ಬೆಂಗಳೂರು: ಸಿದ್ದರಾಮಯ್ಯ ಗೆ ಡಿಕೆ ಸುರೇಶ್ ರಿಮೈಂಡರ್ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ವ್ಯಂಗ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇವತ್ತಿಗೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದೆ.ಕೊಟ್ಟ ಮಾತಿನಂತೆ ಗ್ಯಾರಂಟಿ ಕೊಟ್ಟಿದ್ದಾರೆ.ಅವರು ಏನು ಮಾತು ಕೊಡ್ತಾರೆ ಅದರ ಪ್ರಕಾರ ನಡೆದುಕೊಳ್ತಾರೆ. ಪಕ್ಷದ ವರಿಷ್ಟರು ಸಿಎಂ ಹಾಗೂ ಡಿಸಿಎಂ ಎಲ್ಲವನ್ನೂ ನಿರ್ಧಾರ ಮಾಡ್ತಾರೆ. ಎಲ್ಲರಿಗೂ ಡಿಕೆಶಿ ಸಿಎಂ ಆಗಲಿ ಎಂಬ ಆಸೆ ಇದೆ. ಅವರವರ ಅಭಿಮಾನಿಗಳು ಪೂಜೆ ಹರಕೆ ಎಲ್ಲ ಮಾಡ್ತಾರೆ. ಡಿಕೆಶಿವಕುಮಾರ್ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಆದೇಶ ಕೊಡ್ತಾರೆ ಅದರ ಪ್ರಕಾರ ನಡೆಯುತ್ತಾರೆ. ಸಿಎಂ ಆಗ್ಲಿ ಡಿಸಿಎಂ ಆಗ್ಲಿ ಎಲ್ಲರೂ ಹೈಕಮಾಂಡ್ ಆದೇಶ ಪಾಲನೆ ಮಾಡ್ತಾರೆ. ಡಿ ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ.ಬೇರೆ ಯಾರನ್ನಾದರೂ ಹೈಕಮಾಂಡ್ ತೀರ್ಮಾನಿಸಿದರೆ ಅವರಿಗೂ ಸಹಕಾರ ಕೊಡ್ತಾರೆ ಎಂದಿದ್ದಾರೆ
ಯಾರೇ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಅವರಿಗೆ ಡಿ ಕೆ ಶಿವಕುಮಾರ್ ಸಹಕಾರ ಕೊಡ್ತಾರೆ. ರಿಸೈನ್ ಮಾಡಲ್ಲ ಕೆಪಿಸಿಸಿಗೆ ಅಂತ ಡಿಕೆಶಿ ನಿಮ್ಮ ಹತ್ರ ಏನೂ ಹೇಳಿಲ್ವಲ್ಲ. ಪಕ್ಷದ ಕೆಲಸವನ್ನು ಡಿಕೆಶಿವಕುಮಾರ್ ಏನೆಲ್ಲ ಮಾಡಬೇಕೋ ಮಾಡಿದ್ದಾರೆ. ಕೆಲವರು ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಮಾತನಾಡುತ್ತಿರುತ್ತಾರೆ. ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬುವುದು ಪಕ್ಷದ ಅಧ್ಯಕ್ಷರ ಜವಾಬ್ದಾರಿ. ಡಿ ಕೆ ಶಿವಕುಮಾರ್ ಗೆ ಏನೋ ದಾಖಲೆ ಅವಧಿ ಮಾಡಬೇಕು ಎಂಬುದಿಲ್ಲ. ಡಿಕೆಶಿ ಕನಸು ದಾಖಲೆ ಮಾಡಬೇಕು ಎಂಬುದೇನಿಲ್ಲ. ನಾವು ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂತಂದ್ರೆ ಯಾರಿಗೇ ಆದ್ರೂ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ ಆಗುತ್ತದೆ. ಅವರು ರಾಜಕಾರಣದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದಿದ್ದಾರೆ.
