ಮನೆ Latest News ಶಾಸಕ ಮುನಿರತ್ನ ಜಾತಿ‌ ನಿಂದನೆ ಪ್ರಕರಣ: ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಪ್ರತಿಕ್ರಿಯೆ

ಶಾಸಕ ಮುನಿರತ್ನ ಜಾತಿ‌ ನಿಂದನೆ ಪ್ರಕರಣ: ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಪ್ರತಿಕ್ರಿಯೆ

0

ಶಾಸಕ ಮುನಿರತ್ನ ಜಾತಿ‌ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಮುನಿರತ್ನ ನನಗೆ ಆತ್ಮೀಯ, ಆದರೆ ಪದ ಬಳಕೆ ಸರಿಯಿಲ್ಲ.ನಾನು ಈ ಪ್ರಕರಣವನ್ನ ಗಮನಿಸಿದ್ದೇನೆ.ಮುನಿರತ್ನ ಈ‌ರೀತಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ.ಇದು ನಿಜಕ್ಕೂ ಅಪರಾಧ, ನಾನೂ ಖಂಡಿಸುತ್ತೇನೆ.ಈಗ ದರ್ಶನ್ ಕೇಸ್ ನೋಡಿ. ಆಗಬಾರದಿತ್ತು, ಆಗಿದೆ.ಈ ದರ್ಶನ್ ನಮಗೆ ಬೇಡ, ನಿರೀಕ್ಷೆಯೂ ಮಾಡಿರಲಿಲ್ಲ.ಯಶ್, ದರ್ಶನ್ ಇಬ್ಬರೂ ಮಂಡ್ಯ ಚುನಾವಣೆಗೆ ಬಂದಿದ್ರು.ಆಗ ಜೋಡೆತ್ತು ಅಂತ ಕರೆಯುತ್ತಿದ್ದೆವು.ಡಾ.ವಿಷ್ಣುವರ್ದನ್, ರಾಜ್ ಕುಮಾರ್, ಅಂಬರೀಶ್ ಬಿಟ್ಟರೆ ಯಶ್, ದರ್ಶನ್ ಸಾಕಷ್ಟು ಹೆಸರು ಮಾಡಿದ್ದರು.ಈ ರೀತಿ ಆಗಬಾರದಿತ್ತು ಎಂದಿದ್ದಾರೆ.

ಇನ್ನು ಮುನಿರತ್ನ ಪ್ರಕರಣದಲ್ಲಿ ಒಕ್ಕಲಿಗ ನಾಯಕರಾದ ಕುಮಾರಸ್ವಾಮಿ, ಅಶೋಕ್ ಯಾಕೆ ಮೌನ ಎಂಬ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ದೇವೇಗೌಡರ ಕುಟುಂಬವನ್ನೇ ಮುಗಿಸಬೇಕು ಅಂತಾ ಹೊರಟವರು ಇವರು.ಯಾರು ಒಪ್ಪಲಿ ಬಿಡಲಿ ದೇವೇಗೌಡರು ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕರು.ಅವರಿಗೆ ಮಾನ, ಮರ್ಯಾದೆ ತೆಗೆಯುವಾಗ ಒಕ್ಕಲಿಗತನ ಎಲ್ಲಿ ಹೋಗಿತ್ತು?ಇವರೆಲ್ಲಾ ಒಂದು ರೀತಿ ಗೋಸುಂಬೆಗಳು.ಅವರಿಗೆ ಯಾವಾಗ ಬೇಕೋ ಆಗ ಒಕ್ಕಲಿಗರು.ಅಷ್ಟು ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಸಿದ್ದರಾಮಯ್ಯರನ್ನು ತೆಗೆದು ಒಕ್ಕಲಿಗರನ್ನು ಮಾಡಲಿ.ಬೇಕಾದಷ್ಟು ಜನ ಇದ್ದಾರಲ್ವಾ ಒಕ್ಕಲಿಗ ನಾಯಕರು, ಈಗ ೬ ಜನ ಟವಲ್ ಹಾಕಿದ್ದಾರೆ.ಒಬ್ಬರು ಕಾಂಗ್ರೆಸ್ ನಾಯಕ ನನಗೆ ಸಹಿ ಹಾಕಲು ಪೆನ್ ಕೊಡಿ ಅಂತಾ ಕೇಳಿದ್ದರು.ಪಾಪಾ ಪೆನ್, ಪೇಪರ್ ಹಿಡಿದುಕೊಂಡು ಅಮೆರಿಕಕ್ಕೂ ಹೋಗಿದ್ದಾರೆ.ಅವರು ಕೇಳುತ್ತಲೇ ಇದ್ದಾರೆ, ಅವರು ಒಕ್ಕಲಿಗರಲ್ವಾ?ಪಾಪಾ ಪೆನ್, ಪೇಪರ್ ಹಿಡಿದುಕೊಂಡು ಪರೀಕ್ಷೆ ಬರೆಯಲು ದಿನ ನಿತ್ಯ ಓಡಾಡುತ್ತಲೇ ಇದ್ದಾರೆ.ಯಾಕೆ ಒಕ್ಕಲಿಗರು ಮಾತೇ ಇಲ್ಲ ಅವರ ಬಗ್ಗೆ? ಎಂದು ಪ್ರಶ್ನಿಸಿದ್ದಾರೆ.ಆಗ ನಿಮ್ಮ ನಾಯಕತ್ವ ಗೊತ್ತಾಗೋದು, ಸುಮ್ಮನೆ ಹೋಗಿ ಅರ್ಜಿ ಕೊಟ್ಟರೆ ನಾಯಕತ್ವ ಗೊತ್ತಾಗಲ್ಲ ಎಂದಿದ್ದಾರೆ.

