ಮನೆ Latest News ಆರ್ ಎಸ್ ಎಸ್ ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ;...

ಆರ್ ಎಸ್ ಎಸ್ ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ; ನಮ್ಮ ಇಲಾಖೆಗೆ ಬಂದರೆ ಪರಿಶೀಲನೆ ಮಾಡ್ತೇವೆ ಎಂದ ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು; ಆರ್ ಎಸ್ ಎಸ್  ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಎಲ್ಲವೂ ನಿಮಗೆ ಗೊತ್ತಿದೆಯಲ್ಲ. ನೀವೇ ಹೇಳಿದಂತೆ ಅವರು ಪತ್ರ ಬರೆದಿದ್ದಾರೆ.ಶಾಲೆ,ಸರ್ಕಾರಿ ಜಾಗದಲ್ಲಿ ಬೇಡ ಅಂತ ಹೇಳಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರು ಅದರ ಬಗ್ಗೆ ಚರ್ಚೆ ಮಾಡ್ತಾರೇನೋ. ಸಿಎಸ್ ಅವರು ನಿರ್ಧಾರ ತೆಗೆದುಕೊಳ್ತಾರೆ. ನಮ್ಮ ಇಲಾಖೆಗೆ ಬಂದರೆ ಪರಿಶೀಲನೆ ಮಾಡ್ತೇವೆ. ಅದರ ಸಾಧಕ ಬಾಧಕ ಪರಿಶೀಲನೆ ಮಾಡ್ತೇವೆ. ದೂರು ಬಂದರೆ ಮಾಡಬಹುದು.ವೈಯುಕ್ತಿಕವಾಗಿ ಯಾಕೆ‌ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೆ. ಮೆರವಣಿಗೆ ಬರ್ತಿತ್ತು ಕೈಮುಗಿದೆ. ಅಬ್ಬಕ್ಕನಿಗೆ ಕೈಮುಗಿಯೋದು ತಪ್ಪೇ?. ಅದನ್ನೇ ತಪ್ಪು ಅಂದ್ರೆ ಹೇಗೆ? ಅವತ್ತೇ ಕ್ಲಾರಿಪಿಕೇಶನ್ ಕೊಟ್ಟಿದ್ದೇನೆ. ಇವತ್ತು ನಾನು ಕೊಡ್ತಿದ್ದೇನೆ. ನನಗೆ ಪರ್ಮಿಷನ್ ಕೇಳಿದ್ರೆ ಪೊಲೀಸರು ಕೊಡ್ತಾರೆ. ಸರ್ಕಾರ‌ ಬ್ಯಾನ್ ಮಾಡಿದ್ರೆ ಕೊಡಲ್ಲ. ಇನ್ನೂ ಏನು ಬ್ಯಾನ್ ಆಗಿಲ್ಲವಲ್ಲ. ನಮ್ಮ ಇಲಾಖೆಗೆ ಪಾರ್ವರ್ಡ್ ಮಾಡಬೇಕು. ಆಗ ನಾವು ನೋಡ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಬದಲಾವಣೆ ಹೈಕಮಾಂಡ್ ಆಯ್ಕೆ ಶಾಸಕರ ಆಯ್ಕೆಯಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಶಾಸಕರ ಬಲವೇ ಇಂಪಾರ್ಟೆಂಟ್. ಪಕ್ಷ ಎಲೆಕ್ಟ್  ಆದ್ಮೇಲೆ ಸಿಎಂ ಆಯ್ಕೆಯಾಗುತ್ತೆ. ಶಾಸಕರ ಅಭಿಪ್ರಾಯ ಪಡೆದು ಮಾಡ್ತಾರೆ. ಹೈಕಮಾಂಡ್ ಅಬ್ಸರ್ವರ್ಸ್ ಕಳಿಸುತ್ತೆ. ಅವರು ಶಾಸಕರ ಅಭಿಪ್ರಾಯ ಕೇಳ್ತಾರೆ. ಇಷ್ಟು ಜನ ಈ ರೀತಿ ಹೇಳಿದ್ದಾರೆ. ಉಳಿದವರು ಈರೀತಿ ಹೇಳಿದ್ದಾರೆ ಅಂತ ಹೇಳ್ತಾರೆ. ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಮಾಡಿದ್ದು ಹೀಗೆ. ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಶಾಸಕ ಅಭಿಪ್ರಾಯ ಬೇಡ ಅಂತ  ಹೈಕಮಾಂಡ್ ತೀರ್ಮಾನಿಸಬಹುದು ಎಂದಿದ್ದಾರೆ.

ನೀವು ಸಿಎಂ ಆಸೆ ಇದೆ ಅಂತ ಹೇಳಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಸಹಜವಾಗಿ ನಾನು ಹೇಳಿದ್ದೆನಪ್ಪ. ಎಲ್ಲರೂ ಸಿಎಂ ಆಗಬಹುದು. ಹೈಕಮಾಂಡ್ ಯಾರಿಗೆ ಮಾಡುತ್ತೆ ಜೈ ಅನ್ನುತ್ತೇವೆ. ಬರಿ ಡಿಕೆಶಿ,ಸಿದ್ದು ಹೆಸರಷ್ಟೇ ಇತ್ತೆಂಬ ಪ್ರಶ್ನೆ. ಅವರಿಬ್ಬರು ಪ್ರಂಟ್ ಲೈನ್ ಇದ್ರು. ನಾವು ಸೆಕೆಂಡ್ ಇದ್ದೇವೆ ಅಷ್ಟೇ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಸಚಿವರಿಗೆ ಸಿಎಂ ಡಿನ್ನರ್ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ಮುಖ್ಯಮಂತ್ರಿಗಳು ಊಟಕ್ಕೆ ಕರೆಯುತ್ತಾರೆ. ಅಧಿವೇಶನ ಇದ್ದಾಗಲೂ ಅವರು ಕರೆಯುತ್ತಾರೆ. ಕೆಲವರು ಮಂತ್ರಿಗಳು ಕರೆಯುತ್ತಾರೆ. ಅದೇರೀತಿ ಈಗ ಸಿಎಂ ಕರೆದಿದ್ದಾರೆ. ನಾನು ಹೇಳೋದು ಇದೇನು ದೊಡ್ಡದಲ್ಲ. ಊಟಕ್ಕೂ, ಎರಡೂವರೆ ವರ್ಷಕ್ಕೂ ಸಂಬಂಧವಿಲ್ಲ ಎಂದರು. ಇದೇ ವೇಳೆ ಬಿಹಾರ ಎಲೆಕ್ಷನ್ ಗೆ ಕರೆದಿದ್ದಾರೆಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಲ್ಲಿ ಅಂಗಡಿ ಇಟ್ಟಿರುತ್ತಾರಾ. ಬಿಜೆಪಿಯವರು ಹೇಗೆ ಬೇಕಾದ್ರೂ ಮಾತನಾಡಬಹುದು. ಅವರು ಏನು ಬೇಕಾದ್ರೂ ಮಾತನಾಡಬಹುದು ಎಂದಿದ್ದಾರೆ.