ಮನೆ Latest News ಮೈಕ್ರೋ ಫೈನಾನ್ಸ್ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕಾನೂನು: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

ಮೈಕ್ರೋ ಫೈನಾನ್ಸ್ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕಾನೂನು: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ರಾಜ್ಯ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರಿದ್ದು ಹಲವಡೆ ಜನ ಮನೆ ಮಠ ಬಿಟ್ಟು ಊರು ತೊರೆದಿದ್ದಾರೆ.ಅದೆಷ್ಟೋ ಮಂದಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೆಳಗಾವಿಯಲ್ಲಿ ಒಂದು ತಿಂಗಳ ಬಾಣಂತಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.  ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಫೈನಾನ್ಸ್ ಹಣ ಕಟ್ಟಿಲ್ಲ ಅಂತಾ ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆಯನ್ನ ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಎಂಬ ಫೈನಾನ್ಸ್ ಕಂಪನಿ ಜಪ್ತಿ ಮಾಡಿದೆ.  ಹಾಗಾಗಿ ಇದೀಗ ಮನೆಯವರು ಬೀದಿಗೆ ಬಂದಿದ್ದಾರೆ. ಮನೆಯಲ್ಲಿ ಇದ್ದ ಒಂದು ತಿಂಗಳ ಬಾಣಂತಿಯನ್ನು ಮನೆಯಿಂದ ಆಚೆ ಹಾಕಿದ್ದಾರೆ.

ಹೀಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಸಾಲು ಸಾಲು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕಾನೂನು ಇಬ್ಬರಿಗೂ ಒಂದೇ. ಬ್ಯಾಂಕ್ ನಿಯಮದ ಪ್ರಕಾರ  ರಿಕವರಿ ಮಾಡೋಕೆ ಕಾನೂನು ಇದೆ. ಅವರ ರಕ್ಷಣೆ ಮಾಡೋಕು ಕಾನೂನು ಇದೆ.ಆ ಕಾನೂನು ಕಠಿಣವಾಗಿಲ್ಲ ಅಂತ ವರದಿ ಬಂದಿದೆ. ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡುವ ಅಗತ್ಯ ಇದೆ ಸರ್ಕಾರ ಅದನ್ನ ಮಾಡುತ್ತದೆ. ಈ ಮಧ್ಯೆ ಅರೆಸ್ಮೆಂಟ್ ಆಗ್ತಾ ಇದೆ ಅದನ್ನ ನಿಲ್ಲಿಸಲು ಹೇಳಿದ್ದೇವೆ. ಸಾಲ ವಾಪಸ್ ಕಟ್ಟದೇ ಹೋದ್ರೆ ಹೀಗೆ ಆಗುತ್ತದೆ. ಬ್ಯಾಂಕ್ ಸಾಲ ಪಡೆದಾಗ ಹತ್ತಾರು ಕಡೆ ಸಹಿ ಹಾಕಿಸಿಕೊಳ್ತಾರೆ. ಗ್ರಾಹಕರಿಗೆ ಯಾಕೆ ಸಹಿ ಮಾಡ್ತಾ ಇದ್ದೇವೆ ಅಂತಲೂ ಗೊತ್ತಾಗಲ್ಲ. ಅದು ಕಮಿಟ್ಮೆಂಟ್ ಆಗಿರುತ್ತದೆ. ಆ ಆಧಾರದ ಮೇಲೆಯೇ ಮನೆ ರೈಡ್, ಸೀಜ್ ಮಾಡೋದು ಮಾಡ್ತಾರೆ.