ಬೆಂಗಳೂರು; ಡಿ ಕೆ ಶಿವಕುಮಾರ್ – ಸತೀಶ್ ಜಾರಕಿಹೊಳಿ ಪರ ಸಿಎಂ ಆಗಲಿ ಎಂಬ ಘೋಷಣೆ ವಿಚಾರಕ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು ಅದು ಹೈಕಮಾಂಡ್ ತೀರ್ಮಾನವೆಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ಅವರು ಏನು ತೀರ್ಮಾನ ಮಾಡ್ತಾರೋ ಅದು ಆಗುತ್ತದೆ ಎಂದಿದ್ದಾರೆ. ಇಂದು ನೇತಾಜಿ ಅವರ ೧೨೮ ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಬಳಿಕ ಮಾತನಾಡಿದ ಅವರು ಅವರು ಬಹಳ ಚಿಕ್ಕ ವಯಸ್ಸಿನಲ್ಲಿ ನಿಧನವಾದರು. ದೇಶದ ಮೇಲೆ ಅಭಿಮಾನ ದೇಶಭಕ್ತಿ ಇಟ್ಟುಕೊಂಡಿದ್ದರು. ಐಸಿಎಸ್ ಪಾಸ್ ಮಾಡಿದರು. ಅವರು ಅದಕ್ಕೆ ತ್ಯಾಗ ಮಾಡಿ ಸ್ವತಂತ್ರ ಹೋರಾಟ ಮಾಡಿದರು. ಶಸ್ತ್ರಾಸ್ತ್ರ ಉಪಯೋಗಿಸಿ ಬ್ರಿಟಿಷರನ್ನ ಉಡಿಸೋಕೆ ಮುಂದಾಗಿದ್ದರು ಅವರ ಸಾವಿನ ಬಗ್ಗೆ ಗೊಂದಲ ಇದೆ. ಅವರನ್ನು ಸರ್ಕಾರ ಸ್ಮರಿಸಿಕೊಳ್ಳುತ್ತದೆ. ಅವರು ಪುಷ್ಪಾರ್ಚನೆ ಮಾಡಿದ್ದೇವೆ ಎಂದರು.
ಇದೇ ವೇಳೆ ಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಗೊತ್ತಿಲ್ಲ. ನಮಗೆ ಗೊತ್ತಿಲ್ಲ ರೀ ಎಂದಿದ್ದಾರೆ. ದಾವೋಸ್ ಪ್ರಯಾಣದ ಬಗ್ಗೆ ಮಾತನಾಡಿ ನಾನು ಹೋಗುತ್ತಿಲ್ಲ.. ನಾನು ಹೋಗಬೇಕಾಗಿತ್ತು, ಆದ್ರೆ ಹೋಗ್ತಿಲ್ಲ ಬಜೆಟ್ ಪ್ರಿಪರೇಷನ್ ಇದೆ, ಅದಕ್ಕೆ ನಾನು ಹೋಗ್ತಿಲ್ಲ. ಕಳೆದ ವರ್ಷವೂ ಕೂಡ ನಾನು ಹೋಗಿರಲಿಲ್ಲ. ಈ ವರ್ಷ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ರು. ನಿಗಮ ಮಂಡಳಿಗಳಿಗೆ ಹಣ ಬಿಡುಗಡೆ ಆಗ್ತಿಲ್ಲ ಎಂಬ ವಿಪಕ್ಷ ಆರೋಪದ ಬಗ್ಗೆ ಮಾತನಾಡಿ ಬಿಜೆಪಿ ಮೇಕಿಂಗ್ ಫಾಲ್ಸ್ ಅಲೀಗೇಷನ್. ಪೊಲಿಟಿಕಲ್ ಅಲೀಗೇಷನ್ ಅಷ್ಟೇ ಎಂದಿದ್ದಾರೆ.











