ಮನೆ Latest News ಡಿಕೆಶಿ ಎಲ್ಲಾ ಸಚಿವರನ್ನ, ಶಾಸಕರನ್ನ ಭೇಟಿಯಾಗಿದ್ದಾರೆ, ಕೊನೆಯವನು ನಾನೇ ಇರಬೇಕು: ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ

ಡಿಕೆಶಿ ಎಲ್ಲಾ ಸಚಿವರನ್ನ, ಶಾಸಕರನ್ನ ಭೇಟಿಯಾಗಿದ್ದಾರೆ, ಕೊನೆಯವನು ನಾನೇ ಇರಬೇಕು: ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ

0

 

ಬೆಂಗಳೂರು: ಡಿಕೆಶಿ ಎಲ್ಲಾ ಸಚಿವರನ್ನ, ಶಾಸಕರನ್ನ ಭೇಟಿಯಾಗಿದ್ದಾರೆ, ಕೊನೆಯವನು ನಾನೇ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. ಸಾಕಷ್ಟು ಬಾರಿ ಅವರು ಭೇಟಿಯಾಗಿದ್ದಾರೆ.ಡಿಕೆ ಸುರೇಶ್ ಹಿಂದೆ ಭೇಟಿಯಾಗಿದ್ದರು. ನಾವು ಅವರ ಮನೆಗೆ ಹೋಗಿ ಬಂದಿದ್ದೇವೆ ಎಂದಿದ್ದಾರೆ.

ಬಾರಿ ಬಾರಿ ಭೇಟಿ ಏನಲ್ಲ.. ಪಕ್ಷದ ಅಧ್ಯಕ್ಷರು ಅನೇಕರ ಬಾರಿ ಭೇಟಿಯಾಗಿದ್ದೇವೆ. ಪಕ್ಷ ಕಚೇರಿಯಲ್ಲಿ ಭೇಟಿಯಾಗಿದ್ದೆವು, ಅವರ ಮನೆಯಲ್ಲಿ ಭೇಟಿಯಾಗಿದ್ದೇವೆ. ಎಲ್ಲರೂ ಒಗ್ಗಟ್ಟನಿಂದ ಇರಬೇಕು,  ಪಕ್ಷದಿಂದ ಒಗ್ಗಟ್ಟಿನಿಂದ ಇರುವುದು ಉದ್ದೇಶ. ಸಿಎಂ ಮಾಡುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡಬೇಕು.  ಪಕ್ಷ ಸಂಘಟನೆ, ಮುಂದಿನ ಎಲೆಕ್ಷನ್ ಬಗ್ಗೆ ಚರ್ಚೆ ಆಗಿದೆ. ಇನ್ನೂ ಸುಮಾರು ಚರ್ಚೆ ಆಗಿದೆ. ಹೈಕಮಾಂಡ್ ಅಳೆದು ತೂಗಿ ನಿರ್ಧಾರ ಮಾಡ್ತಾರೆ.ಪಾರ್ಟಿ ಹೇಳಿದಂತೆ ನಾವು ಕೇಳ್ತೇವೆ. ಅವರಿಗೆ ಆಸೆ ಇರುತ್ತದೆ, ಡೇ ಒನ್ ಇಂದ ಸಿಎಂ ಸ್ಥಾನ ಕ್ಲೇಮ್ ಮಾಡಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನ ಮಾಡಿದೆ‌. ಈಗಲೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಪರ ಇದ್ಯಿಯಾ, ವಿರೋಧ ಇದ್ಯಿಯಾ ಎಂದು ಹೈಕಮಾಂಡ್ ನೋಡಬೇಕು. ಬದಲಾವಣೆ ಪರ್ವ ಏನಿಲ್ಲ, ಸಹಜವಾಗಿ ಡಿಕೆಶಿ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಕೆಲವರನ್ನ ಮನೆಗೆ ಕರೆಸಿ ಭೇಟಿ ಆಗಿದ್ದಾರೆ, ಇನ್ನೂ ಕೆಲವರನ್ನ ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಬದಲಾವಣೆ ಪರ್ವ ಏನಿಲ್ಲ, ಸಹಜವಾಗಿ ಡಿಕೆಶಿ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಕೆಲವರನ್ನ ಮನೆಗೆ ಕರೆಸಿ ಭೇಟಿ ಆಗಿದ್ದಾರೆ, ಇನ್ನೂ ಕೆಲವರನ್ನ ಭೇಟಿ ಮಾಡಿದ್ದಾರೆ ಎಂದಿದ್ದಾರೆ. ಪರಮೇಶ್ವರ್ ಕ್ಲೇಮ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಕ್ಲೇಮ್‌ ಮಾಡುವುದರಲ್ಲಿ ತಪ್ಪೇನಿಲ್ಲ. ಅವರು ಎಂಟು ವರ್ಷ ಅದ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ಅಧ್ಯಕ್ಷರ ಭೇಟಿ ಸಿಮೀತವಾಗಿ ಮಾತಾಡುತ್ತೇನೆ. ಅಂತಹ  ಸನ್ನಿವೇಶ ಬಂದಿಲ್ಲ.ಸನ್ನಿವೇಶ ಬರದೆ ಕೋರ್ಟ್ ಹೋಲಿಸಿಕೊಂಡು, ಕೋರ್ಟ್ ಹಾಕಿಕೊಳ್ಳಲು ಆಗದೆ, ಬಿಚ್ಚಲು ಆಗದೆ ಆಗಬಾರದು ಅಲ್ಲ. ಅದಕ್ಕೆ ಸನ್ನಿವೇಶ ಬಂದಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಯಾವುದೇ ಬದಲಾವಣೆ ಪರ್ವ ಇಲ್ಲ. ಡಿಕೆಶಿ ಸಹಜವಾಗಿ ಎಲ್ಲರನ್ನೂ ಭೇಟಿ ಆಗುತ್ತಿದ್ದಾರೆ. ನನ್ನನ್ನೂ ಕೂಡ ಭೇಟಿ ಮಾಡಿದ್ದಾರೆ ಅಷ್ಟೇ. ಡಿಕೆಶಿಯನ್ನ ಭೇಟಿಯಾದ ತಕ್ಷಣ ನಮ್ಮ ವಿಚಾರಗಳಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ನಾವು ಪಕ್ಷದ ಜೊತೆ ಇರುತ್ತೇವೆ, ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ.ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇವೆ. ಪಕ್ಷದೊಳಗೆ ನಾಯಕತ್ವ ಇದ್ದೇ ಇರುತ್ತದೆ. ನಾವು ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡಿದ್ದೇವೆ.ಹಿಂದೆಯೂ ಅವರ ಜೊತೆ ಇದ್ದೇವೆ ಮುಂದೆಯೂ ಇರುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ ಅಂದಿದ್ದಾರೆ.