ಇಂದಿರಾ ಗಾಂಧಿ ರಾಜೀವ್ ಗಾಂಧಿ ಸೋನಿಯಾ ಗಾಂಧಿ ಇರಬಹುದು. ರಾಜ್ಯದಲ್ಲಿ ದೇವರಾಜ ಅರಸು ಇರಬಹುದು, ನಿಜಲಿಂಗಪ್ಪ ಇರಬಹುದು, ಎಸ್ ಎಂ ಕೃಷ್ಣ ಎಲ್ಲರೂ ಹೈಕಮಾಂಡ್ ಆಣತಿಯಂತೆಯೇ ಕೆಲಸ ಮಾಡಿದ್ದಾರೆ.ಸರ್ಕಾರ ತರಲಿಕ್ಕೆ ಹಗಲೂ ರಾತ್ರಿಕೆಲಸ ಮಾಡಿರುವುದೇ ಒಂದು ಸಾಧನೆ ಡಿಕೆಶಿಯದ್ದು. ಕಾರ್ಯಕರ್ತರಿಗೆ ಪಕ್ಷ ಅದೋಗತಿಯಲ್ಲಿ ಇದ್ದಾಗ ಜವಾಬ್ದಾರಿ ತೆಗೆದುಕೊಂಡು ಚೈತನ್ಯ ತುಂಬಿದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದಾರೆ. ನಾಡಿನ ಜನರಿಗೆ ಕೊಟ್ಟ ಮಾತಿನಂತೆ ಡಿಕೆಶಿವಕುಮಾರ್ ಆಡಳಿತ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾರೇ ಜನರಿಗೆ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳಬೇಕಾಗಿದ್ದು ಆಡಳಿತ ನಡೆಸುವವರ ಕರ್ತವ್ಯ. ಒಂದು ಪಕ್ಷವಾಗಿ ಕೂಡ ಆ ಕೆಲಸ ಮಾಡಬೇಕು.ಡಿಕೆಶಿವಕುಮಾರ್ ಸಿಎಂ ಯಾವಾಗ ಆಗ್ತಾರೆ ಎಂಬುದು ನಮ್ಮ ನಿಮ್ಮ ನಡುವೆ ಆಗುವ ಚರ್ಚೆ ಅಲ್ಲ. ಅದು ಪಕ್ಷದ ವರಿಷ್ಟರ ತೀರ್ಮಾನ. ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಪಕ್ಷದ ಶಾಸಕರ ಬೆಂಬಲದಿಂದ ಆಡಳಿತ ನಡೆಸುತ್ತಿದ್ದಾರೆ.ಏನೇ ತೀರ್ಮಾನ ಮಾಡುವುದಾದರೂ ವರಿಷ್ಟರು ತೀರ್ಮಾನ ಮಾಡಬೇಕೇ ಹೊರತು ವೈಯಕ್ತಿಕ ತೀರ್ಮಾನ ಇಲ್ಲಿಲ್ಲ. ಅದೃಷ್ಟ ಇದ್ದರೆ ನಮ್ಮಣ್ಣ ಸಿಎಂ ಆಗ್ತಾನೆ. ಶ್ರಮ ಎಲ್ಲರೂ ಹಾಕಿದ್ದಾರೆ. ಡಿ ಕೆ ಶಿವಕುಮಾರ್ ಶ್ರಮ ಹಾಕಿದ್ದಾರೆ ಬೇರೆಯವರೂ ಶ್ರಮ ಹಾಕಿದ್ದಾರೆ. ಒಬ್ಬರು ಮಂತ್ರಿ ಆಗಬೇಕು ಅಂತಾರೆ ಇನ್ನೊಬ್ಬರು ಡಿಸಿಎಂ ಆಗಬೇಕು ಅಂತಾರೆ. ರಾಜಕಾರಣದಲ್ಲಿ ಆಸೆ ಇರುವುದು ತಪ್ಪಲ್ಲ. ಸ್ವಾಭಾವಿಕವಾದ ಮಾತು ಹೊರತು ಬೇರೆ ಉದ್ದೇಶ ಇಲ್ಲ ಎಂದಿದ್ದಾರೆ,
ಶ್ರಮಕ್ಕೆ ಪ್ರತಿಫಲ ಖಂಡಿತವಾಗಿ ಇದೆ. ಅದಕ್ಕೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಒಂದಲ್ಲ ಒಂದು ದಿನ ಡಿಕೆಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಕಾದು ನೋಡಬೇಕು. ಭರವಸೆ ಮೇಲೆಯೇ ನಾವೆಲ್ಲ ಬದುಕುತ್ತಾ ಇರುವುದು. ನಂಬಿಕೆ ಮೇಲೆಯೇ ಇರುವುದು ಎಲ್ಲರೂ. ನನಗೇನಾದರೂ ಒಳ್ಳೆಯದಾಗತ್ತೆ ಎಂದೇ ನೀವೂ ಕೆಲಸ ಮಾಡ್ತಿರೋದು. ವಚನ ಭ್ರಷ್ಟತೆಯ ಬಗ್ಗೆ ಹೈಕಮಾಂಡ್ ಅನ್ನು ಕೇಳಬೇಕು. ನಾನು ಹೈಕಮಾಂಡ್ ಭೇಟಿ ಮಾಡಿದ್ದು ರಾಜಕೀಯ ಕಾರಣಕ್ಕಲ್ಲ. ನ್ಯಾಯಾಲಯದ ಕೇಸ್ ಸಲುವಾಗಿ ನಾನು ದೆಹಲಿಗೆ ಹೋಗಿದ್ದು. ಸಿಎಂ ನಮಗೇನೂ ಹೊಸಬರಲ್ಲ, ಸಿಎಂ ಹಳಬರು.ನಮ್ಮ ಸಿಎಂ ಹತ್ರ ನಾನು ಮಾತಾಡುವುದಕ್ಕೆ ಆತಂಕ ಏನಿದೆ?. ನಾನು ಬಿಜೆಪಿ ಸಿಎಂ ಹತ್ರ ಮಾತಾಡಿದ್ದೀನಾ. ನಮ್ಮ ಸಿಎಂ ಹತ್ರ ನಾನು ಮಾತಾಡಿದ್ದಕ್ಕೆ ಬೇಜಾರು ಯಾಕೆ ಮಾಡ್ಕೋತಿರಿ? ಎಂದು ಪ್ರಶ್ನೆ ಮಾಡಿದ್ದಾರೆ.











