ಬೆಂಗಳೂರು; ವಾಟರ್ ರಿಸೋರ್ಸ್ ಸಂಬಂಧಪಟ್ಟ ಕಾನ್ಫರೆನ್ಸ್ ನಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು, ಬೇರೆ ಬೇರೆ ರಾಜ್ಯದ ಸುಮಾರು 34 ಜನ ಸಚಿವರು, ಐದು ಜನ ಸಿಎಂಗಳು ರಾಜಸ್ಥಾನದ ಉದಯಪುರದಲ್ಲಿ ವಾಟರ್ ರಿಸೋರ್ಸ್ ಸಂಬಂಧಪಟ್ಟ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದೆವು.
ರಾಜ್ಯದ ಅನೇಕ ವಿಚಾರಗಳ ಬಗ್ಗೆ ಅಲ್ಲಿ ಪ್ರಸ್ತಾಪ ಮಾಡಿದೆವು. .ಜಲಶಕ್ತಿ ಮಂತ್ರಿಗಳ ಬಳಿ ಪ್ರತ್ಯೇಕವಾಗಿ ವಿಚಾರ ಮಂಡಿಸಿದೆ. ನಮ್ಮ ರಾಜ್ಯಕ್ಕೆ ಏನೇನು ಹಣ ಬರಬೇಕು ಎಂಬುದನ್ನು ಮಂಡನೆ ಮಾಡಿದೆವು. ನಮಗೆ ಪ್ರತ್ಯೇಕ ಸಮಯ ನೀಡ್ತೇವೆ ಅಂತ ಟೈಂ ಕೊಟ್ಟಿದ್ರು. ಜಲಶಕ್ತಿ ಸಚಿವಾಲಯದ ಎಲ್ಲ ಅಧಿಕಾರಿಗಳನ್ನು ಕರೆಸಿದ್ದರು. ನಾವೆಲ್ಲ ಒಟ್ಟಿಗೆ ಸೇರಿ ಸಭೆ ಮಾಡಿ ಪ್ರಪೋಸಲ್ಸ್ ಗಳನ್ನು ನೀಡಿದೆವು. ನಮ್ಮ ನೋಟ್ ಕೂಡ ನೀಡಿದೆವು. ತುಂಗಭದ್ರಾ ಡ್ಯಾಂ ಸಿಲ್ಟ್ ತುಂಬಿಕೊಂಡು ನಮಗೆ ನೀರು ಕಡಿಮೆ ಆಗ್ತಿದೆ.ನವಿಲೆ ಡ್ಯಾಂ ಮಾಡಬೇಕು ಎಂಬ ಪ್ರಪೋಸಲ್ ಇತ್ತು. ಆಂಧ್ರ ತೆಲಂಗಾಣ ಹಾಗೂ ನಾವು ಪ್ರತ್ಯೇಕ ಸಭೆ ಮಾಡಿ ಕೇಂದ್ರ ಸಚಿವರ ಗಮನಕ್ಕೂ ತಂದೆವು. ಆಂದ್ರ ಸಿಎಂ ಜೊತೆಗೆ ಪ್ರತ್ಯೇಕವಾಗಿ ಫೋನ್ ಮಾಡಿ ಮಾತನಾಡಿದೆ.ಆಂಧ್ರ ಸಿಎಂ ಜೊತೆಗೆ ಚರ್ಚೆ ಮಾಡಬೇಕಿದೆ ಎಂದರು.