ಕಾನೂನಲ್ಲೇ ಇದಕ್ಕೆ ಸೆಲ್ಯುಷನ್ ಕಂಡು ಹಿಡಿಯಬೇಕು. ಈಗಾಗಲೇ ಕಾನೂನು ಸಚಿವರು ಗಮನ ಹರಿಸಿದ್ದಾರೆ. ಈಗಾಗಲೇ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಕಾನೂನು ಕಠಿಣ ಮಾಡ್ತೀವಿ ಸಿಎಂ ಒಂದು ಸಭೆ ಕರೆದಿದ್ದಾರೆ, ಅದರಲ್ಲಿ ಚರ್ಚೆ ಮಾಡ್ತೀವಿ. ಎಷ್ಟು ಕೇಸ್ ಆಗಿದೆ ಅಂತಲೂ ನೋಡ್ತೀವಿ. ಕಾನೂನು ಅಷ್ಟು ಕಠಿಣ ಇಲ್ಲ ಅನ್ನೋದನ್ನೂ ಎಕ್ಸಾಮಿನ್ ಮಾಡ್ತೀವಿ ಎಂದು ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಮುಗಿಸಲು ರಾಮುಲುರನ್ನ ಕಾಂಗ್ರೆಸ್ ಗೆ ಕರೆ ತರ್ತಾರೆ ಅನ್ನೋ ರೆಡ್ಡಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪಕ್ಷದಲ್ಲಿ ಅದರ ಬಗ್ಗೆ ಗಲಾಟೆ ಆಗ್ತಾ ಇದೆ.ನಮ್ಮಲ್ಲಿ ಈ ಬಗ್ಗೆ ಚರ್ಚೆ ಬಂದಿಲ್ಲ.ವಿಚಾರ ಕೂಡ ಪ್ರಸ್ತಾಪ ಆಗಿಲ್ಲ, ಅದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧ್ಯಕ್ಷರು ಉತ್ತರ ಕೊಡ್ತಾರೆ.ಲೋಕಸಭೆ ವೇಳೆ ಚರ್ಚೆ ಅನ್ನೋದೆಲ್ಲಾ ಗೊತ್ತಿಲ್ಲ ಎಂದಿದ್ದಾರೆ.

ಈ ಸರ್ಕಾರ ಬಂದ್ಮೇಲೆ ಮೈಕ್ರೋ ಪೈನಾನ್ಸ್ ಹಾವಳಿ ಹೆಚ್ಚಾಗಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

 

ಬೆಂಗಳೂರು; ಈ ಸರ್ಕಾರ ಬಂದ್ಮೇಲೆ ಮೈಕ್ರೋ ಪೈನಾನ್ಸ್ ಹಾವಳಿ ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ನಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತಿಮಿತಿಯಿಲ್ಲದೆ ಮೈಕ್ರೋ ಫೈನಾನ್ಸ್ ಹಾವಳಿ ನಡೆಯುತ್ತಿದೆ. ಮೈಕ್ರೋ ಫೈನಾನ್ಸ್ ನಿಂದ ಬಡವರಿಗೆ ವಂಚನೆಯಾಗುತ್ತಿದೆ.ಕುಮಾರಸ್ವಾಮಿ ಕಾಲದಲ್ಲಿ ಕಾನೂತ್ಮಕವಾಗಿ ತಿದ್ದುಪಡಿ ತಂದಿದ್ದರು. ಈ ಸರ್ಕಾರ ಬಂದ್ಮೇಲೆ ಮೈಕ್ರೋ ಪೈನಾನ್ಸ್ ಹಾವಳಿ ಹೆಚ್ಚಾಗಿದೆ. ರಾಜ್ಯ ಸರ್ಕಾರದ ನಿಯಮಾವಳಿಯನ್ನ ಗಾಳಿಗೆ ತೂರಿ ಮೈಕ್ರೋ ಫೈನಾನ್ಸ್  ನಡೆದುಕೊಳ್ಳುತ್ತಿದೆ. ಇನ್ನೊಂದು ಕಡೆ ಗ್ಯಾರಂಟಿ ಕೊಟ್ಟಿದ್ದೇವೆ.

