ಮನೆ Latest News ಕಲಬುರ್ಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ವಿಚಾರ; ಸ್ಪಷ್ಟನೆ ನೀಡಿದ ಡಾ‌ ಜಿ ಪರಮೇಶ್ವರ್

ಕಲಬುರ್ಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ವಿಚಾರ; ಸ್ಪಷ್ಟನೆ ನೀಡಿದ ಡಾ‌ ಜಿ ಪರಮೇಶ್ವರ್

0

ಬೆಂಗಳೂರು; ಕಲಬುರ್ಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹಸಚಿವ  ಡಾ‌ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಅದು ಹಳೆ ವೀಡಿಯೋನಾ ಅಂತಾ ಪರಿಶೀಲನೆ ಮಾಡಬೇಕು. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರಾ ಅಂತಾ ಪರಿಶೀಲನೆ ಮಾಡ್ತೇವೆ.ಅದು ನಿನ್ನೆ, ಮೊನ್ನೆ ವೀಡಿಯೋ ಆಗಿದ್ರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಡ್ರಿಂಕ್ ಮಾಡಿದವರನ್ನು ಮನೆಗೆ ಬಿಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲರಿಗೂ ತೆಗೆದುಕೊಂಡು ಹೋಗಿ ಬಿಡಲ್ಲ. ತುಂಬಾ ಕುಡಿದುರವವರನ್ನು, ನಡೆಯಲು ಆಗದಿರುವವರನ್ನು ಅಷ್ಟೇ ಬಿಡುತ್ತೇವೆ. ಪ್ರಜ್ಞೆ ಇರದ ಮಟ್ಟಕ್ಕೆ ಹೋಗಿ ಬಿಡ್ತಾರೆ. ಎಂಜಾಯ್ ಮೆಂಟ್ ನಲ್ಲಿ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ೧೫ ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವರೆಗೂ ಇಟ್ಟುಕೊಂಡು ಕಳಿಸುತ್ತೇವೆ. ವಿಶೇಷವಾಗಿ ಹೆಣ್ಣುಮಕ್ಕಳು, ಆ ಸಂದರ್ಭದಲ್ಲಿ ಯಾವ ತರಹ ಇರ್ತಾರೆ ಅಂತ ಹೇಳಲು ಬರಲ್ಲ.ಪ್ರಜ್ಞೆ ಇರದ ಮಟ್ಟಿಗೆ ಇರ್ತಾರೆ. ಆ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕಾಗಿ ಕ್ರಮ ತೆಗೆದುಕೊಳ್ಳಲು ಮಾಡಿದ್ದೇವೆ. ಬೇರೆಯವರು ಮಿಸ್ ಯೂಸ್ ಮಾಡದ ಹಾಗೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಅದಕ್ಕಾಗಿ 3೦ ಜಿಲ್ಲೆಗಳಲ್ಲಿ ಅಲರ್ಟ್ ಮಾಡಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಅಂತಹ ಆಕ್ಟಿವಿಟಿ ಇರಲ್ಲ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಇಲ್ಲಿ ಆಕ್ಟಿವಿಟಿ ಇರುತ್ತೆ. ಎಂಜಾಯ್ ಮಾಡೋದು, ಬೀದಿಗೆ ಬರೋದು ಇರುತ್ತೆ. ಬಾರ್ ಪಬ್ ಗೆ ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿ ಬಹಳಷ್ಟು ಜನರು ಹೊರಗಿನಿಂದ ಬರ್ತಾರೆ. ಕನ್ನಡಿಗರು ಕಡಿಮೆ ಸಂಖ್ಯೆ, ಹೊರಗಡೆಯಿಂದ ಬರ್ತಾರೆ. ಡ್ರಿಂಕ್ಸ್ ಮಾಡಿ ಎಂಜಾಯ್ ಮಾಡ್ತಾರೆ. ೧೨ ಗಂಟೆ ಆದ  ಮೇಲೆ ಒಬ್ಬರಿಗೊಬ್ಬರು ವಿಶ್ ಮಾಡ್ತಾರೆ. ಆ ಸಂದರ್ಭದಲ್ಲಿ ಹೆಚ್ಚು ಜನರು ಸೇರಿದಾಗ ತಳ್ಳಾಟವಾಗುತ್ತೆ. ಅದಕ್ಕಾಗಿ ಹೆಚ್ಚು ಗಮನಹರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ವಿಚಾರದ ಬಗ್ಗೆ ಮಾತನಾಡಿದ ಅವರು  ಡ್ರಿಂಕ್ ಆ್ಯಂಡ್ ಡ್ರೈವ್ ಗೆ ಅದೆ ರೀತಿಯಲ್ಲಿ ಕೇಸ್ ಇರುತ್ತೆ. ೧೬೦ ಸ್ಪಾಟ್ ಐಡೆಂಟಿಪೈ ಮಾಡಿದ್ದಾರೆ. ಒಂದು ಹಂತದವರೆಗೆ ಅಲಾವ್ ಮಾಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡೋದು ಕಷ್ಟವಾಗಲಿದೆ. ಆಗ ಅಪಘಾತಗಳು ಆಗಲಿವೆ. ಅವರು ಸಾಯ್ತಾರೆ, ಬೇರೆಯವರನ್ನು ಸಾಯಿಸುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದ್ರೆ ಪ್ರಾಣಗಳು ಉಳಿಯಲಿವೆ. ಹೆಚ್ಚು ಜನರು ಸೇರಿದಾಗಬೇರೆ ಆಯಾಮದಲ್ಲಿ ನೋಡಬೇಕಾಗುತ್ತೆ. ಟೆರೆರಿಸ್ಟ್ ಆ್ಯಂಗಲ್ ನಲ್ಲಿ ನೋಡಬೇಕಾಗುತ್ತೆ. ಎಲ್ಲ ಆಯಾಮದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಅವರು ಬಾಡಿ ಕ್ಯಾಮರಾ ಹಾಕಲು ಹೇಳಿದ್ದೇವೆ. ಡೈರೆಕ್ಟ್ ಆಗಿ ಕಮಾಂಡ್ ಸೆಂಟರ್ ಗೆ ಕನೆಕ್ಟ್ ಆಗಿರುತ್ತೆ. ಹೆಚ್ಚಿನ ಪೋರ್ಸ್ ಬೇಕಾದರೆ ಬರುತ್ತೆ ಎಂದಿದ್ದಾರೆ.