ಯಾರೇ ತಪ್ಪು ಮಾಡಿದರೂ ಕೂಡ ತಪ್ಪೇ ; ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ

ಬೆಂಗಳೂರು; ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.ತನಿಖೆಗೆ ಪೊಲೀಸರು ಬಂಧನ ಮಾಡಿದ್ದಾರೆ.ಯಾರೇ ತಪ್ಪು ಮಾಡಿದರೂ ಕೂಡ ತಪ್ಪೇ.ಮಹಿಳೆಯರಿಗೆ ಅಗೌರವ ನೀಡುವವರನ್ನು ಯಾರೂ ಸಹಿಸಲು ಸಾಧ್ಯವಿಲ್ಲ .ಕೆಲವರಿಂದ ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ.ನಾವ್ಯಾರೂ ಅವನನ್ನು ಬೈಯಿರಿ ಅಂತ ಹೇಳಲಿಲ್ಲ .ನಾವ್ಯಾರೂ ಅವನಿಗೆ ಕಮಿಷನ್ ತೆಗೆದುಕೊಳ್ಳಿ ಅಂತ ಹೇಳಿಲ್ಲ ಎಂದಿದ್ದಾರೆ.

ನಿಮ್ಮ ಜಾತಿಯ ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂಥವರನ್ನು ನೀವು ಯಾವ ರೀತಿ ನೋಡ್ತೀರಿ? ಕಾಂಗ್ರೆಸ್ ನವರೇನಾದ್ರೂ ಮಾಡಿದ್ದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ?ತಪ್ಪು ಮಾಡಿರುವುದು ಒಬ್ಬ ಮಾಜಿ ಮಂತ್ರಿ.ಬಿಜೆಪಿ ಪಕ್ಷ ಇದಕ್ಕೆ ಬೆಂಬಲ ಕೊಡುತ್ತಾರಾ ಎಂದು ಸ್ಪಷ್ಟವಾಗಿ ಹೇಳಲಿ ಎಂದಿದ್ದಾರೆ.

ಇನ್ನು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮುನಿರತ್ನ ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ದ್ವೇಷಕ್ಕೂ ರಾಜಕಾರಣಕ್ಕೂ ಸಂಬಂಧವೇ ಇಲ್ಲ.ಚುನಾವಣೆ ಸೋತ ಮೇಲೆ ನಾನು ಯಾವ ವಿಚಾರಕ್ಕೂ ಬಾಯಿ ಹಾಕುತ್ತಿಲ್ಲ.ನಾನು ಸಿನಿಮಾ ಪ್ರೊಡ್ಯೂಸ್ ಮಾಡಲೂ ಹೋಗಲ್ಲ, ಡೈರೆಕ್ಟ್ ಮಾಡಲೂ ಹೋಗೋದಿಲ್ಲ.ಅದೆಲ್ಲವನ್ನೂ ಬಿಜೆಪಿ-ಜೆಡಿಎಸ್ ಇಬ್ಬರಿಗೆ ಬಿಟ್ಟಿದ್ದೇನೆ.ನಮ್ಮನ್ನು ನೆನೆಸಿಕೊಳ್ಳದಿದ್ದರೆ ರಾಜಕಾರಣದಲ್ಲಿ ಅವರಿಗೆ ರಕ್ಷಣೆ ಸಿಗೋದಿಲ್ಲ .ಡಿಕೆ ಬ್ರದರ್ಸ್ ನ ಟಾರ್ಗೆಟ್ ಮಾಡಬೇಕು ಎಂಬ ಹುನ್ನಾರ, ಅಜೆಂಡಾ ಎಲ್ಲರೂ ಇಟ್ಟುಕೊಂಡಿದ್ದಾರೆ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.