ಗ್ಯಾರಂಟಿ ಹಣ 24 ಸಾವಿರ ರೂಪಾಯಿಯಲ್ಲಿ ಕಾರು ಬೈಕ್ ಮತ್ತು ಬೋರ್ ವೆಲ್ ಹಾಕಿಸಿದ್ದಾರಂತೆ ಅಂತ ಬುರುಡೆ ಬಿಡುತ್ತಿದೆ. ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ನಿಂದ ಕಿಡ್ನಿ ಮಾರಿಕೊಂಡ ವರದಿಯಾಗಿದೆ. ಈ ಸರ್ಕಾರ ನಿದ್ದೆ ಮಾಡ್ತಿದ್ಯಾ? ಬದುಕಿದ್ಯಾ ಸತ್ತಿದ್ಯಾ ಅಂತ ಕೇಳಬೇಕಾಗುತ್ತೆ.ಇವರ ಅಧಿಕಾರ ಗುದ್ದಾಟದಲ್ಲಿ ಸರ್ಕಾರ ಜನರ ಬಲಿ ಕೊಡ್ತಿದೆ.ಸರ್ಕಾರದ ಕಾನೂನು ಗಾಳಿ ತೂರಿ ಮೈಕ್ರೋ ಫೈನಾನ್ಸ್ ನಡೆಯುತ್ತಿದೆ. ಮೈಕ್ರೋ ಫೈನಾನ್ಸ್ ಜೊತೆ ಆನ್ ಲೈನ್ ಗೇಮ್ ಹಾವಳಿ ಸಹ ನಡೆಯುತ್ತಿದೆ.ರಾಜ್ಯ ಸರ್ಕಾರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ.ರಾಜ್ಯ ಸರ್ಕಾರದ ನಿರ್ಲಕ್ಷ್ಯ ದಿಂದ ಈ ರೀತಿ ಹಾವಳಿಗಳು ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಈಗಾಗಲೇ ಕಠಿಣ ಕಾನೂನು ಇದೆ ಆದ್ರೆ‌ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?. ಮೈಕ್ರೋ ಫೈನಾನ್ಸ್ ನಿಂದ ತಪ್ಪಾಗಿದೆ ಅಂತ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು.ಮೈಕ್ರೋ ಫೈನಾನ್ಸ್ ಬಗ್ಗೆ ಸರ್ಕಾರ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.ಸಿಎಂ ಸಭೆ ಮಾಡಲು ಇಷ್ಟು ದಿನ ಬೇಕಾಯ್ತಾ?.ಪೊಲೀಸರು ಇಲ್ವಾ ಅಧಿಕಾರಿಗಳು ಇಲ್ವಾ?. ಈಗ ಸಿಎಂ ಸಭೆ ಮಾಡಿ ಕ್ರಮ ಕೈಗೊಳ್ಳೋದಾ?.ಬರೀ ಹೊಗಳಿಕೊಂಡು ಕಾಂಗ್ರೆಸ್ ಒಡಾಡುತ್ತಿದೆ.ಕಿತ್ತೂರು ರಾಣಿ ಚೆನ್ನಮ್ಮಗೆ ಹೊಲಿಕೆ ಮಾಡಿ ಮಾತನಾಡ್ತಾರೆ.ಅವರ ಕಾಲಿನ ಧೂಳಿಗೂ ಸಮವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಡಾ ಹಗರಣ ಲೋಕಾಯುಕ್ತ ಕ್ಲೀನ್ ಚೀಟ್ ವಿಚಾರದ ಬಗ್ಗೆ ಮಾತನಾಡಿ ವೈಟ್ನರ್ ಹಾಕಿದ್ದು ಜನ ನೋಡಿದ್ದಾರೆ.ಸಚಿವರು ಕಡತ ತಗೊಂಡು ಹೋಗಿದ್ದಾರೆ ಎಂಬುದನ್ನು ಜನರು ಕೇಳಿದ್ದಾರೆ.ಆದರೆ ಈಗ ಸಿಎಂಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಮರ್ಡರ್ ಆಗಿದೆ, ಬಾಡಿನೂ ಇದೆ.