ಹಿಂದೆಲ್ಲ ಹೂಳು ತೆಗೆಯುವ ಬಗ್ಗೆ ಪ್ರಸ್ತಾಪ ಇತ್ತು. ೨೪-೨೫ ಟಿಎಂಸಿ ನೀರು ತುಂಬುವಷ್ಟು ಹೂಳಿದೆ. ತಾಂತ್ರಿಕ ತಂಡ ಕೂಡ ನಮಗೆ ಸಲಹೆ ನೀಡಿದೆ. ನಾನೇ ಖುದ್ದಾಗಿ ಹೋಗಿ ಆಂದ್ರದ ಸಿಎಂ ಜೊತೆ ಮಾತಾಡ್ತೇನೆ. ರಾಜ್ಯಾದ್ಯಂತ ೧೧,೧೨೦ ಕೋಟಿ ಪ್ರೊಜೆಕ್ಟ್ ಗಳನ್ನು ಮಾಡ್ತಾ ಇದ್ದೇವೆ. ಚಾನೆಲ್ ಗಳ ಆಟೋಮೆಷನ್ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ.ಹೊಸ ಟೆಕ್ನಾಲಜಿ ಬಳಸಿ ಆಟೋಮೆಷನ್ ಮಾಡ್ತೇವೆ. ಜಲಶಕ್ತಿ ರಾಜ್ಯಸಚಿವ ಸೋಮಣ್ಣ ಗಮನಕ್ಕೂ ಹಲವು ವಿಷಯಗಳನ್ನು ತಂದಿದ್ದೇವೆ. ಮೇಕೆದಾಟು ವಿಷಯದಲ್ಲೂ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ತನ್ನ ನಿಲುವು ತಿಳಿಸಬೇಕು ಎಂದು ಮನವಿ ಮಾಡಿದ್ದೇವೆ. ತಮಿಳುನಾಡಿಗೂ ಬೆನೆಫಿಟ್ ಆಗಬೇಕು ನಮಗೂ ಬೆನಿಫಿಟ್ ಆಗಬೇಕು. ಪೆನ್ನಾರ್ ರಿವರ್ ವಿಚಾರದಲ್ಲೂ ಕೂಡ ಸ್ವಲ್ಪ ಗೊಂದಲ ಇದೆ. ೩೦೦ ಟಿಎಂಸಿ ನೀರು ಪೋಲಾಗಿ ಹೋಗಿದೆ. ಆಲಮಟ್ಟಿ ಡ್ಯಾಂಗೆ ಸಂಬಂಧಿಸಿ ಕೇಂದ್ರವೇ ಗೆಜೆಟ್ ಮಾಡಬೇಕು ಎಂದು ಹೇಳಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಅವರು ಕಳಸಾ ಬಂಡೂರಿ ವಿಚಾರದಲ್ಲೂ ನಮಗೆ ಕ್ಲಿಯರೆನ್ಸ್ ಬೇಕಿದೆ. ಇದಕ್ಕೂ ನಾವು ಕೇಂದ್ರದ ಮೇಲೆ ಒತ್ತಡ ಹಾಕ್ತಿದ್ದೇವೆ ಎಂದರು. ಇನ್ನು ಅಸೆಂಬ್ಲಿ ಟಿಕೆಟ್ ವಂಚಿತ ಸಮುದಾಯಗಳಿಗೆ ಎಂಎಲ್ಸಿ ಮಾಡಿ ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕೆ.ಎನ್.ರಾಜಣ್ಣಗೆ ತಿರುಗೇಟು ಕೊಟ್ರು. ರಾಜಣ್ಣ ನನ್ನ ಬಳಿ ಬಂದು ಮಾತನಾಡಿಲ್ಲ. ಪ್ರೆಸ್ ಮುಂದೆ ಮಾತನಾಡೋರಿಗೆ ನಾನು ಉತ್ತರ ಕೊಡಲ್ಲ.ನನ್ನ ಬಳಿ ಬಂದು ಮಾತನಾಡಿದ್ರೆ ಸಲಹೆ ಕೊಡ್ತೀನಿ ಎಂದರು.
ಇನ್ನು ಬಿಜೆಪಿಯವರ ಜೊತೆ ಯಾವುದೇ ಸಂಪರ್ಕ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪದೇ ಪದೇ ಒತ್ತಿ ಹೇಳಿದ್ದಾರೆ.ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನನ್ನ ಮನೆಗೆ ಬಂದು ಆಹ್ವಾನಿಸಿದ್ದಾರೆ. ನಾನು ಇವತ್ತು ಇಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗ್ತೇನೆ. ಪಾಪ ನಾನು ಇನ್ನೂ ಅಮಿತ್ ಶಾರನ್ನ ಭೇಟಿಯನ್ನೇ ಮಾಡಿಲ್ಲ. ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗೆ ಹತ್ತಿರ ಅಂತ ವೈರಲ್ ಮಾಡ್ತಾವ್ರೆ ಎಂದರು.











