ಬೆಂಗಳೂರು; ಪಕ್ಷಕ್ಕೆ ಮುಜುಗರದ ಬಗ್ಗೆ ನನ್ನ ಕೇಳಬೇಡಿ, ಯಾರ ಹತ್ತಿರ ಕೇಳಬೇಕೋ ಅವರಿಗೆ ಕೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜಣ್ಣ ಆರೋಪದ ಬಗ್ಗೆ ಮಾತನಾಡಿದ ಅವರು ಹೋಮ್ ಮಿನಿಸ್ಟರ್ ಇದ್ದಾರೆ, ಸರ್ಕಾರದಲ್ಲಿ ಇದ್ದಾರೆ. ಬಹಳ ಸೀನಿಯರ್ ಮೋಸ್ಟ್ ಲೀಡರ್ ಅವರು. ಅವರಿಗೆ ಎಲ್ಲಾ ಅರಿವಿದೆ, ಅಸೆಂಬ್ಲಿಯಲ್ಲೂ ಹೇಳಿದ್ದಾರೆ. ಸಿಎಂ ಅವರು ಇದ್ದಾರೆ, ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತೇವೆ ಎಂದಿದ್ದಾರೆ. ರಾಜಣ್ಣ ಮತ್ತು ಪಕ್ಷಕ್ಕೆ ನ್ಯಾಯ ಒದಗಿಸಿಕೊಡಬೇಕೋ, ಯಾರಿಗೆ ತೊಂದ್ರೆಯಾಗಿದೆ ಅವರಿಗೆ ನ್ಯಾಯ ಒದಗಿಸೋ ಕೆಲಸ ಹೋಮ್ ಮಿನಿಸ್ಟರ್ ಮಾಡ್ತಾರೆ. ಪಕ್ಷಕ್ಕೆ ಮುಜುಗರದ ಬಗ್ಗೆ ನನ್ನ ಕೇಳಬೇಡಿ, ಯಾರ ಹತ್ತಿರ ಕೇಳಬೇಕೋ ಅವರಿಗೆ ಕೇಳಿ ಎಂದಿದ್ದಾರೆ.
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೇನು ತಲೆ ಕೆಟ್ಟಿದ್ಯಾ?ಯಾರು ಪ್ರಸ್ತಾವನೆ ಮಾಡಿದ್ದಾರೆ ಅವರಿಗೆ ತಲೆ ಕೆಟ್ಟಿದೆ. ನಾನು ಏನ್ ಹೇಳಿದ್ದೀನಿ ಸರಿಯಾಗಿ ನೋಡಬೇಕು. ನಾನು ಹೇಳಿದ್ದು ನೋಡಿ ಬಿಜೆಪಿಯವರ ಕೈಯಲ್ಲಿ ಸಹಿಸಿಕೊಳ್ಳೋಕೆ ಆಗ್ತಿಲ್ಲ. ನನ್ನ ಪೊಲಿಟಿಕಲ್ ಸ್ಟ್ಯಾಂಡ್ ಅವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ.ಅವರುಲ ಪಾರ್ಟಿಯವರು ಹೇಳಿದ್ದು ಸಂವಿಧಾನ ಬದಲಾವಣೆ ಬಗ್ಗೆ. ನಾನು ಎಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದಿದ್ದು ಪ್ರೋ ಮಾಡಿದ್ರೆ ಇವತ್ತೇ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದಿದ್ದಾರೆ.
ಹೋದಲ್ಲಿ ಬಂದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ವಿಚಾರದ ಬಗ್ಗೆ ಮಾತನಾಡಿದ ಅವರು ಅವರಿಗೆ ನನ್ನ ಮೇಲೆ ಪ್ರೀತಿ, ಅದಕ್ಕೆ ಅವರು ಹೇಳ್ತಾರೆ. ನನ್ನ ಸುದ್ದಿ ಎತ್ತಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ, ಅದಕ್ಕೆ ಸುದ್ದಿ ಎತ್ತುತ್ತಾರೆ. ತಮಿಳುನಾಡಲ್ಲಿ ಕಪ್ಪು ಬಾವುಟ ಕಾಣಲಿಲ್ಲ, ಕೇವಲ ನಿಮ್ಮ ಬೈಕ್ ಮಾತ್ರ ಇತ್ತು. ಅವೆಲ್ಲಾ ಸುಳ್ಳು, ಅವರು ಹೇಳಿದ್ದು ಸುಳ್ಳು, ಯಾವುದೇ ಅರ್ಥ ಇಲ್ಲ. ನಾನು ಒಂದೇ ಹೇಳಿದ್ದು, ನಾನು ಅಂದು ಹೇಳಿದ್ದು ಸತ್ಯ ಅಷ್ಟೇ. ನಾನೇ ಇದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ರಕ್ಷಣೆ ಮಾಡೋದೇ ನಾವು ಸುಮ್ನೆ ಪಾರ್ಲಿಮೆಂಟ್ ನಲ್ಲಿ ಗಲಾಟೆ ಮಾಡಿದ್ರೆ ಹೇಗೆ? ನಮ್ಮ ಲೀಡರ್ ಏನ್ ದಡ್ಡರಾ?. ನಮ್ಮ ಲೀಡರ್ಸ್ ನಾನು ಹೇಳಿದ್ದು ನೋಡಿದ್ದಾರೆ. ನೀವು ರಿಪ್ಲೈ ಮಾಡಿ ನೋಡಿ. ನನಗೆ ಹೈಕಮಾಂಡ್ ಕೇಳಿದ್ದಾರೆ, ಗಾಬರಿಯಿಂದ ಕೇಳಿದ್ದಾರೆ.ಆಗ ನಾನು ಅವರಿಗೆ ಏನ್ ಮಾತಾಡಿದ್ದೀನಿ ಅಂತ ವಿವರಿಸಿದ್ದೀನಿ, ಅವರು ನೋಡಿದ್ದಾರೆ ಎಂದರು.
ಪೋನ್ ಟ್ಯಾಪ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಗೊತ್ತಿದ್ದಂಗೆ ನಾನು ಜೈಲಲ್ಲಿದ್ದಾಗ ನಿರ್ಮಲಾನಂದ ಸ್ವಾಮೀಜಿ ಅವರ ಪೊನ್ ಟ್ಯಾಪ್ ಆಗಿದೆ ಎನ್ನೊದನ್ನ ಪೇಪರ್‌ನಲ್ಲಿ ಓದಿದ್ದೆ. ಅದಾದ ಮೇಲೆ ತನಿಖೆ ನಡೀತು. ಸಿಬಿಐ ತನಿಖೆ ಮಾಡಿ ರಿಪೋರ್ಟ್ ಕೊಟ್ಟಿದೆ ಎನ್ತಿದ್ರು. ಮೊದಲು ಬಿಜೆಪಿ ಸರ್ಕಾರದವರು ಸಿಬಿಐ ರಿಪೋರ್ಟ್ ಬಿಡುಗಡೆ ಮಾಡಿಸಲಿ.ಮಿಕ್ಕಿದ್ದೆಲ್ಲ ಆ ಮೇಲೆ ಮಾತಾಡೋಣ ಎಂದ್ರು.