ಆದರೆ ಪ್ರಶ್ನೆ ಇರುವುದು ಯಾರು ಮರ್ಡರ್ ಮಾಡಿದ್ದಾರೆ ಅಂತ ಪ್ರೂವ್ ಮಾಡಲು ಆಗುತ್ತಿಲ್ಲ.ಸಿಎಂ ನೇರವಾಗಿ ಇದರಲ್ಲಿ ಇರುವುದು ರಾಜ್ಯದ ಜನರಿಗೆ ಗೊತ್ತು. ಇದರಲ್ಲಿ ಬಹಳಷ್ಟು ಜನರು ಭಾಗಿಯಾಗಿದ್ದಾರೆ.ಇದು ಹಗರಣವೇ ಅಲ್ಲ ಅಂದರೆ ಈ ದೇಶದಲ್ಲಿ ಇನ್ನೇನು ಕೂಡ ಅಪರಾಧ ಅಲ್ಲ.ಬೇರೆ ಯಾವುದೇ ಹಗರಣವನ್ನು ಪ್ರೂವ್ ಮಾಡುವುದಕ್ಕೆ ಆಗುವುದಿಲ್ಲ ಅಂತಾಯ್ತು.ಎಸ್ಐಟಿಯನ್ನು ಕ್ಲೀನ್ ಚಿಟ್ ಕೊಡಲು ರಚನೆ ಮಾಡುತ್ತಿದ್ದಾರೆ.ಎಲ್ಲಾ ಸಚಿವರು ಖಾಸಗಿ ಸಂಸ್ಥೆಗಳಂತೆ ಅವರ ಇಲಾಖೆಗಳನ್ನು ಮಾಡುತ್ತಿದ್ದಾರೆ.ಸಿಎಂ ನಿಯಂತ್ರಣ ಮಾಡುತ್ತಿಲ್ಲ, ಸಚಿವರು ತಮಗೆ ಬೇಕಾದ ಹಾಗೆ ಇಲಾಖೆಯನ್ನು ನಡೆಸುತ್ತಿದ್ದಾರೆ.ಮಂತ್ರಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಿದ್ದಾರೆ.ಗುತ್ತಿಗೆಯನ್ನು ತಮ್ಮ ಸಂಬಂಧಿಕರಿಗೆ ಮಾತ್ರ ಕೊಡುತ್ತಿದ್ದಾರೆ.ಗ್ಲೋಬಲ್ ಟೆಂಡರ್ ಮಾಡುವುದನ್ನು ಪ್ಯಾಕೇಜ್ ಗುತ್ತಿಗೆ ಮಾಡಿ ತಮಗೆ ಬೇಕಾದವರಿಗೆ ಕಳುಹಿಸಲಾಗುತ್ತಿದೆ.ಗುತ್ತಿಗೆದಾರರು ಅಲ್ಲದವರು ಈಗ ಗುತ್ತಿಗೆದಾರರಾಗಿದ್ದಾರೆ.ನಾಲ್ಕು ಜನಕ್ಕೆ ಗುತ್ತಿಗೆ ನೀಡುತ್ತಾರೆ.ಅವರ ಅವರ ಸಂಬಂಧಿಕರಿಗೆ ಗುತ್ತಿಗೆ ನೀಡಲಾಗುತ್ತಿದೆ.ಇದು ಲೂಟಿ ಮಾಡುವ ರೀತಿಯಾಗಿದೆ.ಅದರಿಂದ ಸಂಪೂರ್ಣವಾಗಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ.ಅತ್ಯಾಚಾರ ಹೆಚ್ಚಾಗಿದೆ ಕೊಲೆಗಳು ನಡೆಯುತ್ತಿವೆ.ಜನ ವಿರೋಧಿ, ಬಡವರ ವಿರೋಧಿ ಸರ್ಕಾರ ಇದು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಭ್ರಷ್ಟರ ಸಂತೆಯನ್ನು ನಡೆಸುತ್ತಿದ್ದಾರೆ.ಸಿಎಂ ಅವರ ನಾಲ್ಕು ಕಾಲು ಇರುವ ಕುರ್ಚಿ ಈಗ ಎರಡು ಕಾಲಿಗೆ ಬಂದಿದೆ .ಹೀಗಾಗಿ ಸಿಎಂ ವಿಚಲಿತರಾಗಿದ್ದಾರೆ.ಅವರಿಗೆ ನಾನು ಏನು ಮಾತನಾಡಬೇಕು.ಅವರ ಜವಾಬ್ದಾರಿಯನ್ನು ಮರೆತಿದ್ದಾರೆ.ಕಾಂಗ್ರೆಸ್ ಮತ್ತೆ ಬರುತ್ತೆ ಎಂಬುದು ನಮಗೆ ಅನ್ನಿಸುತ್ತಿಲ್ಲ ಎಂದಿದ್ದಾರೆ.