ಬೆಳಗಾವಿ: ಎಲ್ಲರು ಕೂಡಾ ರಾಜಕೀಯ ಪಕ್ಕಕ್ಕೆ ಇಟ್ಟು ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಬರುವ 10 ದಿನಗಳಲ್ಲಿ ಎಲ್ಲರು ಮಾತಾಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗದ ವಿಚಾರದ ಬಗ್ಗೆ ಮಾತನಾಡಿದ ಅವರು ಆಡಳಿತ ಪಕ್ಷ, ವಿಪಕ್ಷದ ಶಾಸಕರು ಸಚಿವರು ಎಲ್ಲರು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಆಗಬೇಕು ಅಂತ ಇದೆ. ಎಲ್ಲರಿಗೂ ಜವಾಬ್ದಾರಿ ಇದೆ. ಎಲ್ಲರಿಗೂ ಒಂದು ಮಾತು ಹೇಳ್ತೀನಿ. ನಮ್ಮ ಭಾಗ ಹಿಂದುಳಿದ ಭಾಗ. ಸಾಕಷ್ಟು ನೀರಾವರಿ ಯೋಜನೆ ಬರುತ್ತದೆ. ನಮಗೆ ಇನ್ನು ಸರ್ಕಾರದ ಅನುದಾನ ಈ ಭಾಗಕ್ಕೆ ಬರಬೇಕು. ಎಲ್ಲರು ಕೂಡಾ ರಾಜಕೀಯ ಪಕ್ಕಕ್ಕೆ ಇಟ್ಟು ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಬರುವ 10 ದಿನಗಳಲ್ಲಿ ಎಲ್ಲರು ಮಾತಾಡಬೇಕು ಎಂದಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು ಎಂಬ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಅಖಂಡ ಕರ್ನಾಟಕದ ಚಿಂತನೆ ನಾವು ಇಟ್ಟುಕೊಂಡಿದ್ದೇವೆ. ಅಖಂಡ ಕರ್ನಾಟಕ ನಮ್ಮ ಹೆಮ್ಮೆ. ಉತ್ತರ, ದಕ್ಷಿಣ ಕರ್ನಾಟಕ ಅನ್ನೋ ಪ್ರಶ್ನೆ ಬರೊಲ್ಲ. ಹಾಗೆ ಮಾತಾಡೋದು ಸರಿಯಲ್ಲ.
ಕಿತ್ತೂರು ಕರ್ನಾಟಕದ ಅಭಿವೃದ್ಧಿ ಕಡೆ ಎಲ್ಲರು ಗಮನ ಹರಿಸೋಣ ಎಂದ ಅವರು ಬಿಜೆಪಿಯಿಂದ ರೈತರ ಜತೆ ಸುವರ್ಣ ಸೌಧಕ್ಕೆ ಮುತ್ತಿಗೆ ವಿಚಾರದ ಬಗ್ಗೆ ಮಾತನಾಡುತ್ತಾ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ರೈತರ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. 11 ತಿಂಗಳು ದೆಹಲಿಯಲ್ಲಿ ಹೋರಾಟ ಆಯ್ತು. 120 ಜನರು ಸತ್ತು ಹೋದ್ರು. ಬಿಜೆಪಿ ಪಕ್ಷದ ಹೋಂ ಮಿನಿಸ್ಟರ್ ಮಗನೇ ರೈತನ ಮೇಲೆ ಕಾರ್ ಹತ್ತಿಸಿದ. ರೈತರ ಹೋರಾಟ ಹತ್ತಿಕ್ಕಿದವರು ಬಿಜೆಪಿ ಅವರು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದವರು ಬಿಜೆಪಿ ಅವರು.
ಮಹದಾಯಿ ಯೋಜನೆ ಆಗಿದೆ ಅಂತ ಚುನಾವಣೆ ಮುಂಚೆ ಪೇಡ ಹಂಚಿದವರು ಬಿಜೆಪಿ ಅವರು.ಇವತ್ತು ಬಿಜೆಪಿ ಅವರು ಮೊಸಳೆ ಕಣ್ಣೀರು ಸುರಿಸಿ ರೈತರ ಪರ ಅಂತ ಹೇಳಿದ್ರೆ ರೈತರು ಅರ್ಥ ಮಾಡಿಕೊಳ್ಳಬೇಕು .
ಯಾರು ರೈತರ ಪರ ಇದ್ದಾರೆ. ಪುಕ್ಕಟ್ಟೆ ವಿದ್ಯುತ್ ಕೊಟ್ಟಿದ್ದು ಯಾರು? ಜೈ ಜವಾನ್, ಜೈ ಕಿಸಾನ್ ಅಂತ ಹೇಳಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ರೈತರ ಬಗ್ಗೆ ಪ್ರಾಮಾಣಿಕವಾಗಿ ಆಸಕ್ತಿ ಇರೋರು ನಾವು. ರೈತರ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡೋದು ಸರಿಯಲ್ಲ. ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂಬ ಶಾಸಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ ಮಂಗಳೂರಿಗೆ ಹೋಗೋವಾಗ ನಾನು, ಸತೀಶ್ ಜಾರಕಿಹೋಳಿ ಸಿಎಂ ಅವರು ಮಾತಾಡಿದ್ದೇವೆ. ಆ ಸಮಯದಲ್ಲಿ ಜಿಲ್ಲೆ ರಚನೆ ಬಗ್ಗೆ ಚರ್ಚೆ ಬಂತು. ಈ ಬಾರಿ ಸ್ಥಳೀಯ ಶಾಸಕರ ಜೊತೆ ಮಾತಾಡಿ ಜಿಲ್ಲೆಯ ಅಭಿವೃದ್ಧಿ ಪರವಾಗಿ ನಿರ್ಧಾರ ಮಾಡಲಾಗುತ್ತದೆ. ಸಿಎಂ ಅವರು ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಮಾತಾಡೋದಾಗಿ ಹೇಳಿದ್ದಾರೆ. ಕೆಲವರು ಪರ, ವಿರೋಧ ಇರ್ತಾರೆ. ಆಡಳಿತ ದೃಷ್ಟಿಯಿಂದ ವಿಭಜನೆ ವಿಚಾರ ಗುಡ್ ನ್ಯೂಸ್ ಅಂತ ಹೇಳಬಹುದು ಎಂದಿದ್ದಾರೆ,










