ಬೆಂಗಳೂರು; ಡಿನ್ನರ್ ಪಾರ್ಟಿ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಡಿನ್ನರ್ ಪಾರ್ಟಿ ರದ್ದು ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇಲ್ಲಿ ಯಾವುದೇ ಕಾಣದ ಕೈಗಳು ಕೆಲಸ ಮಾಡಿಲ್ಲ ಎಂದಿದ್ದಾರೆ.
ಚಿತ್ರದುರ್ಗ ಸಮಾವೇಶದ ಚರ್ಚೆಗೆ ಸಭೆ ಕರೆದಿದ್ವಿ. ಅಲ್ಲಿಯ ಬೇಡಿಕೆ ಬಗ್ಗೆ ಚರ್ಚೆ ಮಾಡುವುದಿತ್ತು. ಸರ್ಕಾರ ಅನೇಕ ಭರವಸೆ ಈಡೇರಿಸಿದೆ. ಆದ್ರೂ ಸ್ಕಾಲರ್ಶಿಪ್ ಕೇಂದ್ರದಿಂದ ಬರ್ತಾ ಇಲ್ಲ. ಈ ಬಗ್ಗೆ ಚರ್ಚೆ ಮಾಡಲು ಸಭೆ ನಿರ್ಧಾರ ಮಾಡಿದ್ವಿ. ನಾವು ದೆಹಲಿಗೆ ಏನು ಹೇಳಿರಲಿಲ್ಲ. ಸುರ್ಜೇವಾಲ ನಮ್ಮ ಉಸ್ತುವಾರಿ ಇದ್ದಾರೆ. ಶಾಸಕರ ಮೀಟಿಂಗ್ ಅಂದಾಗ ಅವರ ಗಮನಕ್ಕೆ ಹೋಗುತ್ತೆ. ನನಗೆ ಕರೆ ಮಾಡಿ ನಾನು ಭಾಗವಹಿಸಬೇಕು ಅಂದ್ರು. ನಾನು ಕೂಡ ಆಹ್ವಾನ ಕೊಟ್ಟೆ. ಮುಂದೆ ಸಮಯ ಕೊಡುತ್ತೇನೆ ಅಂದಿದ್ದಾರೆ. ಅದಕ್ಕೆ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ. ಅವರು ಸಮಯ ಕೊಟ್ಟಾಗ ಸಭೆ ಕರೆಯಲಿದ್ದೇವೆ. ಊಟಕ್ಕೆ ಮೊದಲು ಚರ್ಚೆ ಮಾಡುತ್ತೇವೆ. ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡ್ತಿರಾ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಚಿತ್ರದುರ್ಗದ ಸಮಾವೇಶಲ್ಲಿ ಸುರ್ಜೇವಾಲ ಇದ್ರು. ಅದಕ್ಕೆ ಅವರಿಗಾಗಿ ನಾವು ಕಾಯುತ್ತೇವೆ. ಡಿನ್ನರ್ ಸಭೆಗೆ ಹೈಕಮಾಂಡ್ ವಿರೋಧ ಇಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಸ್ವಲ್ಪ ದಿನ ಕಾಯೋಣ ಎಲ್ಲ ಗೊತ್ತಾಗುತ್ತದೆ. ಸಭೆ ಅವರಿಗೆ ಇಷ್ಟ ಇತ್ತು ಇಲ್ವೋ ಎಲ್ಲ ಗೊತ್ತಾಗಲಿದೆ. ಸ್ವಲ್ಪ ಕಾಯೋಣ ಎಲ್ಲ ಗೊತ್ತಾಗುತ್ತದೆ ಎಂದರು. ಡಿಕೆಶಿ ದೂರು ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ. ಸಭೆಗೆ ಡಿಕೆಶಿ ಅವರನ್ನು ಕರೆಯಬೇಕು ಅಂತ ಇತ್ತು. ಮುಚ್ಚಿಟ್ಟು ಸಭೆ ಮಾಡುವುದು ಏನು ಇಲ್ಲ. ದಲಿತ ಸಮುದಾಯಕ್ಕೆ ಅನೇಕ ಸಮಸ್ಯೆ ಇವೆ. ಆ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.
ಪಾಕಿಸ್ತಾನ ಘೋಷಣೆಗೆ ಚಾರ್ಜ್ ಶೀಟ್ ಹಾಕದ ವಿಚಾರದ ಬಗ್ಗೆ ಮಾತನಾಡಿ ಈ ಬಗ್ಗೆ ಜ್ಞಾಪಿಸಿದ್ದು ಒಳ್ಳೆಯದಾಯ್ತು. ನಾನು ಈ ಬಗ್ಗೆ ವಿಚಾರಿಸಿ ಮಾತನಾಡುತ್ತೇನೆ. ನನ್ನ ಗಮನದಲ್ಲಿ ಇತ್ತು, ಮರೆತು ಬಿಟ್ಟಿದ್ದೆ ಎಂದಿದ್ದಾರೆ. ಡಿಕೆಶಿ ಹೈಕಮಾಂಡ್ ಗೆ ದೂರು ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ಈ ಸಭೆಗೆ ಡಿಕೆಶಿ ಅವರನ್ನೂ ಕರೀಬೇಕು ಅಂತ ಚರ್ಚೆ ಆಗಿತ್ತು. ರಾಜಕಾರಣ ಮಾಡೋದಾದ್ರೆ ಓಪನ್ ಆಗಿಯೇ ಮಾಡ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ. ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಮಾಡಬೇಕಲ್ಲ. ಯಾರೂ ನಮ್ಮ ಸಭೆ ಸಹಿಸೋದಿಲ್ಲ ಅಂತ ಹೇಳಿಲ್ಲ. ಹಾಗೇನಾದ್ರೂ ಯಾತಾದ್ರೂ ನಮ್ಮ ಸಭೆ ಸಹಿಸಲ್ಲ ಅಂದ್ರೆ ಅದಕ್ಕೆ ತಕ್ಕ ಉತ್ತರ ಕೊಡ್ತೇವೆ, ಆ ಶಕ್ತಿ ಇದೆ ನಮಗೆ. ಈ ಸಭೆ ಮುಂದಕ್ಕೆ ಹಾಕಿದೀವಿ. ಮತ್ತೆ ನಿಗದಿ ಆದಾಗ ಹೇಳ್ತೀವಿ.ಏನಾಗಿದೆ ಅಂತ ಎಲ್ಲ ಭಾಗವನ್ನೂ ಹೇಳಲು ಆಗಲ್ಲವಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ.