ಕೇಳ್ತಿದ್ದಾರೆ.ಅದು ಸೈಡಿಗೆ ಇಡಿ.ಆದ್ರೆ ರಷ್ಯದಲ್ಲಿ ಯುದ್ದಕ್ಕೆ ನಮ್ ಯುವಕರು ಹೋಗಿದ್ರು.ಯುದ್ಧದಲ್ಲಿ ನಮ್ಮವರು ಪ್ರಾಣ ಬಿಟ್ಟಿದ್ದಾರೆ.ಇದರ ಬಗ್ಗೆ ಯಾರೂ ಕೂಡ ಮಾತಾಡುತ್ತಿಲ್ಲ.ಆದ್ರೆ ಈಗ ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡಿದ್ದಾರೆ, ಈಗ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ.ಈಗ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.ಈಗ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ.ರಾಜ್ಯಪಾಲರು ರಾಜಕೀಯ ಮಾಡೋಕೆ ಬಂದಿದ್ದಾರೆ.. ಇಡಿ, ಸಿಬಿಐ ಒತ್ತಡದಲ್ಲಿವೆ.ಬಡವರಿಗೆ ಹಿಂದುಳಿದ ನಾಯಕರು ೬೦ ಸಾವಿರ ಕೋಟಿ  ಕೊಟ್ಟಿದ್ದಾರೆ.ಇದನ್ನ ಸಹಿಸೋಕೆ ಆಗದೇ ಪ್ರಾಸಿಕ್ಯೂಷನ್ ಗೆ ಕೊಟ್ಟಿದ್ದಾರೆ. ಅದು ಪ್ರೀ ಪ್ಲಾನ್ ಆಗಿ ಮಾತಾಡಿದ್ದಾರೆ, ಅದನ್ನೇ ಮಾಡಿದ್ದಾರೆ.ಇದನ್ನೆಲ್ಲಾ ಮಾಡಿದ್ದಾರೆ.‌ಆದ್ರೆ ರಷ್ಯಾದಲ್ಲಿ ಯುವಕರ ಸಾವಿನ ಬಗ್ಗೆ ಮಾತಾಡುತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಸೈನಿಕರ ಹತ್ಯೆಗೆ ಮಾತಾಡುತ್ತಿಲ್ಲ ಎಂದ್ದಾರೆ.

ವಿಧಾನಸೌಧದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ ಪ್ರಾಸಿಕ್ಯೂಷನ್ ಕೊಟ್ಟರೇ ರಕ್ತ ಕ್ರಾಂತಿ ಯಾಗುತ್ತೆ ಎಂಬ ತಮ್ಮ ಹೇಳಿಕೆ‌ ವಿಚಾರ.ನು ನನ್ಜ ಮಾತಿಗೆ ಬದ್ಧವಾಗದ್ದೇನೆ.ಈಗಲೂ ಕರ್ನಾಟಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ.ಇನ್ನೂ ಮುಂದೆ ಕೂಡ ಕ್ರಾಂತಿ ಆಗಲಿದೆ.ತೆಗೇರಿ ಮುಖ್ಯಮಂತ್ರಿ ಅವರನ್ನ ನೋಡೋಣ.ಸಿಎಂ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಹೈಕಮಾಂಡ್ ಇದೆ.ಹೈಕಮಾಂಡ್ ಏನ್ ಹೇಳುತ್ತದೆ ಅದನ್ನ‌ ಶಾಸಕರು ಸಚಿವರು ಕೇಳಬೇಕು.ಕುಮಾರಸ್ವಾಮಿ ಜೋತಿಷ್ಯ ಯಾವಾಗ ಸೇರಿಕೊಂಡರಾ?.ಕುಮಾರಸ್ವಾಮಿ ಕೇಂದ್ರ ಸಚಿವರು ಜೋತಿಷ್ಯರು ಅಲ್ಲ.ಪ್ರಜೆಗಳು ಪ್ರಭುಗಳು.. ಅವರು  ಏನ್ ಹೇಳ್ತಾರೆ ಅದೇ ಫೈನಲ್ ಎಂದಿದ್ದಾರೆ.

ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯಪಾಲರು ಸರಿಯಾಗಿ ಕಾನೂನು ಪಾಲನೆ ಮಾಡಿಲ್ಲ.ನಮ್ಮ ರಿಜೆಕ್ಷನ್ ಆಪ್ ಅಡ್ವೈಸ್ ಗೂ ಕೂಡ ರಾಜ್ಯಪಾಲರು ಗೌರವ ಕೊಟ್ಟಿಲ್ಲ.ಸುಪ್ರಿಂ ಕೋರ್ಟ್ ನ ೭ ಪೀಠದ ಆದೇಶದ ಬಗ್ಗೆ ನಾವು ತಿಳಿಸಿದ್ದೆವು ಕ್ಯಾಬಿನೆಟ್ ಮೀಟಿಂಗ್ ನಿರ್ಣಯದಲ್ಲಿ ಆದರೂ ಅದಕ್ಕೆ ಅವರು ಮನ್ನಣೆ ನೀಡಿಲ್ಲ.ಇದನ್ನು ನಾವು ಖಂಡನೆ ಮಾಡಲೇಬೇಕಿದೆ.ಸಂವಿಧಾನಕ್ಕೆ ಅಪಮಾನ ಆಗುತ್ತಿದೆ.ರಾಜ್ಯಪಾಲರ ನಿರ್ಣಯವನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.